ಜೂನ್ 30 ರೊಳಗೆ ಶಾಸಕರು ಆಸ್ತಿಯ ವಿವರ ಸಲ್ಲಿಸುವುದು ಕಡ್ಡಾಯ: ಲೋಕಾಯುಕ್ತ

ಬೆಂಗಳೂರು, ಮಂಗಳವಾರ, 14 ಮಾರ್ಚ್ 2017 (19:05 IST)

Widgets Magazine

ಶಾಸಕರು ಜೂನ್ 30 ರೊಳಗೆ ತಮ್ಮ ಆಸ್ತಿಯ ವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಹೇಳಿದ್ದಾರೆ. 
ನಾನು ಲೋಕಾಯುಕ್ತರಾಗಿ ಒಂದುವರೆ ತಿಂಗಳುಗಳು ಕಳೆದಿವೆ. ನನ್ನ ಅಧಿಕಾರದ ವ್ಯಾಪ್ತಿಯಲ್ಲಿ ಮಾಡಲು ತುಂಬಾ ಕೆಲಸವಿದೆ. ಹೆಚ್ಚಿನ ಅಧಿಕಾರ ಬೇಕಾದಲ್ಲಿ ರಾಜ್ಯ ಸರಕಾರಕ್ಕೆ ಪತ್ರ ಬರೆದು ಮಾತುಕತೆ ನಡೆಸುತ್ತೇನೆ ಎಂದು ಹೇಳಿದ್ದಾರೆ.
 
ಎಲ್ಲಾ ಶಾಸಕರು ತಮ್ಮ ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕು. ಆಸ್ತಿ ವಿವರ ಸಲ್ಲಿಸುವಲ್ಲಿ ವಿಫಲವಾದ ಶಾಸಕರ ವಿವರಗಳನ್ನು ರಾಜ್ಯಪಾಲರಿಗೆ ರವಾನಿಸಲಾಗುವುದು. ಮುಂದಿನ 10 ದಿನಗಳೊಳಗಾಗಿ ಶಾಸಕರು ಆಸ್ತಿ ವಿವರಗಳನ್ನು ಸಲ್ಲಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. 
 
ಆಸ್ತಿ ವಿವರ ಸಲ್ಲಿಸದ ಶಾಸಕರಿಗೆ ನೋಟಿಸ್ ಜಾರಿ ಮಾಡಿ,  ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಅನೈತಿಕ ಸಂಬಂಧಕ್ಕೆ ಅಡ್ಡಿ: ಹೆತ್ತ ಮಗನನ್ನೇ ಹತ್ಯೆಗೈದ ತಾಯಿ

ಕಾಗವಾಡ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎನ್ನುವ ಆಕ್ರೋಶದಿಂದಾಗಿ ಹೆತ್ತಮಗನನ್ನೇ ಹತ್ಯೆಗೈದ ...

news

ಮತ್ತೆ ಪಠಾನ್‌ಕೋಟ್ ವಾಯುನೆಲೆಯ ಮೇಲೆ ದಾಳಿಗೆ ಉಗ್ರರ ಯತ್ನ

ಪಠಾನ್‌ಕೋಟ್: ಪಠಾನ್‌ಕೋಟ್ ವಾಯುನೆಲೆಯ ಮೇಲೆ ಮತ್ತೆ ಉಗ್ರರು ದಾಳಿಗೆ ಯತ್ನಿಸಿದ್ದಾರೆ ಎನ್ನುವ ಅನುಮಾನಗಳ ...

news

ಗೋವಾ ಸಿಎಂ ಆಗಿ ಮನೋಹರ್ ಪರಿಕ್ಕರ್ ಪದಗ್ರಹಣ

ಪಣಜಿ: ಗೋವಾ ರಾಜ್ಯದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಮನೋಹರ್ ಪರಿಕ್ಕರ್ ನಾಲ್ಕನೇ ಬಾರಿ ...

news

ಕಡಿಮೆ ಬೆಲೆಗೆ ಫ್ಲ್ಯಾಟ್ ನೀಡುವುದಾಗಿ ಸಾವಿರಾರು ಜನರಿಗೆ ವಂಚನೆ ಆರೋಪ: ಸಚಿನ್ ನಾಯಕ್ ಬಂಧನ

ಡ್ರೀಮ್ ಇನ್ಫ್ರಾಸ್ಟ್ರಕ್ಚರ್, ಗೃಹ ಕಲ್ಯಾಣ್, ಡೈಲಿ ಪೂಜಾ, ಟಿಜಿಎಸ್, ಸೆಂಡ್ ಮೈ ಗಿಫ್ಟ್ ವಿರುದ್ಧದ 2000 ...

Widgets Magazine