ಬಿಬಿಎಂಪಿ ಮೇಯರ್, ಉಪಮೇಯರ್ ಸ್ಥಾನ ಬಿಜೆಪಿಗೆ ಒಲಿಯಲಿದೆ: ಅಶೋಕ್

ಬೆಂಗಳೂರು, ಮಂಗಳವಾರ, 12 ಸೆಪ್ಟಂಬರ್ 2017 (16:52 IST)

ಬೆಂಗಳೂರು: ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿಗೆ ಆಸಕ್ತಿ ಇಲ್ಲ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಹೇಳಿದ್ದಾರೆ.


ಅರಮನೆ ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಫ್ರಾಕ್ಸಿ ಮತದಾನ ಮಾಡಿರುವ ಕಾಂಗ್ರೆಸ್ ನ ಎಂಟು ಶಾಸಕರ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೇವೆ. ಒಂದೆರಡು ದಿನಗಳಲ್ಲಿ ಚುನಾವಣಾ ಆಯೋಗದ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಹಾಗಾದಲ್ಲಿ ಕಾಂಗ್ರೆಸ್ ಶಾಸಕರ ಸದಸ್ಯತ್ವ ರದ್ದಾಗುತ್ತದೆ. ಒಟ್ಟು ಸದಸ್ಯರ ಸಂಖ್ಯೆ ಕಡಿಮೆಯಾಗಿ ಬಿಜೆಪಿಗೆ ಸಹಜವಾಗಿಯೇ ಮೇಯರ್, ಉಪಮೇಯರ್ ಸ್ಥಾನ ಸಿಗುತ್ತದೆ. ಹಿಂಬಾಗಿಲ ಮೂಲಕ ಅಧಿಕಾರ ಗ್ರಹಣ ನಮಗೆ ಬೇಕಿಲ್ಲ. ಕಾಂಗ್ರೆಸ್-ಜೆಡಿಎಸ್ ಅವಧಿಯಲ್ಲಿ ಬಿಬಿಎಂಪಿಯಲ್ಲಿ ಆಗಿರುವ ಭಾರಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣಗಳನ್ನು ನಮ್ಮ ಮೇಲೆ ಎಳೆದುಕೊಳ್ಳುವುದು ಬೇಕಿಲ್ಲ. ದೇವೇಗೌಡರಾಗಲೀ, ಕುಮಾರಸ್ವಾಮಿಯವರಾಗಲೀ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.

ಗೌರಿ ಲಂಕೇಶ ಹತ್ಯೆ ವಿರೋಧಿಸಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಇದೊಂದು ಕಾಂಗ್ರೆಸ್ ಸರ್ಕಾರದ ಕೃಪಾಪೋಷಿತ ಸಮಾವೇಶ. ತನಿಖೆಯ ದಿಕ್ಕು ತಪ್ಪಿಸಲು ಸಮಾವೇಶ ಮಾಡಲಾಗುತ್ತಿದೆ. ಹತ್ಯೆ ಪ್ರಕರಣ ಮರೆಮಾಚಲು ಸಮಾವೇಶ ಮಾಡಲಾಗುತ್ತಿದೆ. ಪ್ರಕರಣದ ಗಮನ ಬೇರೆಡೆ ಸೆಳೆಯಲು ಸಮಾವೇಶ ಮಾಡಲಾಗುತ್ತಿದೆ. ಇದು ನೂರಕ್ಕೆ ನೂರರಷ್ಟು ಇದು ಸಿಎಂ ಕೃಪಾಪೋಷಿತ ಸಮಾವೇಶ ಎಂದು ಪ್ರತಿರೋಧ ಸಮಾವೇಶ ವಿರುದ್ಧ ಆರ್.ಅಶೋಕ್ ಕಿಡಿ ಕಾಡಿದ್ದಾರೆ.

ಪ್ರಕರಣ ನಡೆದು ಇಷ್ಟು ದಿನ ಕಳೆದರೂ ಆರೋಪಿಗಳ ಬಂಧನವಾಗ್ತಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಇದೇ ಸಾಕ್ಷಿ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಪ್ರಹ್ಲಾದ್ ಜೋಷಿ ಮಾತನಾಡಿ, ಪ್ರತಿರೋಧ ಸಮಾವೇಶ ತಥಾಕಥಿತ ಬುದ್ದಿ ಜೀವಿಗಳು ಮಾಡುತ್ತಿರೋದು. ಮೊದಲಿಗೆ ರಾಹುಲ್ ಗಾಂಧಿ ಹಾಗೂ ರಾಮಚಂದ್ರ ಗುಹಾ ಅವರನ್ನು ಮೊದಲು ಎಸ್ಐಟಿ ತನಿಖೆಗೆ ಒಳಪಡಿಸಲಿ. ಅಪರಾಧಿಗಳ ಸುಳಿವು ಕೊಟ್ಟವರಿಗೆ ಇಡಲಾಗಿರುವ ಹತ್ತು ಲಕ್ಷ ರೂ. ಬಹುಮಾನವನ್ನು ರಾಹುಲ್ ಗಾಂಧಿ, ರಾಮಚಂದ್ರ ಗುಹಾ ಅವರಿಗೆ ಕೊಡಲಿ. ಅವರು ತಲಾ ಐದು ಲಕ್ಷ ರೂ ಹಂಚಿಕೊಳ್ಳಲಿ ಎಂದು ವ್ಯಂಗ್ಯವಾಡಿದ್ದಾರೆ.

ಸಿ.ಟಿ.ರವಿ ಮಾತನಾಡಿ, ಗೌರಿ ಲಂಕೇಶ್ ಹತ್ಯೆ ವಿಚಾರದಲ್ಲಿ ಇವತ್ತು ಆರ್ ಎಸ್ಎಸ್, ಬಿಜೆಪಿ ಮೇಲೆ ಆರೋಪ ಮಾಡುತ್ತಿರುವವರು ಸತ್ಯ ಹೊರ ಬಂದಾಗ ಬುರ್ಖಾ ಹಾಕಿಕೊಂಡು ಓಡಾಡಬೇಕಾಗುತ್ತದೆ. ಇದು ಪ್ರತಿರೋಧ ಸಮಾವೇಶ ಅಲ್ಲ. ಬಿಜೆಪಿ, ಆರ್ ಎಸ್ಎಸ್ ವಿರೋಧಿ ಸಮಾವೇಶ ಎಂಬಂತಾಗಿದೆ. ಆರ್ ಎಸ್ಎಸ್ ನ್ನು ವಿರೋಧಿಸುವುದು ರಾಹುಲ್ ಗಾಂಧಿಯವರ ತಾತ ನೆಹರು ಅವರಿಂದ ಬಂದ ಬಳುವಳಿ ಎಂದು ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿಯವರಂತೆ ಸಿಬಿಐ ಪ್ರಾಮಾಣಿಕತೆ ನಾವು ಪ್ರಶ್ನಿಸೋಲ್ಲ: ಸಿಎಂ

ಬಳ್ಳಾರಿ: ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ವಿಪಕ್ಷದಲ್ಲಿದ್ದ ...

news

ನಾನು ನೋಡಿದ್ದನ್ನ, ಕೇಳಿದ್ದನ್ನ ಹೇಳಿದ್ದೇನೆ: ಎಂ.ಬಿ. ಪಾಟೀಲ್ ಪ್ರತಿಕ್ರಿಯೆ

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಿದ್ದಗಂಗಾ ಶ್ರೀಗಳ ಬೆಂಬಲವಿದೆ. ಶ್ರೀಗಳ ನನ್ನ ಜೊತೆ ಹೇಳಿದ್ದಾರೆಂದು ...

news

ರಾಹುಲ್ ಗಾಂಧಿ ವಿರುದ್ಧ ಸ್ಮೃತಿ ಇರಾನಿ ವಾಗ್ದಾಳಿ

ನವದೆಹಲಿ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಭಾಷಣ ದೇಶದಲ್ಲಿ ಯಾರು ಕೇಳುವುದಿಲ್ಲ. ಆದ್ದರಿಂದ ...

news

ಗೌರಿ ಹಂತಕರನ್ನ ಬಂಧಿಸಿ, ವಿಶ್ವಾಸ ಉಳಿಸಿಕೊಳ್ಳಿ: ಪ್ರತಿರೋಧ ಸಮಾವೇಶದಲ್ಲಿ ವಿಚಾರವಾದಿಗಳ ಆಗ್ರಹ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ಪ್ರಗತಿಪರರು, ವಿಚಾರವಾದಿಗಳು ಬೃಹತ್ ಪ್ರತಿರೋಧ ...

Widgets Magazine