ಭೂಗತ ಪಾತಕಿಯಿಂದ ಸಚಿವ ತನ್ವೀರ್ ಸೇಠ್ ಅವರಿಗೆ ಬೆದರಿಕೆ

ಬೆಂಗಳೂರು, ಬುಧವಾರ, 10 ಜನವರಿ 2018 (10:48 IST)

ಪಾತಕಿಯೊಬ್ಬರಿಂದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೆ ಬೆದರಿಕೆ ಒಡ್ಡಲಾಗಿದ್ದು, 10 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಡಲಾಗಿದೆ.

ಹಣ ನೀಡದಿದ್ದರೆ ಕೊಲೆ ಮಾಡಲಾಗುವುದು ಎಂದು ಬೆದರಿಕೆ ಒಡ್ಡಲಾಗಿದೆ ಎಂದು ತನ್ವೀರ್ ಸೇಠ್ ಅವರು ಡಿಜಿ ಮತ್ತು ಐಜಿಪಿ ನೀಲಮಣಿ ಎನ್.ರಾಜು ಅವರಿಗೆ ದೂರು ನೀಡಿದ್ದಾರೆ.

ಸಚಿವರ ಆಪ್ತ ಸಹಾಯಕರು ಸಲ್ಲಿಸಿರುವ ದೂರಿನಲ್ಲಿ, ವಿದೇಶದ ದೂರವಾಣಿ ಸಂಖ್ಯೆಯಿಂದ ಸಚಿವರಿಗೆ ಬೆದರಿಕೆ ಕರೆಗಳು ಮತ್ತು ಸಂದೇಶಗಳು ಬರುತ್ತಿದ್ದು, ಇಂಟರ್ನೆಟ್ ಕಾಲ್ ಗಳು ಸಹ ಬರುತ್ತಿವೆ. ರವಿ ಪೂಜಾರಿ ಎಂದು ಹೇಳಿಕೊಳ್ಳುವ ವ್ಯಕ್ತಿಯಿಂದ ಬೆದರಿಕೆ ಒಡ್ಡಲಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮತ್ತೆ ವೇದಿಕೆಯಲ್ಲೇ ನಿದ್ದೆಗೆ ಜಾರಿದ ಸಿದ್ದರಾಮಯ್ಯ! (ವಿಡಿಯೋ)

ಕೊಡಗು: ಸಿಎಂ ಸಿದ್ದರಾಮಯ್ಯ ಮತ್ತೆ ವೇದಿಕೆಯಲ್ಲೇ ಗಾಢ ನಿದ್ರೆಗೆ ಜಾರಿ ಸಾಮಾಜಿಕ ಜಾಲತಾಣದಲ್ಲಿ ...

news

ಚುನಾವಣೆ ಸಿದ್ಧತೆಗೆ 23 ಸೂತ್ರಗಳು ನೀಡಿದ ಅಮಿತ್ ಶಾ

ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಯಬೇಕು ಎಂದು ಹಠತೊಟ್ಟಿರುವ ಬಿಜೆಪಿ ...

news

ಅಮೆರಿಕಾದಲ್ಲಿರುವ ಭಾರತೀಯ ಟೆಕಿಗಳು ಈಗ ನಿರಾಳ; ಎಚ್ 1 ಬಿ ವೀಸಾ ನೀತಿ ಯಥಾಸ್ಥಿತಿ

ವಾಷಿಂಗ್ಟನ್: ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಟೆಕಿಗಳು ಈಗ ಸ್ವಲ್ಪ ನಿರಾಳರಾಗಿದ್ದಾರೆ. ಯಾಕೆಂದರೆ, ...

news

ಲಾಲೂ ಜತೆಗೆ ಜೈಲಿನಲ್ಲಿ ಕಳೆಯಲು ಸಹಾಯಕರು ಮಾಡಿದ ಮಾಸ್ಟರ್ ಪ್ಲ್ಯಾನ್ ಏನು ಗೊತ್ತಾ?!

ನವದೆಹಲಿ: ಮೇವು ಹಗರಣದಲ್ಲಿ ಮೂರೂವರೆ ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಆರ್ ಜೆಡಿ ಮುಖ್ಯಸ್ಥ ಲಾಲೂ ...

Widgets Magazine