ಗೋಬಿ, ಫ್ರೈಡ್ ರೈಸ್, ಕಬಾಬ್`ಗಳನ್ನ ಚಪ್ಪರಿಸಿ ತಿನ್ನುವ ಮೊದಲು ಈ ಸುದ್ದಿ ನೋಡಿ.

ಬೆಂಗಳೂರು, ಮಂಗಳವಾರ, 21 ಮಾರ್ಚ್ 2017 (09:20 IST)

Widgets Magazine

ಅಬ್ಬಬ್ಬಾ.. ಏನ್ ರುಚಿ.. ಇದಕ್ಕೆ ಏನ್ ಹಾಕಿ ಮಾಡುತ್ತಾರೋ ಎಂದು ಚಪ್ಪರಿಸಿಕೊಂಡು ಗೋಬಿ, ಫ್ರೈಡ್ ರೈಸ್, ಕಬಾಬ್, ಚಿಲ್ಲಿ ಚಿಕನ್, ನೂಡಲ್ಸ್`ಗಳನ್ನ ತಿಂದಿರುತ್ತೀರಿ. ಆದರೆ, ಈ ರುಚಿಯ ಹಿಂದೆ ಹಲವೆಡೆ ಮೋನೋಸೋಡಿಯಂ ಗ್ಲುಟಮೇಟ್`ನ ಪ್ರಭಾವವಿರುತ್ತೆ. ಫುಟ್ಬಾತ್`ಗಳಲ್ಲಿ ಮಾಡುವ ಬಹುತೇಕ ತಿಂಡಿಗಳಿಗೆ ಇದನ್ನ ರುಚಿ ವರ್ಧಕವಾಗಿ ಬಳಕೆ ಮಾಡುತ್ತಾರೆ. ಎನ್ನಲಾಗುತ್ತಿದೆ. ಇದನ್ನ ಮಿತಿ ಮೀರಿ ಬಳಸಿದರೆ ಆರೋಗ್ಯಕ್ಕೆ ಹಾನಿಕರ. ಈ ವಿಷಯವನ್ನ ಸ್ವತಃ ಆರೋಗ್ಯ ಸಚಿವರೇ ವಿಧಾನಪರಿಷತ್`ನಲ್ಲಿ ಹೇಳಿದ್ದಾರೆ.


ಪರಿಷತ್`ನಲ್ಲಿ ಬಿಜೆಪಿ ಸದಸ್ಯ ರಾಮಚಂದ್ರೇಗೌಡ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ರಮೇಶ್ ಕುಮಾರ್, ಮೋನೋಸೋಡಿಯಂ ಬಳಕೆ ಅಪರಾಧವಾದರೂ ಈ ಬಗ್ಗೆ ಒಂದೇ ಒಂದು ಪ್ರಕರಣ ದಾಖಲಾಗದಿರುವ ಬಗ್ಗೆ ಸರ್ಕಾರದ ವೈಫಲ್ಯ ಎಂದು ಒಪ್ಪಿಕೊಂಡಿದ್ದಾರೆ..

ಇದನ್ನ ಹೆಚ್ಚಾಗಿ ಆಹಾರದಲ್ಲಿ ಬಳಸುವುದರಿಂದ ತಲೆನೋವು, ಹೊಟ್ಟೆತೊಳೆಸುವುದು, ಎದೆನೋವು ಈ ರೀತಿ ಸಮಸ್ಯೆಗಳು ಬಾಧಿಸುತ್ತವೆ ಎಂದು ರಮೇಶ್ ಕುಮಾರ್ ಹೇಳಿದರು. ಹೀಗಾಗಿ, ಈ ಮಾರಣಾಂತಿಕ ಉತ್ಪನ್ನದ ನಿಷೇಧಕ್ಕೆ ಸರ್ಕಾರ ಮುಂದಾಗುವ ಸಾಧ್ಯತೆ ಇದೆ.
 
ಆರೋಗ್ಯಕ್ಕೆ ಹಾನಿಕರ: ಮೋನೋಸೋಡಿಯಂ ಗ್ಲುಟಮೆಟ್ ಅತಿಯಾದ ಬಳಕೆ ಆರೋಗ್ಯಕ್ಕೆ ಹಾನಿಕರ. ಮಕ್ಕಳ ಮೆದುಳಿನ ಮೇಲೂ ಇದು ಪರಿಣಾಮ ಬೀರುತ್ತೆ ಎನ್ನುವುದನ್ನ ಹಲವು ವರದಿಗಳು ಧೃಡಪಡಿಸಿವೆ. ಈ ಹಿಂದೆ ಮೋನೋಸೋಡಿಯಂ ಇದೆ ಎಂಬ ಕಾರಣಕ್ಕೆ ಮ್ಯಾಗಿ ನಿಷೇಧ ಮಾಡಿದ್ದನ್ನ ನಾವಿಲ್ಲಿ ಸ್ಮರಿಸಬಹುದು.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಮೋನೋಸೋಡಿಯಂ ಗ್ಲುಟಮೆಟ್ ಬೆಂಗಳೂರು ರಮೇಶ್ ಕುಮಾರ್ Bengaluru Rameshkumar Monosodium Glutamate

Widgets Magazine

ಸುದ್ದಿಗಳು

news

ಉಪಚುನಾವಣೆ ಪ್ರಚಾರ: ಸ್ಟಾರ್ ನಟರ ಪಟ್ಟಿಯಲ್ಲಿ ಅಂಬರೀಶ್ ಹೆಸರೇ ಇಲ್ಲ!

ಮೈಸೂರು: ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆ ಇದೀಗ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷ ...

news

ಅಧಿಕೃತ ಬಂಗಲೆಗೆ ಪ್ರವೇಶ ಮಾಡಲು ಸಿಎಂ ಯೋಗಿ ತಡಮಾಡಿದ್ದೇಕೆ?!

ಲಕ್ನೋ: ಉತ್ತರ ಪ್ರದೇಶ ಸಿಎಂ ಆದ ತಕ್ಷಣ ಯೋಗಿ ಆದಿತ್ಯನಾಥ್ ತಮ್ಮ ಗಂಟು ಮೂಟೆ ಕಟ್ಟಿಕೊಂಡು ಅಧಿಕೃತ ...

news

ಪೊಲೀಸರ ಲಾಠಿ ಕಸಿದು ಕಾಮುಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವತಿ

ಉತ್ತರಪ್ರದೇಶದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿದೆ. ತಮ್ಮನ್ನ ಮೇಲೆ ಕಣ್ಣು ಹಾಕುವ ...

news

ಲೈಂಗಿಕ ದೌರ್ಜನ್ಯಕ್ಕೆ ತುತ್ತಾದ ಕೇಂದ್ರ ಸರ್ಕಾರದ ಮಹಿಳಾ ನೌಕರರಿಗೆ 90 ದಿನ ರಜೆ

ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿ ಕೇಸ್ ದಾಖಲಿಸುವ ಕೇಂದ್ರ ಸರ್ಕಾರದ ಮಹಿಳಾ ನೌಕರರಿಗೆ ವಿಚಾರಣೆ ಸೇರಿದಂತೆ ...

Widgets Magazine