ನಿರಂತರ ವಿದ್ಯುತ್‌ಗಾಗಿ ಶಾಸಕರ ಪಾದಯಾತ್ರೆ

ರಾಯಚೂರು, ಸೋಮವಾರ, 27 ನವೆಂಬರ್ 2017 (20:11 IST)

ತಾಲ್ಲೂಕಿಗೆ ನಿರಂತರವಾಗಿ ವಿದ್ಯುತ್‌ ಸರಬರಾಜು ಮಾಡಲು ಒತ್ತಾಯಿಸಿ ಗ್ರಾಮೀಣ ತಿಪ್ಪರಾಜು ಹವಾಲ್ದಾರ ಅವರು ರೈತರೊಂದಿಗೆ ಪಂಚಮುಖಿ ಗಾಣಧಾಳದಿಂದ ಶಕ್ತಿನಗರದ ಶಾಖೋತ್ಪನ್ನ ವಿದ್ಯುತ್ ಕೇಂದ್ರದವರೆಗೆ ಪಾದಯಾತ್ರೆ ಆರಂಭಿಸಿದರು.

ಮೂರು ದಿನಗಳು ನಡೆಯುವ ಪಾದಯಾತ್ರೆಯಲ್ಲಿ ತಾಲ್ಲೂಕಿನ ಮಿಟ್ಟಿ ಮಲ್ಕಾಪುರದಿಂದ ನಗರ ಶಾಸಕ ಡಾ.ಶಿವರಾಜ ಪಾಟೀಲ ಅವರು ಕೂಡ ಭಾಗಿಯಾಗಲಿದ್ದಾರೆ. ರಾಯಚೂರಿನ ಶಕ್ತಿನಗರ ಶಾಖೋತ್ಪನ್ನ ವಿದ್ಯುತ್‌ ಕೇಂದ್ರಕ್ಕೆ ಪಾದಯಾತ್ರೆ ನಡೆಸಿ, ಅಲ್ಲಿ ಅನಿರ್ಧಿಷ್ಟ ಧರಣಿ ನಡೆಸಲು ನಿರ್ಧರಿಸಿದ್ದಾರೆ.

ಪಾದಯಾತ್ರೆ ಚಾಲನೆ ನೀಡಿದ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಮಾತನಾಡಿ, ಮೂರು ದಿನಗಳಲ್ಲಿ ವಿದ್ಯುತ್‌ ಸರಬರಾಜಿನ ಆದೇಶ ಹೊರಡದಿದ್ದರೆ ನಿರಂತರವಾಗಿ ಧರಣಿಯಲ್ಲಿ ತಾವು ಕೂಡ ಭಾಗವಹಿಸುವುದಾಗಿ ಘೋಷಿಸಿದರು.

ಶಾಸಕರ ಪಾದಯಾತ್ರೆ ಬೆಂಬಲಿಸಿ ವಿವಿಧ ಗ್ರಾಮಗಳ ಜನರು ಭಾಗವಹಿಸಿದ್ದರು.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

1 ಕೋಟಿ ವಿಮೆ ಹಣ ಪಡೆಯಲು ಮಹಿಳೆ ಮಾಡಿದ ಡ್ರಾಮ ನೋಡಿದ್ರೆ ಬೆಚ್ಚಿ ಬೀಳ್ತಿರಿ

ಹೈದ್ರಾಬಾದ್: ಖಾಸಗಿ ವಿಮಾ ಕಂಪೆನಿಯಿಂದ ರೂ. 1 ಕೋಟಿ ರೂ ವಂಚಿಸಲು ತನ್ನನ್ನು ತಾನು "ಸತ್ತವಳು" ಎಂದು ...

news

ಅಮೆರಿಕ ನಟಿ ಮೇಘನ್ ಮರ್ಕ್ಲೆ ವಿವಾಹವಾಗಲಿರುವ ಬ್ರಿಟನ್ ಪ್ರಿನ್ಸ್ ಹ್ಯಾರಿ

ಲಂಡನ್: ಬ್ರಿಟನ್‌ನ ಯುವರಾಜ ಪ್ರಿನ್ಸ್ ಹ್ಯಾರಿ ಮತ್ತು ಅಮೆರಿಕದ ಹಾಟ್ ನಟಿ ಮೇಘನ್ ಮರ್ಕಲೆ ಮಧ್ಯೆ ...

news

ಗಾರ್ಮೆಂಟ್ ಕಾರ್ಖಾನೆ ಉದ್ಯೋಗಿ ಯುವತಿಯ ಮೇಲೆ ಗ್ಯಾಂಗ್‌ರೇಪ್

ಬೆಂಗಳೂರು: ಗಾರ್ಮೆಂಟ್ ಫ್ಯಾಕ್ಟರಿ ಉದ್ಯೋಗಿಯಾಗಿರುವ 24 ವರ್ಷ ವಯಸ್ಸಿನ ಯುವತಿಯ ಮೇಲೆ ಗ್ಯಾಂಗ್‌ರೇಪ್ ...

news

ಚಹಾ ಮಾರಿದ್ದೇನೆ, ದೇಶವನ್ನು ಮಾರಾಟ ಮಾಡಿಲ್ಲ: ವಿಪಕ್ಷಗಳಿಗೆ ಮೋದಿ ತಿರುಗೇಟು

ಸೂರತ್(ಗುಜರಾತ್): ಚಹಾ ಮಾರಾಟ ಮಾಡಿದ್ದೇನೆ, ದೇಶವನ್ನು ಮಾರಾಟ ಮಾಡಿಲ್ಲ ಎಂದು ಪ್ರಧಾನಿ ಮೋದಿ ...

Widgets Magazine
Widgets Magazine