ನಲಪಾಡ್ ಗೆ ಜಾಮೀನು ನೀಡಿದರೂ ಷರತ್ತು ವಿಧಿಸಿದ ಹೈಕೋರ್ಟ್

ಬೆಂಗಳೂರು, ಗುರುವಾರ, 14 ಜೂನ್ 2018 (10:53 IST)

Widgets Magazine

ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಗೆ ಜಾಮೀನು ನೀಡಿದ ಹೈಕೋರ್ಟ್ ಕೆಲವು ಷರತ್ತು ವಿಧಿಸಿದೆ.

ಫರ್ಜಿ ಕೆಫೆಯಲ್ಲಿ ಮೂರು ತಿಂಗಳ ಹಿಂದೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ನಲಪಾಡ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಕಳೆದಿದ್ದರು. ಇದೀಗ ಜಾಮೀನು ಮಂಜೂರಾದರೂ ಕೋರ್ಟ್ ಕೆಲವು ಷರತ್ತು ವಿಧಿಸಿದ್ದು, ಅದನ್ನು ಪಾಲಿಸಲೇಬೇಕಿದೆ.

ಆರೋಪಿ ಪ್ರಭಾವಿ ವ್ಯಕ್ತಿಯಾದ್ದರಿಂದ ಸಾಕ್ಷ್ಯ ನಾಶ ಮಾಡಬಹುದೆಂಬ ಕಾರಣಕ್ಕೆ ಇದುವರೆಗೆ ಜಾಮೀನು ನಿರಾಕರಣೆಯಾಗುತ್ತಲೇ ಇತ್ತು. ಇದೀಗ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ ಸಾಕ್ಷ್ಯ ನಾಶ ಮಾಡಲು ಯತ್ನಿಸದಂತೆ ಎಚ್ಚರಿಕೆಯ ಷರತ್ತು ವಿಧಿಸಿದೆ. ಜತೆಗೆ 2 ಲಕ್ಷ ರೂ.ಗಳ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ನೀಡಲು ಸೂಚಿಸಿದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಮೊಹಮ್ಮದ್ ನಲಪಾಡ್ ವಿದ್ವತ್ ಅಪರಾಧ ಸುದ್ದಿಗಳು Vidwath Mohammad Nalapad Crime News

Widgets Magazine

ಸುದ್ದಿಗಳು

news

ಕೊನೆಗೂ ಮೊಹಮ್ಮದ್ ನಲಪಾಡ್ ಗೆ ಜಾಮೀನು ಮಂಜೂರು

ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ...

news

ಮೊಹಮ್ಮದ್ ನಲಪಾಡ್ ಗೆ ಜೈಲಾ? ಬೇಲಾ? ಕೆಲವೇ ಕ್ಷಣಗಳಲ್ಲಿ..

ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ಪ್ರಕರಣಕ್ಕೆ ಜೈಲು ಸೇರಿದ್ದ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ...

news

ಚಾರ್ಮಾಡಿ ಘಾಟಿಯಲ್ಲಿ ಮತ್ತಷ್ಟು ಕುಸಿತ! ಸ್ಥಗಿತದ ಭೀತಿ

ಬೆಂಗಳೂರು: ಮಳೆಯಿಂದಾಗಿ ಚಾರ್ಮಾಡಿ ಘಾಟಿ ರಸ್ತೆಯ ಅವಸ್ಥೆ ಹೇಳತೀರದಂತಾಗಿದೆ. ರಸ್ತೆಗೆ ಗುಡ್ಡ ಕುಸಿದು ...

news

ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿಗೆ ಬಂದ ರೈತರು

ಬೆಂಗಳೂರು: ಸಾಲಮನ್ನಾ ಮಾಡುವಂತೆ ಆಗ್ರಹಿಸಿ ವಿವಿಧ ಕಡೆಯಿಂದ ರೈತರು ಇಂದು ಬೆಳಿಗ್ಗೆಯೇ ಸಿಎಂ ಕುಮಾರಸ್ವಾಮಿ ...

Widgets Magazine