ನೀರವ್ ಮೋದಿಯ ಬಗ್ಗೆ ನರೇಂದ್ರ ಮೋದಿ ಮಾತನಾಡಬೇಕು– ಸಿದ್ದರಾಮಯ್ಯ

ರಾಯಚೂರು, ಭಾನುವಾರ, 18 ಫೆಬ್ರವರಿ 2018 (17:48 IST)

Widgets Magazine

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬ್ಯಾಂಕಿನಲ್ಲಿ ಹಣ ಇಡಿ ಅಂತಾರೆ. ಹಣ ಹೂಡಿಕೆ ಮಾಡಿದ್ರೆ ನೀರವ್  ಮೋದಿ  ಅಂಥವರು ಲೂಟಿ ಮಾಡ್ತಾರೆ. ಆದರೆ, ಮೋದಿ ಅವರು ಇದರ ಬಗ್ಗೆ ಬಾಯಿ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಟೀಕಿಸಿದ್ದಾರೆ.
 
ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ  ಮಸ್ಕಿ ತಾಲ್ಲೂಕು ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮಕ್ಕೂ ಮುನ್ನು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೀರವ್ ಮೋದಿಯ ಬಗ್ಗೆ ನರೇಂದ‌್ರ ಮೋದಿ ಅವರು ಮಾತನಾಡಬೇಕು ಎಂದು ಆಗ್ರಹಿಸಿದ್ದಾರೆ.
 
ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಾಗ ಮೋದಿ ಮೌನವಹಿಸುತ್ತಾರೆ. ಅವರು ನಮ್ಮಂತೆ ಜನರ ಕೈಗೆ ಸಿಗುತ್ತಾರಾ ಎಂದು ಪ್ರಶ್ನಿಸಿದ ಅವರು ಮಾಧ್ಯಮದವರನ್ನು ಸಹ ಹತ್ತಿರ ಬಿಟ್ಟುಕೊಳ್ಳುವುದಿಲ್ಲ ಎಂದಿದ್ದಾರೆ.
 
ಇದೇ ವೇಳೆ ಜೆಡಿಎಸ್ ಹಾಗೂ ಬಿಎಸ್ ಪಿ ಮೈತ್ರಿಯ ಬಗ್ಗೆ ಪ್ರತಿಕ್ರಿಯಿಸಿ ಯಾವುದೇ ಪರಿಣಾಮ ಆಗುವುದಿಲ್ಲ. ಎರಡೂ ಪಕ್ಷಗಳಿಗೆ ಅಷ್ಟೊಂದು ಸಾಮರ್ಥ್ಯವಿಲ್ಲ ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಶಾಸಕ ಹ್ಯಾರೀಸ್ ಪುತ್ರನ ಬಂಧನಕ್ಕೆ ಶೆಟ್ಟರ್ ಒತ್ತಾಯ

ಉದ್ಯಮಿಯ ಪುತ್ರನ ಮೇಲೆ ಹಲ್ಲೆ ನಡೆದ ಪ್ರಕರಣ ಆರೋಪಿಯಾಗಿರುವ ಶಾಸಕ ಎನ್.ಎ.ಹ್ಯಾರೀಸ್ ಅವರ ಪುತ್ರನನ್ನು ...

news

ಪ್ರಧಾನಿ ಮೋದಿ ಮಾಧ್ಯಮಗಳ ಕೈಗೆ ಸಿಗುವುದೇ ಇಲ್ಲವಲ್ವಾ? ಸಿಎಂ ಲೇವಡಿ

ಬೆಂಗಳೂರು: ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡುತ್ತಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಪ್ರಧಾನಿ ...

news

‘ಪೊಲೀಸರು ಇರೋದೇ ಅರೆಸ್ಟ್ ಮಾಡೋಕೆ ಅಲ್ವಾ?’

ಬೆಂಗಳೂರು: ಬೆಂಗಳೂರಿನಲ್ಲಿ ಶಾಂತಿ ನಗರ ಶಾಸಕ ಹ್ಯಾರಿಸ್ ಪುತ್ರನ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ...

news

ಸಚಿವ ಅನಂತಕುಮಾರ್ ಹೆಗಡೆ ಬಿಜೆಪಿ ನಾಯಕರಿಂದಲೇ ಏಟು

ಬೆಂಗಳೂರು: ಕನ್ನಡ ಮಾತನಾಡುವವರು ಕಡಿಮೆಯಾಗುತ್ತಿದ್ದಾರೆ ಎನ್ನುವ ಮೂಲಕ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ...

Widgets Magazine