ವಿನಯ್ ಗೂ ನನಗೂ ಯಾವುದೇ ಸಂಬಂಧವಿಲ್ಲ: ಈಶ್ವರಪ್ಪ

ಬೆಂಗಳೂರು, ಶನಿವಾರ, 23 ಸೆಪ್ಟಂಬರ್ 2017 (21:36 IST)

ಬೆಂಗಳೂರು: ಮಾಜಿ ಡಿಸಿಎಂ ಪಿಎ ವಿನಯ್ ಕಿಡ್ನಾಪ್ ಯತ್ನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಅಲ್ಲದೆ ಈ ಬಗ್ಗೆ ತನಿಖೆಯೂ ಚುರುಕು ಪಡೆದಿದೆ.


ಆದರೆ ವಿಷಯ ಇದಲ್ಲ. ವಿನಯ್ ಗೂ ತನಗೂ ಸಂಬಂಧವಿಲ್ಲ ಎಂದು ಕೆ.ಎಸ್.ಈಶ್ವರಪ್ಪ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಇಷ್ಟು ದಿನ ಈಶ್ವರಪ್ಪನವರು ವಿನಯ್ ತಮ್ಮ ಆತ್ಮೀಯ ಎನ್ನುತ್ತಿದ್ದರು. ಆದರೆ ಇಂದು ದಿಢೀರನೆ ವಿನಯ್ ಗೂ ನನಗೂ ಸಂಬಂಧವೇ ಇಲ್ಲ ಎಂದು ತಮ್ಮ ಪರ ವಕೀಲರಿಂದ ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ. 

ಈಶ್ವರಪ್ಪ ನ್ಯಾಯಾಲಯದಲ್ಲಿ ಈ ಕುರಿತು ದಾವೆ ಹೂಡಿದ್ದು, ತಡೆ ಆಜ್ಞೆ ಸಹ ತಂದಿದ್ದಾರೆ. ಸಿವಿಲ್ ನ್ಯಾಯಾಲಯ ಕಿಡ್ನಾಪ್ ಯತ್ನ ವಿಚಾರವಾಗಿ ವಿನಯ್ ತಮ್ಮ ಆಪ್ತ ಎಂದು ಸುದ್ದಿ ಬಿತ್ತರಿಸದಂತೆ ಆದೇಶ ನೀಡಿದೆ. ನ್ಯಾಯಾಲಯದ ಆದೇಶದ ಬಗ್ಗೆ ಈಶ್ವರಪ್ಪ ಪರ ವಕೀಲ ಬಿ.ಎಸ್.ರಾಜಶೇಖರ್ ಮೂಲಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸೂಲಿಬೆಲೆ ಚಕ್ರವರ್ತಿ ಬಗ್ಗೆ ಅಸಭ್ಯ ಪದ ಬಳಕೆ… ಸಚಿವರೇ ಇದೇನಾ ಸಭ್ಯತೆ…

ಮಂಗಳೂರು: ಅರಣ್ಯ ಸಚಿವ ರಮಾನಾಥ ರೈ ಸಂಸ್ಕಾರ ಮರೆತಿದ್ದಾರೆ ಅನ್ನಿಸುತ್ತೆ. ಯಾಕಂದ್ರೆ ಮಂಗಳೂರಿನಲ್ಲಿ ನಡೆದ ...

news

ಜಯಲಲಿತಾ ಆರೋಗ್ಯದ ಬಗ್ಗೆ ನಾವೆಲ್ಲರು ಸುಳ್ಳು ಹೇಳಿದ್ದೇವೆ ಕ್ಷಮಿಸಿ: ತಮಿಳುನಾಡು ಸಚಿವ

ಚೆನ್ನೈ: ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಆರೋಗ್ಯದ ಬಗ್ಗೆ ನಾವೆಲ್ಲರು ಜನತೆಗೆ ಸುಳ್ಳು ...

news

ವಿದೇಶಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ: ಬಾಲಕನಿಗೆ ಧರ್ಮದೇಟು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ/ ಮಂಗಳೂರು ಹೊರವಲಯದ ದೇರಳಕಟ್ಟೆಯಲ್ಲಿ ಅಪ್ರಾಪ್ತ ಬಾಲಕನೊಬ್ಬ ವಿದೇಶಿ ...

news

ಗೋಮಾಂಸ ತಿಂದಿದ್ದೇನೆ.. ಕೇಳೋಕೆ ನೀವ್ಯಾರು ಎಂದ ಸಚಿವ ಕಾಗೋಡು ತಿಮ್ಮಪ್ಪ

ಶಿವಮೊಗ್ಗ: ನಾನು ದನದ ಮಾಂಸ ತಿಂದಿದ್ದೇನೆ. ಅದನ್ನು ಕೇಳಲು ನೀವ್ಯಾರು ಎಂದು ಗೋರಕ್ಷಕರಿಗೆ ಸಚಿವ ಕಾಗೋಡು ...

Widgets Magazine
Widgets Magazine