ಪುತ್ರರ ಮೇಲಿನ ಐಟಿ ದಾಳಿಗೆ ಮೋದಿಯೇ ಕಾರಣ, ಅನುಭವಿಸ್ತಾನೆ: ಡಿಕೆಶಿ ತಾಯಿ ಗೌರಮ್ಮ ಆಕ್ರೋಶ

ಬೆಂಗಳೂರು, ಗುರುವಾರ, 3 ಆಗಸ್ಟ್ 2017 (16:54 IST)

ಪುತ್ರ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ನಡೆದ ಐಟಿ ದಾಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯೇ ಕಾರಣವಾಗಿದ್ದಾನೆ ಎಂದು ಡಿಕೆಶಿ ತಾಯಿ ಗುಡುಗಿದ್ದಾರೆ.  
 
ಇಂತಹ ದಾಳಿಗಳಿಗೆ ನಾವು ಹೆದರುವುದಿಲ್ಲ. ಇಂತಹ ದಾಳಿಗಳನ್ನು ನನ್ನ ಮಕ್ಕಳು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಪುತ್ರರು  ರಾಜಕೀಯವಾಗಿ ಬೆಳೆಯುವುದನ್ನು ತಡೆಯಲು ದಾಳಿ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ನನ್ನ ಮಕ್ಕಳು ತಪ್ಪು ಮಾಡಿಲ್ಲ, ಅಂತಹ ಮಕ್ಕಳನ್ನು ಹೆತ್ತಿದ್ದೇನೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಎದುರು ಹಾಕಿಕೊಂಡಿದ್ದಕ್ಕೆ ಪುತ್ರನ ನಿವಾಸದ ಮೇಲೆ ದಾಳಿಯಾಗಿದೆ ಎಂದು ತಿಳಿಸಿದ್ದಾರೆ.
 
ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಬೆಂಬಲ ನೀಡಿರುವುದಕ್ಕೆ ದಾಳಿಯಾಗಿದೆ, ನನ್ನ ಮಕ್ಕಳ ಮೇಲಿನ ಐಟಿ ದಾಳಿಗೆ ಪ್ರಧಾನಿ ಮೋದಿಯೇ ಕಾರಣವಾಗಿದ್ದಾರೆ ಎಂದು ಆರೋಪಿಸಿದ್ದಾರೆ.
 
ನಿನ್ನೆ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 2.30 ಗಂಟೆಯವರೆಗೆ ದಾಳಿ ನಡೆಸಿದ್ದಾರೆ. ಆದರೆ ಯಾವುದೇ ದಾಖಲೆಗಳು ಅವರಿಗೆ ದೊರೆತಿಲ್ಲ. ಪುತ್ರ ಶಿವಕುಮಾರ್ ಅವರೊಂದಿಗೆ ಇಲ್ಲಿಯವರೆಗೆ ಮಾತನಾಡಲು ಸಾಧ್ಯವಾಗಿಲ್ಲ ಎಂದು ಅವರ ತಾಯಿ ಗೌರಮ್ಮ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಡಿ.ಕೆ.ಶಿವಕುಮಾರ್ ಗೌರಮ್ಮ ಐಟಿ ದಾಳಿ ಮೋದಿ ಅಮಿತ್ ಶಾ Gouramma Modi It Raid Amit Sha D.k.shivkumar

ಸುದ್ದಿಗಳು

news

ಡಿಕೆಶಿ ಮನೆಯಲ್ಲಿ ದಾಖಲೆಗಳು ಬಿಟ್ಟರೆ ಬೇರಾವುದೇ ಹಣ, ಒಡವೆ ಸಿಕ್ಕಿಲ್ಲ: ವರದಿ

33 ಗಂಟೆಗಳ ಬಳಿಕವೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆ ಮೇಲೆ ಐಟಿ ದಾಳಿ ನಡೆಯುತ್ತಿದೆ. ಐಟಿ ...

news

ಪ್ರಧಾನಿ ಮೋದಿ ಐಟಿ ಆಸ್ತ್ರಕ್ಕೆ ಸಿಎಂ ಸಿದ್ದರಾಮಯ್ಯ ಎಸಿಬಿ ಪ್ರತ್ಯಸ್ತ್ರ?

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆದಾಯ ತೆರಿಗೆ ಇಲಾಖೆ ದಾಳಿಯ ಅಸ್ತ್ರಕ್ಕೆ ಪ್ರತಿಯಾಗಿ ಸಿಎಂ ...

news

ಡಿಕೆಶಿಯ ವಿಧಾನಸೌಧದ ಕಚೇರಿ ಮೇಲೂ ದಾಳಿ..?

ನಿನ್ನೆ ಬೆಳಗ್ಗೆಯಿಂದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ...

news

ಹಿಂದೂ ವಿದ್ಯಾರ್ಥಿಗಳಿಗೆ ನಮಾಜ ಮಾಡುವಂತೆ ಒತ್ತಾಯಿಸಿದ ಶಿಕ್ಷಕರು

ಮೆವಾತ್: ನಗರದ ಶಾಲೆಯ ಶಿಕ್ಷಕರು ಹಿಂದು ವಿದ್ಯಾರ್ಥಿಗಳಿಗೆ ನಮಾಜ್ ಮಾಡುವಂತೆ ಒತ್ತಡ ಹೇರುತ್ತಿರುವ ...

Widgets Magazine