ಮತ್ತೆ ಗರಿಗೆದರಿದ ರಾಯಣ್ಣ ಬ್ರಿಗೇಡ್ ಚಟುವಟಿಕೆ: ಬಿಎಸ್‌ವೈಗೆ ಈಶ್ವರಪ್ಪ ಸವಾಲ್

ಬೆಂಗಳೂರು, ಗುರುವಾರ, 20 ಏಪ್ರಿಲ್ 2017 (13:48 IST)

Widgets Magazine

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಕಾರ್ಯನಿರ್ವಹಣೆಯಿಂದ ಅಸಮಾಧಾನಗೊಂಡಿರುವ ಕೆ.ಎಸ್.ಈಶ್ವರಪ್ಪ, ಮತ್ತೆ ರಾಯಣ್ಣ ಬ್ರಿಗೇಡ್ ಚಟುವಟಿಕೆ ಆರಂಭಿಸಿದ್ದಾರೆ.
 
ಇಂದು ಸಂಗೊಳ್ಳಿ ರಾಯಣ್ಣ ಯುವ ಬ್ರಿಗೇಡ್‌ ಉದ್ಘಾಟಿಸಿ ಮಾತನಾಡಿದ ಈಶ್ವರಪ್ಪ, ಬ್ರಿಗೇಡ್, ಬಡವರು, ಶೋಷಿತರ ಏಳಿಗೆಯ ಉದ್ದೇಶ ಹೊಂದಿದೆ. ಬ್ರಿಗೇಡ್ ಪದಾಧಿಕಾರಿಗಳು ಸಮಾಜದ ಪರಿವರ್ತನೆಗಾಗಿ ದುಡಿಯಬೇಕು ಎಂದು ಕರೆ ನೀಡಿದರು.
 
ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ನಡೆದ ಒಪ್ಪಂದದಂತೆ ಯಡಿಯೂರಪ್ಪ ಜಿಲ್ಲಾ ಅಧ್ಯಕ್ಷರುಗಳನ್ನು ಬದಲಿಸುತ್ತಿಲ್ಲ. ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಅಸಮಾಧಾನಗೊಂಡಿರುವ  ಈಶ್ವರಪ್ಪ ಇದೀಗ ಬಹಿರಂಗವಾಗಿ ಕಣಕ್ಕೆ ಇಳಿದಿದ್ದಾರೆ.
 
ಉಪಚುನಾವಣೆಯ ಸೋಲಿನಿಂದಾಗಿ ಯಡಿಯೂರಪ್ಪ ವಿರೋಧಿ ಬಣಗಳಿಗೆ ಮತ್ತಷ್ಟು ಬಲ ಬಂದಂತಾಗಿದ್ದು, ಪಕ್ಷದ ಮೇಲೆ ತಮ್ಮ ಹಿಡಿತವನ್ನು ಮತ್ತಷ್ಟು ಬಲಗೊಳಿಸಲು ಯತ್ನಿಸುತ್ತಿವೆ ಎನ್ನುವ ವರದಿಗಳು ಹರಿದಾಡುತ್ತಿವೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕೆ.ಎಸ್.ಈಶ್ವರಪ್ಪ ಯಡಿಯೂರಪ್ಪ ಬಿಜೆಪಿ Yeddyurappa Bjp Sangolli Rayanna Brigade K.s.eashwarappa

Widgets Magazine

ಸುದ್ದಿಗಳು

news

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಸ್‌.ಆರ್.ಪಾಟೀಲ್: ಸಿಎಂ ಸಿದ್ದರಾಮಯ್ಯ ಲಾಬಿ?

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಸ್‌.ಆರ್.ಪಾಟೀಲ್ ಅವರನ್ನು ನೇಮಕ ಮಾಡುವ ಕುರಿತಂತೆ ಸಿಎಂ ...

news

ವಾಟ್ಸಪ್ ವಿಡಿಯೋದಲ್ಲಿ ತಲಾಖ್ ಕೊಟ್ಟ ಭೂಪ!

ಹೈದರಾಬಾದ್: ತ್ರಿವಳಿ ತಲಾಖ್ ನಿಷೇಧದ ಬಗ್ಗೆ ಚರ್ಚೆಗಳಾಗುತ್ತಿರುವ ಬೆನ್ನಲ್ಲೇ ಮಹಿಳೆಯೊಬ್ಬರು ತನ್ನ ಪತಿ ...

news

ಮೂವರು ಶಂಕಿತ ಐಸಿಸ್ ಉಗ್ರರ ಬಂಧನ

ಉತ್ತರಪ್ರದೇಶದ ಎಟಿಎಸ್ ಮತ್ತು ದೆಹಲಿಯ ಪೊಲೀಸ್ ಸ್ಪೆಷಲ್ ಸೆಲ್ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಶಂಕಿತ ...

news

ಫುಟ್ ಪಾತ್ ಮೇಲೆ ಮಲಗಿದ್ದವರ ಮೇಲೆ ಕಾರು ಹರಿಸಿದ ವಿದ್ಯಾರ್ಥಿಗಳು: 1 ಸಾವು

ದೆಹಲಿಯ ಪುಟ್ ಪಾತ್ ಮೇಲೆ ಕಾರು ಹರಿದ ಪರಿಣಾಮ ಪುಟ್ ಪಾತ್ ಮೇಲೆ ಮಲಗಿದ್ದ ವ್ಯಕ್ತಿ ಮೃತಪಟ್ಟು, ಮೂವರು ...

Widgets Magazine