Widgets Magazine

ಮಂಡ್ಯದಲ್ಲಿ ನಿಖಿಲ್ ಹೆಸರು ಘೋಷಣೆ

ಬೆಂಗಳೂರು| Jagadeesh| Last Modified ಗುರುವಾರ, 14 ಮಾರ್ಚ್ 2019 (17:04 IST)
ಹಾಸನದ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಹೆಸರು ಘೋಷಣೆ ಹಿನ್ನೆಲೆಯಲ್ಲಿ ಇಂದು ಮಂಡ್ಯಕ್ಕೆ ತೆರಳಿರುವ ಸಿಎಂ ಕುಮಾರಸ್ವಾಮಿ ಹಾಗೂ ಹೆಚ್ ಡಿ ದೇವೇಗೌಡ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಹೆಸರು ಅಧಿಕೃತವಾಗಿ ಘೋಷಣೆ ಮಾಡುವುದು ಖಚಿತವಾಗಿದೆ.

ನಿಖಿಲ್ ಕುಮಾರಸ್ವಾಮಿ ‌ಹೆಸರು ಘೋಷಣೆ ಮಾಡಲಿರುವ ದೇವೇಗೌಡರು, ಚುನಾವಣೆಗೆ ಭರದ ಸಿದ್ಧತೆ ನಡೆಸುವುದಕ್ಕೆ ಸೂಚನೆ ನೀಡಲಿದ್ದಾರೆ.

ಪ್ರಚಾರದ ನಂತರ ಮಂಡ್ಯ ಶಾಸಕರ ಜೊತೆ ಸಭೆ ನಡೆಸಲಿರುವ ಸಿಎಂ, ನಿಖಿಲ್ ‌ಕುಮಾರಸ್ವಾಮಿ ಗೆಲ್ಲಿಸುವುದಕ್ಕೆ ಮಾಡಿಕೊಳ್ಳಬೇಕಾದ ತಂತ್ರಗಳ ಕುರಿತು ಚರ್ಚೆ ನಡೆಸಲಿದ್ದಾರೆ.

ಬೆಂಗಳೂರಿನಿಂದ ಮಂಡ್ಯಕ್ಕೆ ತೆರಳಿದ ಸಿಎಂ ಜೊತೆಯಲ್ಲೇ ತೆರಳಿದ ಎಚ್. ವಿಶ್ವನಾಥ ಹಾಗೂ ಸಚಿವ ಸಾ ರಾ ಮಹೇಶ್ ಅವರಿದ್ದಾರೆ. ಬಂಡೆಪ್ಪ ಖಾಶೆಂಪೂರ್, ಮಧುಬಂಗಾರಪ್ಪ, ಕೋನರೆಡ್ಡಿ ಕೂಡಾ ಸಿಎಂಗೆ ಸಾಥ್ ನೀಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :