Widgets Magazine

ರಾಜ್ಯದ ಮೊದಲ ಮಹಿಳಾ ಡಿಜಿಪಿ ಆಗಿ ನೀಲಮಣಿ ರಾಜು ನೇಮಕ

ಬೆಂಗಳೂರು, ಮಂಗಳವಾರ, 31 ಅಕ್ಟೋಬರ್ 2017 (15:27 IST)

Widgets Magazine

ಬೆಂಗಳೂರು: ರಾಜ್ಯದ ನೂತನ ಹಾಗೂ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕರಾಗಿ ನೀಲಮಣಿ ಎನ್.ರಾಜು ನೇಮಕವಾಗಿದ್ದಾರೆ.


ಡಿಜಿಪಿಯಾಗಿ ನೀಲಮಣಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಮೊದಲ ಮಹಿಳಾ ಡಿಜಿಪಿಯಾಗಿ ನೀಲಮಣಿ ಎನ್.ರಾಜು ನೇಮಕಗೊಂಡಿದ್ಧಾರೆ.  ಹಾಲಿ ಡಿಜಿಪಿ ಆರ್‌.ಕೆ.ದತ್ತ ಅಧಿಕಾರಾವಧಿ ಇಂದು(ಅ.31) ಮುಕ್ತಾಯವಾಗಲಿದೆ. ಹೀಗಾಗಿ ಈ ಸ್ಥಾನಕ್ಕೆ 1983 ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ನೀಲಮಣಿ ಎನ್.ರಾಜು ಇಂದು ಸಂಜೆ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಹಿರಿಯ ಐಪಿಎಸ್ ಅಧಿಕಾರಿಗಳಾದ ಎಂ.ಎನ್.ರೆಡ್ಡಿ, ಮತ್ತು ನೀಲಮಣಿ ರಾಜು ನಡುವೆ ಡಿಜಿಪಿ ಸ್ಥಾನಕ್ಕಾಗಿ ತೀವ್ರ ಪೈಪೋಟಿಯಿತ್ತು. ಆದರೆ ಅಂತಿಮವಾಗಿ ಹಿರಿತನ ಮತ್ತು ಸೇವಾ ಜೇಷ್ಠತೆಯ ಆಧಾರದ ಮೇಲೆ ನೀಲಮಣಿ ರಾಜುರನ್ನು ಸರ್ಕಾರ ಆಯ್ಕೆ ಮಾಡಿದೆ.

25 ವರ್ಷ ಕೇಂದ್ರ ಸೇವೆಯಲ್ಲಿದ್ದ ನೀಲಮಣಿ ರಾಜು, ಇತ್ತೀಚೆಗೆ ರಾಜ್ಯಕ್ಕೆ ಮರಳಿದ್ದರು. ಇವರು ಆಂತರಿಕ ವಿಭಾಗದ ಭದ್ರತೆಯ ಡಿಜಿಪಿ, ರಾಜ್ಯ ಗೃಹರಕ್ಷಕ, ಅಗ್ನಿಶಾಮಕ ದಳದ ಡಿಜಿಪಿಯಾಗಿ ಸೇವೆ ಸಲ್ಲಿಸಿದ್ದಾರೆ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಅಪರೂಪದ ಶಸ್ತ್ರಚಿಕಿತ್ಸೆ: ರೋಗಿ ಹೊಟ್ಟೆಯಲ್ಲಿತ್ತು 600 ಮೊಳೆ..!

ಪಶ್ಚಿಮ ಬಂಗಾಳ: ಶಸ್ತ್ರಚಿಕಿತ್ಸೆಯಲ್ಲಿ ವೈದ್ಯರು ಮಾನಸಿಕ ಅಸ್ವಸ್ಥ ವ್ಯಕ್ತಿಯ ಹೊಟ್ಟೆಯಲ್ಲಿದ್ದ 600 ಕ್ಕೂ ...

news

ಮದ್ಯ ಸೇವಿಸಲು ಹಣವಿಲ್ಲದ ಹೆಡ್ ಮಾಸ್ಟರ್ ಮಾಡಿದ್ದೇನ್ ಗೊತ್ತಾ..?

ಮೈಸೂರು: ಸರ್ಕಾರಿ ಶಾಲೆ ಮುಖ್ಯ ಶಿಕ್ಷಕನೊಬ್ಬ ಮದ್ಯಕ್ಕಾಗಿ ಬಿಸಿಯೂಟದ ಅಕ್ಕಿ ಮಾರಲು ಯತ್ನಿಸಿರುವ ಘಟನೆ ...

news

2019ರ ಲೋಕಸಭೆ ಚುನಾವಣೆಯಲ್ಲಿ ಕನ್ಹಯ್ಯಾ ಕುಮಾರ್ ಕಣಕ್ಕೆ

ನವದೆಹಲಿ: ಲೋಕಸಭೆ ಚುನಾವಣೆಗೆ ಇನ್ನೂ ಒಂದುವರೆ ವರ್ಷಗಳು ದೂರವಿದೆ. ಆದರೆ, ಈಗಾಗಲೇ ಬಿಹಾರ್‌ದಲ್ಲಿರುವ ...

news

ಮದುವೆ ಪ್ರಸ್ತಾಪ ತಿರಸ್ಕರಿಸಿದ ಯುವತಿ ಅಪಹರಿಸಿ 4 ತಿಂಗಳುಗಳವರೆಗೆ ಅತ್ಯಾಚಾರ

ಗ್ವಾಲಿಯರ್: ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಕ್ಕಾಗಿ ಆರೋಪಿಗಳು 18 ವರ್ಷದ ಯುವತಿಯನ್ನು ಅಪಹರಿಸಿ ನಾಲ್ಕು ...

Widgets Magazine Widgets Magazine