ಶಾಸಕಿ ಮೋಟಮ್ಮ ಭೂ ಅಕ್ರಮದಲ್ಲಿ ಭಾಗಿ ಆರೋಪ

ಬೆಂಗಳೂರು, ಬುಧವಾರ, 8 ಮಾರ್ಚ್ 2017 (14:46 IST)

Widgets Magazine

ಎಂಎಲ್‌ಸಿ ಭೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಆರೋಪಿಸಿದ್ದಾರೆ.
 
ತಹಸೀಲ್ದಾರ್ ನಾಗೇಶ್ ಸೇರಿದಂತೆ ನಿಷ್ಠಾವಂತ ಅಧಿಕಾರಿಗಳಿಗೆ ಕಾನೂನುಬಾಹಿರವಾಗಿ ಕೆಲಸ ಮಾಡುವಂತೆ ಶಾಸಕಿ ಮೋಟಮ್ಮ ಒತ್ತಡ ಹೇರುತ್ತಿರುವ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
 
ಕಂದೂರಿನಲ್ಲಿ ಸರ್ವೇ ಸಂಖ್ಯೆ 156 ರಲ್ಲಿ 15 ಎಕರೆ ಭೂಮಿಯನ್ನು ಶಾಸಕಿ ಮೋಟಮ್ಮ ಒತ್ತುವರಿ ಮಾಡಿಕೊಂಡಿದ್ದಾರೆ, ಒತ್ತುವರಿ ಜಮೀನು ತೆರುವುಗೊಳಿಸುವಂತೆ ನೋಟಿಸ್ ನೀಡಿದ ತಹಸೀಲ್ದಾರ್‌ ನಾಗೇಶ್‌ ಅವರಿಗೆ ವರ್ಗಾವಣೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
 
ಕಂದಾಯ ಇಲಾಖೆಯಿಂದ ನಾಗೇಶ್‌ಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಮಧ್ಯಪ್ರವೇಶದಿಂದ ಮತ್ತೆ ಕಂದಾಯ ಇಲಾಖೆಯಲ್ಲಿ ಮುಂದುವರಿಯುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
 
ಶಾಸಕಿ ಮೋಟಮ್ಮ ಅವರ ಭೂ ಅಕ್ರಮದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವರಿಗೆ ದಾಖಲೆಗಳನ್ನು ಸಲ್ಲಿಸಿದ್ದೇವೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಮಾಹಿತಿ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಬಿಎಸ್‌ವೈ ನಕಾರ

ಬೆಂಗಳೂರು: ಕಾಲಿಗೆ ಬೀಳುವುದು ವಿಕೃತಿ ಎಂದು ಬಿಜೆಪಿ ಮುಖಂಡ ಈಶ್ವರಪ್ಪ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ...

news

ದೆಹಲಿ ಹಿಟ್ ಆ್ಯಂಡ್ ರನ್ ಪ್ರಕರಣ: ಆರೋಪಿ ಬಂಧನ

ದೆಹಲಿಯಲ್ಲಿ ಕಳೆದ ಭಾನುವಾರ ರಾತ್ರಿ ನಡೆದ ಗುದ್ದೋಡು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ...

news

ಸುಹಾನಾಗೆ ಧಮ್ಕಿ ಹಾಕಿದವರ ವಿರುದ್ಧ ಕ್ರಮ: ಯು.ಟಿ. ಖಾದರ್

ಜೀ ಕನ್ನಡದ ಸರಿಗಮಪ ಕಾರ್ಯಕ್ರಮದಲ್ಲಿ ಹಿಂದೂ ದೇವರನ್ನ ಸ್ತುತಿಸುವ ಹಾಡನ್ನ ಹಾಡಿದ್ದ ಯುವತಿ ಸುಹಾನಾ ...

news

ನಾವು ಕಾಂಗ್ರೆಸ್ ನಿಷ್ಠರು, ನಿಮ್ಮ ನೋಟಿಸ್‌ಗೆ ಧಿಕ್ಕಾರವಿರಲಿ: ಎಚ್.ವಿಶ್ವನಾಥ್

ಬೆಂಗಳೂರು: ನಾವು ಕಾಂಗ್ರೆಸ್ ನಿಷ್ಠರು, ನಿಮ್ಮ ನೋಟಿಸ್‌ಗೆ ಧಿಕ್ಕಾರವಿರಲಿ ಎಂದು ಮಾಜಿ ಸಂಸದ ...

Widgets Magazine Widgets Magazine