ಮರ್ಮಾಂಗ, ನಾಲಿಗೆಗೆ ಕತ್ತರಿ ಹಾಕಿದ ದುಷ್ಕರ್ಮಿಗಳು..!

ಬೆಂಗಳೂರು, ಶನಿವಾರ, 18 ಮಾರ್ಚ್ 2017 (14:20 IST)

Widgets Magazine

ವ್ಯಕ್ತಿಯ ಮರ್ಮಾಂಗಕ್ಕೆ ದುಷ್ಕರ್ಮಿಗಳು ಕತ್ತರಿ ಹಾಕಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್`ನ ಇಮ್ಮಡಿಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಮೊದಲಿಗೆ ನಾಲಿಗೆಯನ್ನ ಕತ್ತರಿಸಿದ್ದಾರೆ ಎಂದು ಹೇಳಲಾಗಿತ್ತು. ಇದೀಗ, ತನಿಖೆ ವೇಳೆ ಮರ್ಮಾಂಗಕ್ಕೂ ಗಾಯ ಮಾಡಿದ್ದಾರೆ ಎನ್ನುವ ಅಂಶ ಬಹಿರಂಗವಾಗಿದೆ.


ಹಲ್ಲೆಗೀಡಾದ ವ್ಯಕ್ತಿಯನ್ನ 20 ವರ್ಷ ಒಡಿಶಾದ ಬಿಜು ನಾಯಕ್ ಎಂದು ಗುರ್ತಿಸಲಾಗಿದೆ. ರಾತ್ರಿ ಮೂತ್ರ ವಿಸರ್ಜನೆಗೆ ಹೊರಬಂದ ಬಿಜುನಾಯಕ್  ಅವರ ಮೇಲೆ ನಾಲ್ವರು ಮುಸುಕುಧಾರಿಗಳು ದಾಳಿ ನಡೆಸಿದ್ದಾರೆ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಈ ದುಷ್ಕೃತ್ಯ ಎಸಗಿದ್ದಾರೆ.  

ವೃತ್ತಿಯಲ್ಲಿ ಕಾರ್ಪೆಂಟರ್ ಆಗಿರುವ ಬಿಜುನಾಯಕ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸರಣಿ ಅಪಘಾತ: 11 ಜನರ ದುರ್ಮರಣ

ಮೊಳಕಾಲ್ಮೂರು ತಾಲೂಕಿನ ರಾಮಾಪುರ ಸಂಭವಿಸಿದ ಸರಣಿ ಅಪಘಾತದಲ್ಲಿ 13 ಮಂದಿ ಮೃತಪಟ್ಟಿರುವ ಘಟನೆ ಶನಿವಾರ ...

news

`ನಿನ್ನ ದಾಖಲೆಗಳು ನಕಲಿ ಎಂದು ಸಾಬೀತಾದರೆ ಜೈಲಿಗೆ ಹಾಕುತ್ತೇವೆ’

ನಾನು ಜಯಲಲಿತಾ ಮತ್ತು ಶೋಭನ್ ಬಾಬು ಪುತ್ರ. ಅಮ್ಮನನ್ನ ಕೊಲೆ ಮಾಡಲಾಗಿದೆ.. ಅಮ್ಮನ ಆಸ್ತಿ ನನಗೇ ...

news

ಆಗ್ರಾದಲ್ಲಿ ಅವಳಿ ಸ್ಫೋಟ

ಉತ್ತರಪ್ರದೇಶದ ಆಗ್ರಾದಲ್ಲಿ ಅವಳಿ ಬಾಂಬ್ ಸ್ಫೋಟ ಸಂಭವಿಸಿದೆ. ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿಯೇ ಈ ...

news

ಐಟಿ ದಾಳಿ ಹಿಂದೆ ಬಿಜೆಪಿ ಕುಮ್ಮಕ್ಕು: ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸಚಿವರು ಮತ್ತು ಶಾಸಕರ ಮನೆ ಮೇಲೆ ಐಟಿ ದಾಳಿ ನಡೆಯುತ್ತಿರುವುದಕ್ಕೆ ...

Widgets Magazine