ರಾಜ್ಯದಾದ್ಯಂತ ವೈದ್ಯರ ಮುಷ್ಕರ: ಸಚಿವರಿಗೆ ಮಾಹಿತಿ ಇಲ್ಲವಂತೆ..!

ಬೆಂಗಳೂರು:, ಶುಕ್ರವಾರ, 3 ನವೆಂಬರ್ 2017 (14:01 IST)

ರಾಜ್ಯದಾದ್ಯಂತ ಖಾಸಗಿ ಆಸ್ಪತ್ರೆಗಳ ವೈದ್ಯರು ಮುಷ್ಕರ ನಡೆಸುತ್ತಿದ್ದರೂ ಆರೋಗ್ಯ ಸಚಿವ ರಮೇಶ್ ಕುಮಾರ್ 
ಅವರಿಗೆ ವೈದ್ಯರ ಮುಷ್ಕರದ ಬಗ್ಗೆ ಮಾಹಿತಿ ಇಲ್ಲವಂತೆ. ಖುದ್ದು ಸಚಿವರೇ ಇಂತಹ ಹೇಳಿಕೆ ನೀಡಿರುವುದು ಆಘಾತ ತಂದಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ರಮೇಶ್ ಕುಮಾರ್, ಖಾಸಗಿ ವೈದ್ಯರು ಯಾವ ಕಾರಣಕ್ಕಾಗಿ ಮುಷ್ಕರ 
ಮಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ನಿಮಗೇನಾದರೂ ಗೊತ್ತಿದ್ದರೆ ತಿಳಿಸಿ ಎಂದು ಮಾಧ್ಯಮಗಳಿಗೆ ತಿರುಗೇಟು ನೀಡಿದ್ದಾರೆ.
 
ಪ್ರಜಾಪ್ರಭುತ್ವದಲ್ಲಿ ಮುಷ್ಕರ ನಡೆಸುವುದು ಪ್ರಜೆಗಳ ಹಕ್ಕು. ವೈದ್ಯರಿಗೆ ಮುಷ್ಕರ ನಡೆಸುವ ಹಕ್ಕಿದೆ ನಡೆಸುತ್ತಿದ್ದಾರೆ ಎಂದು 
ಉಡಾಫೆ ಉತ್ತರ ನೀಡಿರುವುದು ಆಶ್ಚರ್ಯ ತಂದಿದೆ ಎಂದು ಮೂಲಗಳು ತಿಳಿಸಿವೆ.
 
 ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರದಿಂದ ಅನೇಕ ರೋಗಿಗಳು ತೊಂದರೆಗೊಳಗಾಗಿದ್ದರೂ 
ಸಚಿವರಿಗೆ ಮಾತ್ರ ಗೊತ್ತಿಲ್ಲದಿರುವುದು ದುರ್ದೈವವೇ ಸರಿ ಎಂದು ರೋಗಿಗಳಉ ಹಿಡಿಶಾಪ ಹಾಕುತ್ತಿದ್ದಾರೆ  ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

`ಇತಿಹಾಸವಿಲ್ಲದೆ ರಾಷ್ಟ್ರಪತಿ ಕೋವಿಂದ್ ಟಿಪ್ಪು ಬಗ್ಗೆ ಮಾತನಾಡಿದ್ದಾರಾ..!?’

ಬೆಂಗಳೂರು: ಟಿಪ್ಪು ಜಯಂತಿ ವೋಟ್ ಬ್ಯಾಂಕ್ ರಾಜಕಾರಣ ಎಂಬ ಅಮಿತ್ ಷಾ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ...

news

ಟಿಪ್ಪು ಜಯಂತಿ ಆಚರಣೆ ವಿಚಾರ: ಹೈಕೋರ್ಟ್ ನಲ್ಲಿಂದು ಪಿಐಎಲ್ ವಿಚಾರಣೆ

ಬೆಂಗಳೂರು: ಸದ್ಯ ರಾಜ್ಯದಲ್ಲಿ ತೀವ್ರ ಚರ್ಚೆ ನಡೆಯುತ್ತಿರುವುದು ಟಿಪ್ಪು ಜಯಂತಿ ಆಚರಣೆ ವಿಚಾರ. ಕಳೆದ ...

news

ಖಾಸಗಿ ವೈದ್ಯರ ಪ್ರತಿಭಟನೆ: ರಾಜ್ಯ ಸರ್ಕಾರಕ್ಕೆ ಬುದ್ಧಿ ಹೇಳ್ತೇನೆ ಎಂದ್ರು ಹೆಚ್ಡಿಕೆ

ಬೆಂಗಳೂರು: ಶಾಸಕ ಚಿಕ್ಕಮಾದು ಅವರ ನಿಧನದಿಂದ ಮುಂದೂಡಿರುವ ಸಮಾವೇಶ ನವೆಂಬರ್ 7 ರಂದು ನಡೆಸುತ್ತೇವೆ ಎಂದು ...

news

ಬಿಜೆಪಿ ಪರಿವರ್ತನಾ ಯಾತ್ರೆಗೆ ಕಾಂಗ್ರೆಸ್ ಕೌಂಟರ್ ಯಾತ್ರೆ

ಬೆಂಗಳೂರು: ಬಿಜೆಪಿಯ ಪರಿವರ್ತನಾ ಯಾತ್ರೆಗೆ ಕೌಂಟರ್ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಜನ ...

Widgets Magazine
Widgets Magazine