ಮತ್ತೊಬ್ಬ ಶಾಸಕನಿಂದ ಅಧಿಕಾರಿಗೆ ಧಮ್ಕಿ: ಇದೇನು ಗುಂಡಾರಾಜ್ಯವೇ?

ಬೆಳಗಾವಿ, ಮಂಗಳವಾರ, 10 ಜನವರಿ 2017 (16:32 IST)

Widgets Magazine

ವೈದ್ಯರ ಮೇಲೆ ಸಂಸದ ಅನಂತ್ ಕುಮಾರ್ ಹೆಗಡೆ ನಡೆಸಿದ ಹಲ್ಲೆ ಪ್ರಕರಣ ಹಾಗೂ ರಾಜು ಕಾಗೆ ಪುತ್ರಿಯ ಗೂಂಡಾಗಿರಿ ಪ್ರಕರಣದ ಬೆನ್ನಲ್ಲೇ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕ ಪಿ.ರಾಜೀವ್ ಅಧಿಕಾರಿಗಳಿಗೆ ಧಮ್ಕಿ ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಕರ್ನಾಟಕ ಗೂಂಡಾರಾಜ್ಯ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಬೆಳಗಾವಿ ಜಿಲ್ಲೆಯ ಕುಡುಚಿ ಕ್ಷೇತ್ರದ ಶಾಸಕ ಪಿ.ರಾಜೀವ್ ಅವರು ಸರಕಾರಿ ಜಾಗದ ಸರ್ವೆ ವಿಚಾರಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಕಚೇರಿಯ ಅಧಿಕಾರಿಯೊಬ್ಬರಿಗೆ ಧಮ್ಕಿ ಹಾಕಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 
 
ನಿನಗೆ ಗಂಡಸುತನ ಇದ್ದರೆ ಇಲ್ಲಿ ನನ್ನ ಕೇತ್ರದಲ್ಲಿ ಕೆಲಸ ಮಾಡು ಇಲ್ಲದಿದ್ದರೆ ಮನೆಗೆ ಹೋಗು ಎಂದು ಶಾಸಕ ಅಧಿಕಾರಿಗೆ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. 
 
ಇತ್ತೀಚೆಗೆ ವೈದ್ಯರ ಮೇಲೆ ಹಲ್ಲೆ ಮಾಡುವ ಮೂಲಕ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಗೂಂಡಾವರ್ತನೆ ತೋರಿದ್ದರು. ಮತ್ತೊಂದೆಡೆ ಬಿಜೆಪಿ ಶಾಸಕ ರಾಜು ಕಾಗೆ ಬೆಂಬಲಿಗರು ಕಾಂಗ್ರೆಸ್ ನಾಯಕನ ಮೇಲೆ ಅಟ್ಟಹಾಸ ಮೆರೆದಿದ್ದರ ಬೆನ್ನಲ್ಲೇ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕ ಪಿ.ರಾಜೀವ್ ಅಧಿಕಾರಿಗಳಿಗೆ ಧಮ್ಕಿ ಹಾಕುವ ಮೂಲಕ ಗೂಂಡಾರಾಜಕ್ಕೆ ಪುಷ್ಟಿ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಶಾಸಕ ಪಿ.ರಾಜೀವ್ ಬಿಎಸ್‌ಆರ್ ಕಾಂಗ್ರೆಸ್ ಧಮ್ಕಿ Mla Bsr Congress P.rajeev

Widgets Magazine

ಸುದ್ದಿಗಳು

news

ಕಮಲ ಪಾಳಯದಲ್ಲಿ ಬ್ರಿಗೇಡ್ ತಳಮಳ...ಪಕ್ಷದಿಂದ ಈಶ್ವರಪ್ಪ ಬೆಂಬಲಿಗ ಅಮಾನತು

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಲ್ಲಿ ಗುರುತಿಸಿಕೊಂಡ ಹಿನ್ನೆಲೆಯಲ್ಲಿ ಮಾಜಿ ಮೇಯರ್ ವೆಂಕಟೇಶ ಮೂರ್ತಿ ...

news

ಸಾಕ್ಷಿ ಮಹಾರಾಜ್‌ಗೆ ಸಂಕಷ್ಟ

ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗುವ ಸಾಕ್ಷಿ ಮಹಾರಾಜ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ವಾರ ...

news

ಬಿಎಸ್ಎಫ್ ಯೋಧನ ವಿಡಿಯೋ ಆರೋಪ; ತನಿಖೆಗೆ ಆದೇಶ

ಗಡಿ ಕಾಯುವ ಯೋಧರಿಗೆ ಕಳಪೆ ಗುಣಮಟ್ಟದ ಆಹಾರವನ್ನು ನೀಡಲಾಗುತ್ತದೆ ಎಂದು ಬಿಎಸ್ಎಫ್ ಯೋಧ ಮಾಡಿರುವ ಆರೋಪಕ್ಕೆ ...

news

ಬಿಜೆಪಿ ಅಧಿಕಾರಕ್ಕೇ ಬಂದಿಲ್ಲ, ಅದಾಗಲೇ ಸಿಎಂ ಸ್ಥಾನಕ್ಕಾಗಿ ಯಡ್ಡಿ, ಈಶು ಪೈಪೋಟಿ

ರಾಜ್ಯದಲ್ಲಿ ಇನ್ನೂ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿಲ್ಲ. ಈಗಲೇ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಿಜೆಪಿ ...

Widgets Magazine