ಉಗ್ರವಾದಿಗಳು ಎಂದು ಹೇಳಿಲ್ಲ– ಉಲ್ಟಾ ಹೊಡೆದ ಸಿದ್ದರಾಮಯ್ಯ

ಮಲೆ ಮಹದೇಶ್ವರ ಬೆಟ್ಟ, ಗುರುವಾರ, 11 ಜನವರಿ 2018 (13:50 IST)

ಆರ್‍ಎಸ್‍ಎಸ್, ಬಿಜೆಪಿಯವರು ಉಗ್ರವಾದಿಗಳು ಎಂದು ಹೇಳಿಲ್ಲ ಎಂದು ಮುಖ್ಯಮಂತ್ರಿ ಉಲ್ಟಾ ಹೊಡೆದಿದ್ದಾರೆ. 
 
ಮಲೆ ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್‍ಎಸ್‍ಎಸ್, ಬಿಜೆಪಿಯವರು ಉಗ್ರವಾದಿಗಳೆಂದು ಹೇಳಿಲ್ಲ.  ಹಿಂದುತ್ವವನ್ನು ಉಗ್ರವಾಗಿ ಪ್ರತಿಪಾದಿಸುತ್ತಾರೆ ಎಂದು ಹೇಳಿದ್ದೇನೆ ಎನ್ನುವ ಮೂಲಕ ಸಮಜಾಯಿಷಿ ನೀಡಿ ನಿನ್ನೆ ನೀಡಿದ್ದ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ.
 
ಯಾರೇ ಆಗಲಿ ಭಯೋತ್ಪಾದನೆಯನ್ನು ಬೆಂಬಲಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿಕೆ ನೀಡಿದ್ದೇನೆಂದು ಹೇಳಿದ್ದಾರೆ. ಸರ್ಕಾರದ ಸಾಧನೆಗಳ ಬಗ್ಗೆ ಪ್ರಚಾರ ಮಾಡುತ್ತಿದ್ದೇವೆಯೇ ಹೊರತು ಪಕ್ಷದ ಪರ ಪ್ರಚಾರ ಮಾಡುತ್ತಿಲ್ಲ ಎಂದು ಟೀಕೆಗಳಿಗೆ ಉತ್ತರಿಸಿದ್ದಾರೆ.
 
ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಕಹಿ ಉಣಿಸಿದ್ದೇನೆ. ವಿಧಾನಸಭೆ ಚುನಾವಣೆಯಲ್ಲೂ ಸೋಲಿನ ರುಚಿ ತೋರಿಸುತ್ತೇವೆ. ಚಾಮುಂಡೇಶ್ವರಿ, ಗುಂಡ್ಲುಪೇಟೆ, ನಂಜನಗೂಡು ಕ್ಷೇತ್ರದಲ್ಲಿ ಮತ್ತೆ ನಾವೇ ಗೆಲ್ಲುತ್ತೇವೆ. ವಿ.ಸೋಮಣ್ಣ ಅವರು ರಾಜಕೀಯದಲ್ಲಿ ನಿವೃತ್ತಿ ಹೊಂದುವುದು ಬೇಡ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಉ್ರಗವಾದಿಗಳು ಸಿದ್ದರಾಮಯ್ಯ ಬಿಜೆಪಿ Bleeding Siddaramaiah Bjp

ಸುದ್ದಿಗಳು

news

ಮಗಳನ್ನು ಮದುವೆಯಾಗಲು ಮುಂದಾದ ಚಿಕ್ಕಪ್ಪ!

ಸಂಬಂಧದಲ್ಲಿ ಮಗಳಾಗಬೇಕಾದ ಯುವತಿಯೊಂದಿಗೆ ಮದುವೆಯಾಗಲು ಯುವಕ ಮುಂದಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ...

news

ಸ್ಯಾನಿಟರಿ ಪ್ಯಾಡ್ ಗಳನ್ನು ಪ್ರಧಾನಿ ಮೋದಿಗೆ ಕಳುಹಿಸಲಿದ್ದಾರಂತೆ ವಿದ್ಯಾರ್ಥಿಗಳು!

ಮಧ್ಯಪ್ರದೇಶ : ಪ್ರಧಾನಿ ಮೋದಿ ಅವರು ಸ್ಯಾನಿಟರಿ ಪ್ಯಾಡ್ ಗಳ ಮೇಲೆ ಜಿಎಸ್ ಟಿ ತೆರಿಗೆಯನ್ನು ವಿಧಿಸಿದ ...

news

ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ- ಆಂಜನೇಯ

ರಾಜ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಬ್ಬರೂ ಬಂದರೂ, ...

news

ಹೊಸ ವರ್ಷವೆಂದು ಅತ್ಯಾಚಾರ ಎಸಗಿದ ಬಿಜೆಪಿ ಕಾರ್ಯಕರ್ತ

ದಲಿತ ಮಹಿಳೆಯ ಮನೆಗೆ ನುಗ್ಗಿದ ಬಿಜೆಪಿ ಕಾರ್ಯಕರ್ತನೊಬ್ಬ ಹೊಸ ವರ್ಷವೆಂದು ಅತ್ಯಾಚಾರ ಎಸಗಿರುವ ಘಟನೆ ...

Widgets Magazine