ಶಾಸಕ ಬಸವರಾಜ್ ಹೊರಟ್ಟಿಗೆ ಗುಂಡಿಟ್ಟು ಹತ್ಯೆ ಮಾಡುವ ಬೆದರಿಕೆ ಪತ್ರ
ಹುಬ್ಬಳ್ಳಿ, ಮಂಗಳವಾರ, 7 ನವೆಂಬರ್ 2017 (18:36 IST)
ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಬಸವರಾಜ್ ಹೊರಟ್ಟಿಗೆ ಗುಂಡಿಟ್ಟು ಹತ್ಯೆ ಮಾಡುವುದಾಗಿ ಜೀವ ಬೆದರಿಕೆ ಕರೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಮುಂಬೈಯಿಂದ ಹುಬ್ಬಳ್ಳಿಗೆ ಐವರು ಶಾರ್ಪ್ ಶೂಟರ್ಗಳ ತಂಡ ಬಂದಿಳಿದಿದ್ದು, ಎರಡು ದಿನಗಳಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗುವುದಾಗಿ ಬೆದರಿಕೆಯೊಡ್ಡಲಾಗಿದೆ ಎನ್ನಲಾಗಿದೆ.
ಪೋಸ್ಟ್ ಮೂಲಕ ಹೊರಟ್ಟಿಯವರ ಹುಬ್ಬಳ್ಳಿ ಕಚೇರಿಗೆ ಅನಾಮಧೇಯ ಪತ್ರ ರವಾನಿಸಲಾಗಿದೆ. ಬೆದರಿಕೆ ಪತ್ರ ಬಂದಿರುವ ಬಗ್ಗೆ ಹೊರಟ್ಟಿ ಕಚೇರಿಯ ಆಪ್ತ ಸಿಬ್ಬಂದಿ ಖಚಿತಪಡಿಸಿದ್ದಾರೆ.
ಹೊರಟ್ಟಿಯವರ ಆಪ್ತ ಸಿಬ್ಬಂದಿ ಅನಾಮಧೇಯ ಪತ್ರವನ್ನು ಡಿಸಿಪಿಯವರಿಗೆ ರವಾನಿಸಿದ್ದು ಹೆಚ್ಚಿನ ಭದ್ರತೆ ನೀಡುವಂತೆ ಮನವಿ ಮಾಡಲಾಗಿದೆ ಎಂದು ಹೊರಟ್ಟಿಯವರ ಆತ್ಮಿಯ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.
Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :
,
,
,
,
,