ಗಡಿಯಲ್ಲಿ ಹೆಚ್ಚಿನ ಕಾಡಾನೆಗಳ ಹಾವಳಿ

ಆನೇಕಲ್, ಶುಕ್ರವಾರ, 11 ಜನವರಿ 2019 (16:53 IST)

  ಗಡಿ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮತ್ತೆ ಮುಂದುವರಿದಿದೆ.

ಆನೇಕಲ್ - ತಮಿಳುನಾಡು ಗಡಿಯಲ್ಲಿ ಮತ್ತೆ ಕಾಡಾನೆಗಳ ಹಾವಳಿ ಕಂಡುಬಂದಿದೆ. ಆನೇಕಲ್ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ನಾಯಕನಪಳ್ಳಿಯಲ್ಲಿ ಬೀಡುಬಿಟ್ಟ ಆನೆಗಳ ಹಿಂಡಿನಿಂದಾಗಿ ಸುತ್ತಲಿನ ನಿವಾಸಿಗಳು ಕಂಗೆಟ್ಟಿದ್ದಾರೆ.
ಅರಣ್ಯದಂಚಿನ ಬಾಳೆ ತೋಟಕ್ಕೆ ನುಗ್ಗಿದ 60 ಕ್ಕೂ ಹೆಚ್ಚು ಕಾಡಾನೆಗಳು ದಾಂಧಲೆ ನಡೆಸಿದ್ದು, ಬೆಳೆ ನಾಶಪಡಿಸಿವೆ.
ಕಾಡಾನೆಗಳನ್ನು ಓಡಿಸಲು ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ.

ಪಟಾಕಿ ಸಿಡಿಸಿ ಆನೆಗಳನ್ನು ಕಾಡಿನತ್ತ ಓಡಿಸಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಆದರೆ ಅರಣ್ಯಕ್ಕೆ ಹೋಗದೆ ಗ್ರಾಮದ ಸುತ್ತಲೇ ಸುತ್ತುತ್ತಿರುವ ಆನೆಗಳ ಹಿಂಡು ಜನರಲ್ಲಿ ಆತಂಕಕ್ಕೆ ಕಾರಣವಾಗಿವೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹಾಡ ಹಗಲೇ ಅಂಗಡಿಯಲ್ಲಿ ಹಣ ಕದ್ದ ಖದೀಮರು!

ಅಂಗಡಿಯೊಂದಕ್ಕೆ ನುಗ್ಗಿ ಹಾಡ ಹಗಲಲ್ಲೇ ಖದೀಮರು ಹಣ ಎಗರಿಸಿರುವ ಘಟನೆ ನಡೆದಿದೆ.

news

ಬಿ.ಎಂ.ರಸ್ತೆ ಒತ್ತುವರಿ ಕಟ್ಟಡ ತೆರವಿಗೆ ಮುಹೂರ್ತ ನಿಗದಿ?

ಜನನಿಬಿಡ ಪ್ರದೇಶವಾಗಿರುವ ಬಿ.ಎಂ.ರಸ್ತೆ ಒತ್ತುವರಿ ಮಾಡಿಕೊಂಡಿರುವ ಕಟ್ಟಡಗಳ ತೆರವಿಗೆ ಕ್ಷಣಗಣನೆ ...

news

ಚಿರತೆ ದಾಳಿಗೆ ಬಲಿಯಾದದ್ದೇನು ಗೊತ್ತಾ?

ಹಂತಕ ಚಿರತೆ ದಾಳಿಗೆ ಸಾವಿರಾರು ರೂಪಾಯಿ ಮೌಲ್ಯದ ನಾಲ್ಕು ಕುರಿಗಳು ಬಲಿಯಾದ ಘಟನೆ ನಡೆದಿದೆ.

news

ಪ್ರವಾಸಿ ಉತ್ಸವದ ಸಂಭ್ರಮ ಎಲ್ಲಿದೆ ಗೊತ್ತಾ? ಪ್ರವಾಸಿ ಉತ್ಸವದ ಸಂಭ್ರಮ ಎಲ್ಲಿದೆ ಗೊತ್ತಾ?

ಪ್ರಕೃತಿ ವಿಕೋಪದಿಂದ ಪ್ರವಾಸೋದ್ಯಮ ಕುಸಿದು ಬಿದ್ದಿರುವ ಜಿಲ್ಲೆಯಲ್ಲಿ ಮತ್ತೆ ಪ್ರವಾಸಿಗರನ್ನು ಆಕರ್ಷಿಸಲು ...

Widgets Magazine