ಯಡಿಯೂರಪ್ಪನವರೇ ಯಾಕೆ ನಿಮಗೆ ಬ್ರಿಗೇಡ್ ಬೇಡ?: ಮತ್ತೆ ಯಡ್ಡಿಗೆ ಈಶ್ವರಪ್ಪ ಟಾಂಗ್

ಬೆಂಗಳೂರು, ಬುಧವಾರ, 11 ಜನವರಿ 2017 (14:34 IST)

Widgets Magazine

ಮಾಜಿ ಮೇಯರ್ ವೆಂಕಟೇಶ ಮೂರ್ತಿ ಅವರಿಗೆ ಎಂಟಾಣೆ ಖರ್ಚು ಮಾಡಿ ನೋಟಿಸ್ ಕೊಟ್ಟಿದ್ದಾರೆ. ಅಮಾನತು ಮೂಲಕ ರಾಜ್ಯಮಟ್ಟದ ನಾಯಕರನ್ನಾಗಿ ಮಾಡಿದ್ದಾರೆ. ಇದಕ್ಕೆ ಬಿಎಸ್‌ವೈ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಅವರಿಗೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಟಾಂಗ್ ನೀಡಿದ್ದಾರೆ.
ರಾಯಣ್ಣ ಬ್ರಿಗೇಡ್ ಸಭೆಯಲ್ಲಿ ಮಾತನಾಡಿದ ಅವರು, ವೆಂಕಟೇಶ ಮೂರ್ತಿ ಅವರನ್ನು ಅಮಾನತು ಮಾಡಿರುವುದರಿಂದ ಎಲ್ಲರೂ ಹೆದರಿರುತ್ತಾರೆ. ಬಿಎಸ್‌ವೈ ಮನಸ್ಸಿನಲ್ಲಿ ಇನ್ನೂ ಗೊಂದಲ ಇದೆ. ಅವರಿಗೆ ಬ್ರಿಗೇಡ್ ಬೇಡ ಎಂದು ಯಾರೋ ಹೇಳಿರುತ್ತಾರೆ. ಯಡಿಯೂರಪ್ಪನವರೇ ಯಾಕೆ ನಿಮಗೆ ಬ್ರಿಗೇಡ್ ಬೇಡ ಎಂದು ನೇರವಾಗಿ ಪ್ರಶ್ನಿಸಿದರು. 
 
ದ್ವಂದ್ವ ಹೇಳಿಕೆ ನೀಡುತ್ತಿರುವ ಈಶ್ವರಪ್ಪ.....
 
ವೈಯಕ್ತಿಕವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿ ಅನ್ನೋ ಆಸೆ. ಆದರೆ, ಹಿಂದುಳಿದ ವರ್ಗಗಳ ಅಭಿವೃದ್ಧಿಯೇ ಬ್ರಿಗೇಡ್‌ನ ಉದ್ದೇಶ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರ ತರಲು ಶ್ರಮಿಸುತ್ತೇನೆ ಎಂದು ದ್ವಂದ್ವ ಹೇಳಿಕೆ ನೀಡಿದರು
 
ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಲ್ಲಿ ಗುರುತಿಸಿಕೊಂಡ ಹಿನ್ನೆಲೆಯಲ್ಲಿ ರಾಯಣ್ಣ ಬ್ರಿಗೇಡ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಮೇಯರ್ ವೆಂಕಟೇಶ ಮೂರ್ತಿ ಅವರನ್ನು ಬಿಜೆಪಿ ಪಾಳಯದಿಂದ ಅಮಾನತು ಮಾಡಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬಿಜೆಪಿ ವಿರುದ್ಧ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮುಖಂಡ ವಾಗ್ದಾಳಿ

ವೆಂಕಟೇಶ್‌ ಮೂರ್ತಿಗೆ ಕೊಟ್ಟಿದ್ದು ಅಮಾನತು ನೋಟಿಸ್ ಅಲ್ಲ, ಲವ್ ಲೇಟರ್ ಎಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ...

news

ಇಂದು ಸಿಧು ಕಾಂಗ್ರೆಸ್ ಸೇರುವ ಸಾಧ್ಯತೆ

ಕ್ರಿಕೆಟರ್ ಪರಿವರ್ತಿತ ರಾಜಕಾರಣಿ, ಭಾರತೀಯ ಜನತಾ ಪಕ್ಷದ ಮಾಜಿ ನಾಯಕ ನವಜೋತ್ ಸಿಧು ಇಂದು ಕಾಂಗ್ರೆಸ್ ...

news

ಸಿಕ್ಕಿಬಿದ್ದ ಬಿಸ್ಮಿಲ್ಲಾ ಖಾನ್ ಶೆಹನಾಯಿ ಕಳ್ಳ; ಅವನ್ಯಾರೆಂದು ತಿಳಿದರೆ ದಂಗಾಗುತ್ತೀರ!

ಖ್ಯಾತ ಶೆಹನಾಯಿ ವಾದಕ ಬಿಸ್ಮಿಲ್ಲಾಖಾನ್ ಅವರ ಶೆಹನಾಯಿ ಕದ್ದ ಕಳ್ಳನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ...

news

ಬಿಜೆಪಿಯಿಂದ ಕೆ.ಎಸ್.ಈಶ್ವರಪ್ಪ ಕಿಕ್‌ಔಟ್?

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಲ್ಲಿ ಗುರುತಿಸಿಕೊಂಡಿದ್ದರಿಂದ ಪಕ್ಷದಿಂದ ಅಮಾನತ್ತುಗೊಂಡಿರುವ ಮಾಜಿ ಮೇಯರ್ ...

Widgets Magazine