ಡಿಕೆಶಿ ಮನೆಯಲ್ಲಿ ದಾಖಲೆಗಳು ಬಿಟ್ಟರೆ ಬೇರಾವುದೇ ಹಣ, ಒಡವೆ ಸಿಕ್ಕಿಲ್ಲ: ವರದಿ

ಬೆಂಗಳೂರು, ಗುರುವಾರ, 3 ಆಗಸ್ಟ್ 2017 (16:55 IST)

33 ಗಂಟೆಗಳ ಬಳಿಕವೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆ ಮೇಲೆ ಐಟಿ ದಾಳಿ ನಡೆಯುತ್ತಿದೆ. ಐಟಿ ಅಧಿಕಾರಿಗಳು ಮನೆಯೊಳಗೇ ಪರಿಶೀಲನೆ ಮುಂದುವರೆಸಿದ್ದಾರೆ. ಈ ಮಧ್ಯೆ ಡಿಕೆಶಿ ನಿವಾಸದಲ್ಲಿ ಯಾವುದೇ ಹಣ ಮತ್ತು ಒಡವೆ ಸಿಕ್ಕಿಲ್ಲ ೆಂದು ತಿಳಿದುಬಂದಿದೆ.


ಡಿ.ಕೆ. ಶಿವಕುಮಾರ್ ಅವರ ಮನೆಯಲ್ಲಿ ದಾಖಲೆಗಳನ್ನ ಬಿಟ್ಟರೆ ಯಾವುದೇ ಹಣ ಮತ್ತು ಒಡವೆ ಸಿಕ್ಕಿಲ್ಲವೆಂದು ಐಟಿ ಇಲಾಖೆಯೇ ನೀಡಿರುವ ಪತ್ರವನ್ನ ಡಿಕೆಶಿ ಆಪ್ತ ಸಹಾಯಕರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಮಹಜರು ಪ್ರತಿ ಸಹ ಮಾಧ್ಯಮಗಳಿಗೆ ನೀಡಿರುವ ಮಹಜರು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.

ಈ ಮಧ್ಯೆ, ಸಂಜೆ ವೇಳೆ ಡಿಕೆಶಿ ನಿವಾಸದ ಪರಿಶೀಲನೆ ಅಂತ್ಯವಾಗುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಇತ್ತ, ಹಾಸನದಲ್ಲಿ ಡಿಕೆಶಿ ಆಪ್ತ ಸಚಿನ್ ಮತ್ತು ಅವರ ಪತ್ನಿಯನ್ನ ವಿಚಾರಣೆ ನಡೆಸಿದ್ದು, ಬ್ಯಾಂಕ್ ಲಾಕರ್`ಗಳನ್ನ ತೆರೆಸಿ ದಾಖಲೆ ಪತ್ರಗಳನ್ನ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಡಿಕೆಶಿವಕುಮಾರ್ ಐಟಿ ದಾಳಿ ಕಾಂಗ್ರೆಸ್ Itraid Dkshivakumar Congress It Raid

ಸುದ್ದಿಗಳು

news

ಪ್ರಧಾನಿ ಮೋದಿ ಐಟಿ ಆಸ್ತ್ರಕ್ಕೆ ಸಿಎಂ ಸಿದ್ದರಾಮಯ್ಯ ಎಸಿಬಿ ಪ್ರತ್ಯಸ್ತ್ರ?

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆದಾಯ ತೆರಿಗೆ ಇಲಾಖೆ ದಾಳಿಯ ಅಸ್ತ್ರಕ್ಕೆ ಪ್ರತಿಯಾಗಿ ಸಿಎಂ ...

news

ಡಿಕೆಶಿಯ ವಿಧಾನಸೌಧದ ಕಚೇರಿ ಮೇಲೂ ದಾಳಿ..?

ನಿನ್ನೆ ಬೆಳಗ್ಗೆಯಿಂದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ...

news

ಹಿಂದೂ ವಿದ್ಯಾರ್ಥಿಗಳಿಗೆ ನಮಾಜ ಮಾಡುವಂತೆ ಒತ್ತಾಯಿಸಿದ ಶಿಕ್ಷಕರು

ಮೆವಾತ್: ನಗರದ ಶಾಲೆಯ ಶಿಕ್ಷಕರು ಹಿಂದು ವಿದ್ಯಾರ್ಥಿಗಳಿಗೆ ನಮಾಜ್ ಮಾಡುವಂತೆ ಒತ್ತಡ ಹೇರುತ್ತಿರುವ ...

news

ರಾಜಕೀಯ ಪ್ರೇರಿತ ದಾಳಿ ವಿರೋಧಿಸಿ ಜನಾಂದೋಲನ: ಸಿಎಂ

ಬೆಂಗಳೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮೇಲಿನ ಐಟಿ ದಾಳಿ ವಿರೋಧಿಸಿ ಜನಾಂದೋಲನ ನಡೆಸಲಾಗುವುದು ಎಂದು ...

Widgets Magazine