ಮುಗ್ಗರಿಸಿದ ಸಿಎಂ ಸಿದ್ದರಾಮಯ್ಯನವರಿಗೆ ಆಸರೆ ನೀಡಿದ ನಿಸಾರ್ ಅಹಮ್ಮದ್

ಮೈಸೂರು, ಶುಕ್ರವಾರ, 22 ಸೆಪ್ಟಂಬರ್ 2017 (09:40 IST)

ಮೈಸೂರು: ದಸರಾಗೆ ಚಾಲನೆ ನೀಡಲು ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆ ಹೋಗುವಾಗ ಮುಗ್ಗಿರಿಸಿದ ಘಟನೆ ನಡೆದಿದೆ. ಆದರೆ ಆ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಸಾಹಿತಿ ನಿಸಾರ್ ಅಹಮ್ಮದ್ ಸಿದ್ದರಾಮಯ್ಯನವರಿಗೆ ಆಸರೆ ನೀಡಿದರು.


 
ವೇದಿಕೆ ಕಡೆಗೆ ಹೋಗುತ್ತಿದ್ದ ಸಿಎಂ ಪಂಚೆ ಕಾಲಿಗೆ ಸುತ್ತಿಕೊಂಡು ಮುಗ್ಗರಿಸಿದರು. ಇನ್ನೇನು ಬೀಳಲಿದ್ದ ಅವರನ್ನು ಪಕ್ಕದಲ್ಲಿಯೇ ಇದ್ದ ನಿಸಾರ್ ಅಹಮ್ಮದ್ ಕೈ ಹಿಡಿದು ತಡೆದರು. ಇದರಿಂದಾಗಿ ಹೆಚ್ಚಿನ ಅನಾಹುತ ಸಂಭವಿಸಲಿಲ್ಲ.
 
ನಂತರ ಕಾರ್ಯಕ್ರಮ ಮುಗಿಸಿ ಕಾರಿನ ಬಳಿಗೆ ಆಗಮಿಸುತ್ತಿದ್ದಂತೆ ಕಾಲಿಲ್ಲದ ವೃದ್ಧೆಯೊಬ್ಬರು ಸಿಎಂ ಎದುರು ಸಹಾಯಕ್ಕಾಗಿ ಅಂಗಲಾಚಿದರು. ಈ ಸಂದರ್ಭದಲ್ಲಿ ಆಕೆಗೆ ಮನೆ ಮಂಜೂರು ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಸಿಎಂ ತಮ್ಮ ಜೇಬಿನಲ್ಲಿದ್ದ 5 ಸಾವಿರ ರೂ. ನೀಡಿ ಸಾಂತ್ವನ ನೀಡಿದರು.
 
ಇದನ್ನೂ ಓದಿ.. ದನ, ಕರುಗಳಿದೆಯಾ? ಒಎಲ್ ಎಕ್ಸ್ ನಲ್ಲಿ ಮಾರಿ ಬಿಡಿ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಧಾನಿ ಮೋದಿಗೆ ಹೆದರಿ ಆಗಾಗ ನೆಲೆ ಬದಲಿಸಿದ್ದ ದಾವೂದ್

ನವದೆಹಲಿ: ಭಾರತದಲ್ಲಿ ಪ್ರಧಾನಿ ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆ ದಾಳಿಯ ಭೀತಿಯಿಂದ ಪಾಕ್ ನಲ್ಲಿ ...

news

ಅಥಣಿಯಿಂದ ಸ್ಪರ್ಧಿಸುವಂತೆ ಸಿಎಂ ಸಿದ್ದರಾಮಯ್ಯಗೆ ಮನವಿ: ರಮೇಶ್ ಜಾರಕಿಹೊಳಿ

ಬೆಳಗಾವಿ: ಜಿಲ್ಲೆಯ ಅಥಣಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ...

news

ನಿಗದಿತ ಅವಧಿಗೂ ಮೊದಲೇ ಕಬಿನಿ ಭರ್ತಿ: ಬಾಗಿನ ಅರ್ಪಿಸಿದ ಸಿಎಂ

ಮೈಸೂರು: ಈ ಬಾರಿ ಕೇರಳದ ವೈನಾಡಿನಲ್ಲಿ ಭಾರಿ ಮಳೆಯಾಗಿದ್ದು, ಕಬಿನಿ ಜಲಾಶಯ ಭರ್ತಿಯಾಗಿದೆ. ಈ ನಿಟ್ಟಿನಲ್ಲಿ ...

news

ಶಾಂತಿಭಂಗ ಮಾಡುತ್ತಿದ್ದ ಇಬ್ಬರು ಆರೋಪಿಗಳ ಗಡಿಪಾರು

ಹುಬ್ಬಳ್ಳಿ: ಸಮಾಜದ ಸ್ವಾಸ್ಥ್ಯ, ಸಮಾಜ ಘಾತಕ ಚಟುವಟಿಕೆಯಲ್ಲಿ ಭಾಗಿಯಾಗಿ ಶಾಂತಿ ಕದಡುತ್ತಿದ್ದ ಆರೋಪದ ಮೇಲೆ ...

Widgets Magazine
Widgets Magazine