ಉಪಚುನಾವಣೆ: ಗುಂಡ್ಲುಪೇಟೆ, ನಂಜನಗೂಡಿನಲ್ಲಿ ಬೆಳಗ್ಗೆ 7ರಿಂದಲೇ ಮತದಾನ ಆರಂಭ

ಮೈಸೂರು, ಭಾನುವಾರ, 9 ಏಪ್ರಿಲ್ 2017 (08:27 IST)

Widgets Magazine

ಕಾಂಗ್ರೆಸ್, ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿರುವ ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುನವಣಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.  ಬೆಳಗ್ಗೆ 7ಗಂಟೆಯಿಂದಲೇ ಮತದಾನ ಆರಂಭವಾಗಿದೆ.  ಎಲ್ಲೆ. ಡೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ
  


ಶ್ರೀನಿವಾಸಪ್ರಸಾದ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ನಂಜನಗೂಡಿನಲ್ಲಿ ಮತ್ತು ಮಾಜಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ನಿಧನದಿಂದ ತೆರವಾದ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದೆ.

ನಂಜನಗೂಡು ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಮತ್ತು ಕಾಂಗ್ರೆಸ್`ನಿಂದ ಕಳಲೆ ಕೃಷ್ಣಮೂರ್ತಿ ಕಣದಲ್ಲಿದ್ದಾರೆ. 

ಇತ್ತ, ಗುಂಡ್ಲುಪೇಟೆಯಲ್ಲಿ ಮಹದೇವ ಪ್ರಸಾದ್ ಪತ್ನಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಮತ್ತು ಬಿಜೆಪಿಯ ನಿರಂಜನ್ ಕುಮಾರ್ ನಡುವೆ ನೇರ ಹಣಾಹಣಿ ಇದೆ. ರಿಪಬ್ಲಿಕನ್ ಪಾರ್ಟಿಯ ಎಂ. ಶಿವರಾಜು, ಭಾರತೀಯ ಡಾ.ಬಿ.ಆರ್. ಅಂಬೇಡ್ಕರ್ ಜನತಾ ಪಾರ್ಟಿಯ ಎಂ. ಹೊನ್ನಾರಯ್ಯ, ಪಕ್ಷೇತರರಾದ ಕೆ ಸೋಮಶೇಖರ್, ಬಿ. ಮಹದೇವ ಪ್ರಸಾದ್ ಮತ್ತು ಎಂ. ಶಿವರಾಮು ಕಣದಲ್ಲಿದ್ದಾರೆ.

ಸಚಿವ ಸ್ಥಾನದಿಂದ ಕೈಬಿಟ್ಟ ಅಸ್ತ್ರವನ್ನ ಅನುಕಂಪದ ಅಲೆಯಾಗಿ ಬಳಸಿಕೊಂಡು ಗೆಲುವಿನ ಪತಾಕೆ ಹಾರಿಸಲು ನಂಜನಗೂಡಿನಲ್ಲಿ ಶ್ರೀನಿವಾಸ್ ಪ್ರಸಾದ್ ಮುಂದಾಗಿದ್ದಾರೆ. ಇದು ಸಿದ್ದರಾಮಯ್ಯ ಮತ್ತು ಶ್ರೀನಿವಾಸಪ್ರಸಾದ್ ನಡುವಿನ ಹೋರಾಟ ಎಂದೇ ಬಿಂಬಿಸಲಾಗಿದೆ. ಇತ್ತ, ಗುಂಡ್ಲುಪೇಟೆಯಲ್ಲಿ ಗೀತಾ ಮಹದೇವಪ್ರಸಾದ್`ಗೆ ಅನುಕಂಪದ ಅಲೆ ವರ್ಕೌಟ್ ಆಗುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷವಿದೆ. ಏಪ್ರಿಲ್ 13ಕ್ಕೆ ಫಲಿತಾಂಶ ಹೊರಬೀಳಲಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಉಪಚುನಾವಣೆ ನಡೆಯುತ್ತಿರುವ ಮತಯಂತ್ರಗಳಲ್ಲೊಂದು ಸ್ಪೆಷಾಲಿಟಿ ಇದೆ.. ಏನ್ ಗೊತ್ತಾ..?

ಪಂಚರಾಜ್ಯ ಚುನಾವಣೆ ಬಳಿಕ ಇವಿಎಂ ಮೆಶಿನ್ ಅಕ್ರಮದ ಬಗ್ಗೆ ಆರೋಪಗಳು ಕೇಳಿಬಂದವು. ಉತ್ತರಪ್ರದೇಶದ ಮಾಜಿ ಸಿಎಂ ...

news

ಫೇಸ್ ಬುಕ್ ನಲ್ಲಿ ಶ್ರೀರಾಮಚಂದ್ರನ ವಿರುದ್ದ ಅವಹೇಳನಾರಿ ಪೋಸ್ಟ್

ಒಡಿಶಾ: ಭಗವಾನ್ ಶ್ರೀರಾಮಚಂದ್ರನ ವಿರುದ್ಧ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ್ದಕ್ಕೆ ಒಡಿಶಾದ ಭದ್ರಾಕ್ ...

news

ಗಂಡನ ಸಾವಿನ ಸುದ್ದಿಯನ್ನೇ ಓದಿದ ನ್ಯೂಸ್ ಆಂಕರ್

ತನ್ನ ಪತಿ ಸತ್ತು ಬಿದ್ದಿದ್ದಾನೆಂಬ ಸುದ್ದಿ ಕೇಳಿದ ಯಾರಿಗಾದರೂ ಎದೆ ಒಡೆದುಹೋಗುತ್ತೆ. ಅಂತಹದುರಲ್ಲಿ ...

news

ಕಾಂಗ್ರೆಸ್ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ: ಯಡಿಯೂರಪ್ಪ

ರೈತ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿ ಅವರ ಕುಟುಂಬದ ನೆರವಿಗೆ 1 ಲಕ್ಷ ರೂಪಾಯಿ ಹಣ ನೀಡಿದ್ದೆ. ಆದರೆ, ...

Widgets Magazine