ಜಗ್ಗೇಶ್ ಟ್ವಿಟರ್ ವಾರ್ ಗೆ ಪ್ರಕಾಶ್ ರೈ ತಿರುಗೇಟು! ಟ್ವೀಟ್ ವಾರ್ ಗೆ ಟ್ವಿಸ್ಟ್

ಬೆಂಗಳೂರು, ಮಂಗಳವಾರ, 20 ಫೆಬ್ರವರಿ 2018 (08:35 IST)

Widgets Magazine

ಬೆಂಗಳೂರು: ರಾಜಕೀಯ ಅರ್ಹತೆ ವಿಚಾರವಾಗಿ ನವರಸನಾಯಕ ಜಗ್ಗೇಶ್, ಪ್ರಕಾಶ್ ರೈಗೆ ಟ್ವಿಟರ್ ನಲ್ಲಿ ಗಂಡಸ್ಸುತನದ ಸವಾಲು ಹಾಕಿದ್ದು ನೆನಪಿರಬಹುದು. ಇದೀಗ ಜಗ್ಗೇಶ್ ಟ್ವೀಟ್ ಗೆ ಪ್ರಕಾಶ್ ರೈ ತಿರುಗೇಟು ನೀಡಿದ್ದಾರೆ.
 

ಮೋದಿಗೆ ಪ್ರಧಾನಿಯಾಗುವ ಅರ್ಹತೆಯಿಲ್ಲ ಎಂದಿದ್ದ ಪ್ರಕಾಶ್ ರೈ ವಿರುದ್ಧ ಸರಣಿ ಟ್ವೀಟ್ ಮಾಡಿದ್ದ ಜಗ್ಗೇಶ್ ಅರ್ಹತೆ ಬಗ್ಗೆ ಹೇಳಲು ನಿಮಗೇನು ಅರ್ಹತೆಯಿದೆ? ಗಂಡಸ್ಸುತನವಿದ್ದರೆ ಚುನಾವಣೆಗೆ ಸ್ಪರ್ಧಿಸಿ ಎಂದು ಕಿಡಿ ಕಾರಿದ್ದರು.
 
ಇದಕ್ಕೀಗ ಪ್ರತಿಕ್ರಿಯಿಸಿರುವ ಪ್ರಕಾಶ್ ರೈ, ಮೊದಲು ನಿಮ್ಮ ಭಾಷೆ ಮೇಲೆ ಹಿಡಿತವಿರಲಿ. ಜಗ್ಗೇಶ್ ರವರೆ ಭಿನ್ನಾಭಿಪ್ರಾಯಗಳ ಕುರಿತು ಚರ್ಚಿಸಬೇಕೇ ಹೊರತು, ನಿಮ್ಮಿಂದ ಇಂಥಾ ಕೀಳು ಅಭಿರುಚಿಯ ಮಾತುಗಳು ಖಂಡನೀಯ.. ಎಲ್ಲರ ಮನಸ್ಸಾಕ್ಷಿ.. ಕನ್ನಡದ ಸಭ್ಯ ಸಮಾಜ..ನೀವು ಪೂಜಿಸುವ ರಾಯರು ತಮ್ಮನ್ನು ನಿರ್ಧರಿಸಲಿ..ನಿಮಗೊಂದು ದೊಡ್ಡ ನಮಸ್ಕಾರ.. ಎಂದು ತಿರುಗೇಟು ನೀಡಿದ್ದಾರೆ.
 
ಅಷ್ಟೇ ಅಲ್ಲ, ನನ್ನ ಅರ್ಹತೆ ಬಗ್ಗೆ ಮನುಷ್ಯನನ್ನು ಮನುಷ್ಯನಾಗಿ ನೋಡುವ ಮಾನವೀಯ ಹೃದಯವಿದೆ ಎಂದಿದ್ದಾರೆ. ಮೋದಿಜೀಯನ್ನು ವಿರೋಧಿಸುತ್ತಿರುವುದು ಹಣ, ಪ್ರಚಾರಕ್ಕಾಗಿ ಅಲ್ಲ. ಒಬ್ಬ ಪ್ರಜೆಯಾಗಿ ಸಂವಿಧಾದನ ಹಕ್ಕಿನಿಂದಲೇ ಪ್ರಶ್ನಿಸುತ್ತಿದ್ದೇನೆ. ಇದಕ್ಕಾಗಿ ನನ್ನ ಪ್ರತಿಭೆ, ಕಲೆ ಬಗ್ಗೆ ಜರೆಯುವ ಅಗತ್ಯವಿರಲಿಲ್ಲ ಎಂದೂ ತಿರುಗೇಟು ಕೊಟ್ಟಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಶಾಸಕ ಹ್ಯಾರಿಸ್ ಬೆಂಬಲಿಗರಿಂದ ಮಾಧ್ಯಮದವರ ಮೇಲೆ ಹಲ್ಲೆ

ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಗುಂಡಾಗಿರಿ ಪ್ರಕರಣದ ಸುದ್ದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆ ...

news

ರಾಜ್ಯ ಸರ್ಕಾರ ಶೇ10ಕ್ಕಿಂತ ಅಧಿಕ ಕಮಿಷನ್‌ ಸರ್ಕಾರ– ಮೋದಿ

ರಾಜ್ಯ ಸರ್ಕಾರ ಶೇ 10ರಷ್ಟು ಕಮಿಷನ್ ಪಡೆಯುವ ಸರ್ಕಾರವಲ್ಲ, ಅದಕ್ಕಿಂತಲೂ ಹೆಚ್ಚಿನ ಕಮಿಷನ್ ಪಡೆಯುವ ಸರ್ಕಾರ ...

news

ದಾರ್ಮಿಕ ಭಾವನೆ ಹೆಚ್ಚುತ್ತಿದೆ– ಮಹಾಮಸ್ತಕಾಭಿಷೇಕದಲ್ಲಿ ಮೋದಿ

ದೇಶದಲ್ಲಿ ಧಾರ್ಮಿಕ ಭಾವನೆ ಹೆಚ್ಚಾಗುತ್ತಿದ್ದು, ಬಾಹುಬಲಿಯ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಂಡಿರುವುದು ...

news

ಮೊಹಮ್ಮದ್ ನಲಪಾಡ್‌ಗೆ ರಾಜಾತಿಥ್ಯ ನೀಡಿಲ್ಲ– ರಾಮಲಿಂಗಾರೆಡ್ಡಿ

ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್‌ಗೆ ರಾಜಾತಿಥ್ಯ ನೀಡಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ...

Widgets Magazine