ಶಶಿಕಲಾಗೆ ವಿಶೇಷ ಆತಿಥ್ಯ ಒಪ್ಪಿಕೊಂಡ ಅಧಿಕಾರಿಗಳು

Bangalore, ಸೋಮವಾರ, 24 ಜುಲೈ 2017 (10:16 IST)

Widgets Magazine

ಬೆಂಗಳೂರು: ಜೈಲಿನಲ್ಲಿ ಶಶಿಕಲಾ ನಟರಾಜನ್ ಮತ್ತು ಕರೀಂ ಲಾಲ್ ತೆಲಗಿಗೆ ವಿಐಪಿ ಆತಿಥ್ಯ ನೀಡಲಾಗುತ್ತಿತ್ತು ಎನ್ನುವುದನ್ನು ಅಧಿಕಾರಿಗಳು ಸದನ ಸಮಿತಿ ಎದುರು ಒಪ್ಪಿಕೊಂಡಿದ್ದಾರೆ.


 
ಬಿಜೆಪಿ ಶಾಸಕ ಹಾಗೂ ಮಾಜಿ ಗೃಹ ಸಚಿವ ಆರ್ ಅಶೋಕ್ ನೇತೃತ್ವದ ಸಮಿತಿ ಮುಂದೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಶಶಿಕಲಾಗೆ ಮಹಿಳಾ ವಿಭಾಗದ ಪಕ್ಕದಲ್ಲೇ ವಿಶೇಷ ಅಡುಗೆ ಕೋಣೆಯಲ್ಲಿ ವಿಶೇಷ ಬಾಣಸಿಗರಿಂದ ವಿಶೇಷ ಊಟ ರವಾನೆಯಾಗುತ್ತಿತ್ತು. ಇನ್ನು ಕರೀಂ ಲಾಲ್ ತೆಲಗಿಯ ಬಾಡಿ ಮಸಾಜ್ ಮಾಡಿಸುವುದಕ್ಕೆಂದೇ ಕೆಲವು ಖೈದಿಗಳನ್ನು ನಿಯೋಜಿಸಲಾಗಿತ್ತು ಎಂದು ಡಿಐಜಿ ರೂಪಾ ತಮ್ಮ ವರದಿಯಲ್ಲಿ ಹೇಳಿದ್ದರು.
 
ಇದು ತೀವ್ರ ಸಂಚಲನ ಸೃಷ್ಟಿಸಿದ ಮೇಲೆ ಕಾರಾಗೃಹ ಇಲಾಖೆಯಿಂದ ರೂಪಾ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಇದೀಗ ಇದರ ವಿಚಾರಣೆ ನಡೆಸಿದ ಸದನ ಸಮಿತಿ ಎದುರು ಪರಪ್ಪನ ಅಗ್ರಹಾರ ಅಧಿಕಾರಿಗಳು ಸತ್ಯ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ 15 ದಿನಗಳೊಳಗೆ ವರದಿ ತಯಾರಿಸಿಕೊಡುವಂತೆ ಶಾಸಕ ಅಶೋಕ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
 
ಇದನ್ನೂ ಓದಿ..  ಬ್ರಿಟಿಷ್ ಪತ್ರಕರ್ತನಿಗೆ ಸೆಹ್ವಾಗ್ ಪಂಚ್!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ರಮಾನಾಥ್ ರೈ ಗೆ ಗೃಹಖಾತೆ?

ಬೆಂಗಳೂರು: ಜಿ. ಪರಮೇಶ್ವರ್ ಅವರಿಂದ ತೆರವಾಗಿರುವ ಗೃಹ ಖಾತೆಗೆ ಇನ್ನೂ ಹೊಸ ಸಚಿವರ ನೇಮಕ ನಡೆದಿಲ್ಲ. ಆದರೆ ...

news

ಉತ್ತರ ಪ್ರದೇಶದಲ್ಲಿ ಮಹಿಳೆಯರಿಗಾಗಿಯೇ ವಿಶೇಷ ಬಸ್

ಲಕ್ನೋ: ಮಹಿಳೆಯರ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೇ ಮಾದರಿಯಲ್ಲಿ ಉತ್ತರ ...

news

ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್. ರಾವ್ ವಿಧಿವಶ

ಬಾಹ್ಯಾಕಾಶ ವಿಜ್ಞಾನಿ ಮತ್ತು ಇಸ್ರೋ ಮಾಜಿ ಅಧ್ಯಕ್ಷ ಯು.ಆರ್. ರಾವ್ ವಿಧಿವಶರಾಗಿದ್ದಾರೆ. ಇಂದಿರಾನಗರದ ...

news

ಹೆಂಡತಿಗಾಗಿ ಶೌಚಾಲಯ ಕಟ್ಟಲು ಸಾಧ್ಯವಿಲ್ಲ ಎಂದರೆ ಹೆಂಡತಿಯನ್ನೇ ಮಾರಿ ಬಿಡಿ ಎಂದ ಜಡ್ಜ್ ಸಾಹೇಬ್ರು

ಔರಂಗಾಬಾದ್:ಹೆಂಡತಿಗಾಗಿ ಶೌಚಾಲಯವನ್ನು ನಿರ್ಮಿಸಲು ಸಾಧ್ಯವಾಗದಿದ್ದರೆ ಹೆಂಡತಿಯನ್ನೇ ಮಾರಿ ಬಿಡಿ ಎಂದು ...

Widgets Magazine Widgets Magazine