ಜೈಲಿನಲ್ಲೇ ವಿವಾದವೊಂದಕ್ಕೆ ಕಾರಣವಾದ ಮೊಹಮ್ಮದ್ ನಲಪಾಡ್!

ಬೆಂಗಳೂರು, ಶುಕ್ರವಾರ, 23 ಫೆಬ್ರವರಿ 2018 (08:58 IST)

Widgets Magazine

ಬೆಂಗಳೂರು: ಹಲ್ಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಶಾಸಕ ಹ್ಯಾರಿಸ್ ಮೊಹಮ್ಮದ್ ನಲಪಾಡ್ ಮತ್ತೊಂದು ವಿವಾದಕ್ಕೆ ಕಾರಣನಾಗಿದ್ದಾನೆ.
 

ಜೈಲಿನಲ್ಲಿ ನಿನ್ನೆಯಿಂದ ನಲಪಾಡ್ ಫೋನ್ ಬಳಸುತ್ತಿದ್ದಾನೆ ಎಂದು ಖಾಸಗಿ ವಾಹಿನಿ ವರದಿ ಮಾಡಿದೆ. ನಿನ್ನೆ ಮಧ್ಯರಾತ್ರಿವರೆಗೂ ತನ್ನ ಕುಟುಂಬದವರ ಜತೆಗೆ ಮಾತನಾಡಿದ ಮೊಹಮ್ಮದ್, ಮಧ್ಯಂತರ ಜಾಮೀನು ಅರ್ಜಿ ಸಲ್ಲಿಕೆ ಬಗ್ಗೆ ಮಾತನಾಡಿದನೆಂದು ವಾಹಿನಿ ವರದಿ ಮಾಡಿದೆ.
 
ಆದರೆ ಮೊಹಮ್ಮದ್ ಗೆ ಅಕ್ರಮವಾಗಿ ಫೋನ್ ಬಳಸಲು ಅನುವು ಮಾಡಿಕೊಟ್ಟವರು ಯಾರೆಂದು ತಿಳಿದುಬಂದಿಲ್ಲ. ನಿನ್ನೆ ಆರೋಪಿಗಳಿಗೆ ಮನೆ ಊಟ ನೀಡಲಾಗಿತ್ತು. ಈ ಊಟದ ಜತೆಗೆ ಗುಪ್ತವಾಗಿ ಮೊಬೈಲ್ ಸಾಗಿಸಿರಬಹುದೇ ಎಂದು ವಾಹಿನಿ ವರದಿ ಶಂಕಿಸಿದೆ. ಅಂತೂ ವಿಐಪಿಗಳಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಐಪಿ ಆತಿಥ್ಯ ಸಿಗುತ್ತದೆ ಎಂಬುದಕ್ಕೆ ಈ ಘಟನೆ ಮತ್ತೊಮ್ಮೆ ಸಾಕ್ಷಿಯಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕಾಂಗ್ರೆಸ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ನಿಯೋಗ

ಬೆಂಗಳೂರು : ಶಾಂತಿ ನಗರದ ಶಾಸಕ ಎನ್‌ ಎ ಹ್ಯಾರಿಸ್‌ಪುತ್ರನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ...

news

ನಟಿ ಸಂಜನಾ ತಮ್ಮ ಟ್ವೀಟರ್ ನಲ್ಲಿ ಹ್ಯಾರಿಸ್ ಅವರ ಕುರಿತು ಹೇಳಿದ್ದೇನು ಗೊತ್ತಾ...?

ಬೆಂಗಳೂರು : ಇತ್ತಿಚೆಗೆ ಶಾಂತಿನಗರ ಶಾಸಕ ಎನ್‌.ಎ. ಹ್ಯಾರಿಸ್‌ ಅವರ ಪುತ್ರ ಮೊಹಮ್ಮದ್‌ ನಲಪಾಡ್‌ ಅವರು ...

news

ಕಾಂಗ್ರೆಸ್ ಕಾರ್ಯಕರ್ತನ ಕೈ ಕತ್ತರಿಸಿದ ಜೆಡಿಎಸ್ ಕಾರ್ಯಕರ್ತ

ಚಿಕ್ಕಬಳ್ಳಾಪುರ : ಕ್ಷುಲಕ ಕಾರಣಕ್ಕೆ ಜೆ.ಡಿ.ಎಸ್. ಕಾರ್ಯಕರ್ತನೊಬ್ಬ ಕಾಂಗ್ರೆಸ್ ಕಾರ್ಯಕರ್ತನ ಕೈ ...

news

ವಿದ್ವತ್ ಜತೆ ಸಂಧಾನಕ್ಕೆ ಹೋದ ಹ್ಯಾರಿಸ್ ಸಪ್ಪೆ ಮುಖ ಹಾಕಿಕೊಂಡು ಬಂದಿದ್ಯಾಕೆ…?

ಬೆಂಗಳೂರು : ಶಾಂತಿನಗರದ ಶಾಸಕ ಹ್ಯಾರಿಸ್ ಪುತ್ರನಿಂದ ಹಲ್ಲೆಗೊಳಗಾದ ವಿದ್ವತ್ ಮಲ್ಯ ಆಸ್ಪತ್ರೆಯಲ್ಲಿ ...

Widgets Magazine