ಯುವತಿಯ ಕೆನ್ನೆಗೆ ಚುಂಬಿಸಿ, ನಾಲಿಗೆ ಕಚ್ಚಿ ಲೈಂಗಿಕ ದೌರ್ಜನ್ಯ ಎಸಗಿದ ಕಾಮಾಂಧ!

ಬೆಂಗಳೂರು, ಶನಿವಾರ, 7 ಜನವರಿ 2017 (08:56 IST)

Widgets Magazine

ರಾಜಧಾನಿ ಬೆಂಗಳೂರು ರೇಪ್ ಸಿಟಿಯಾಗಿರುವುದರಲ್ಲಿ ಯಾವುದೇ ಸಂಶಯವೇ ಇಲ್ಲ. ಹೊಸವರ್ಷಾಚರಣೆ ಸಂಬರ್ಧದಲ್ಲಿ ಯುವತಿಯರ ಮೇಲೆ ನಡೆದ ಪ್ರಕರಣಗಳ ಬೆನ್ನಲ್ಲೇ ಮತ್ತೊಂದು ಹೇಯ ಕೃತ್ಯ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. 
ಕೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ನಿನ್ನೆ ಬೆಳ್ಳಿಗೆ 6.30 ರ ಸುಮಾರಿಗೆ ಬಸ್‌ಸ್ಟ್ಯಾಂಡ್‌ಗೆ ತೆರಳುತ್ತಿದ್ದ ಯುವತಿಯನ್ನು ಕಾಮಾಂಧನೊಬ್ಬ ಹಿಂಬಾಲಿಸಿ ತಬ್ಬಿಕೊಂಡಿದ್ದಾನೆ. ಬಳಿಕ ಯುವತಿಯ ಕೆನ್ನೆಗೆ ಚುಂಬಿಸಿ, ನಾಲಿಗೆ ಕಚ್ಚಿ ಪರಾರಿಯಾಗಿದ್ದಾನೆ. ಕಾಮಾಂಧನ ಈ ಹೇಯ ಕೃತ್ಯ ರಸ್ತೆ ಬದಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 
 
ಈ ಘಟನೆ ವೇಳೆ ನಾಯಿಯೊಂದು ಜೋರಾಗಿ ಬೊಗಳಿದ ಕಾರಣ ಕಾಮುಕ ಅಲ್ಲಿಂದ ಪರಾರಿಯಾಗಿದ್ದಾನೆ. ಆದರೆ, ಈ ಕುರಿತು ಸಂತ್ರಸ್ತೆ ಯಾವುದೇ ದೂರು ನೀಡಿಲ್ಲ ಎಂದು ಹೇಳಲಾಗುತ್ತಿದೆ. 
 
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯುವತಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಕಮ್ಮನಹಳ್ಳಿಯಲ್ಲಿ ಯುವತಿಯನ್ನು ನಡುರಸ್ತೆಯಲ್ಲಿಯೇ ಅಡ್ಡಗಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಬೆನ್ನಲ್ಲೇ ಇಂತಹ ಹೇಯ ಕೃತ್ಯ ನಡೆದದ್ದು, ರಾಜಧಾನಿ ಬೆಂಗಳೂರು ಯುವತಿಯರಿಗೆ ಸೇಫ್ ಅಲ್ಲ ಎಂದು ಮತ್ತೊಮ್ಮೆ ಸಾಬೀತಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ವಿರ್ದಾರ್ಥಿ ನಿಲಯಗಳ ನ್ಯೂನ್ಯತೆ ಸರಿಪಡಿಸಲು ಸೂಕ್ತ ಕ್ರಮ: ಎಚ್.ಆಂಜನೇಯ

ಸಮಾಜ ಕಲ್ಯಾಣ ಇಲಾಖೆ ಅಡಿಯ ವಿದ್ಯಾರ್ಥಿ ನಿಲಯಗಳ ನ್ಯೂನ್ಯತೆಗಳನ್ನು ಸರಿಪಡಿಸಲು ಸೂಕ್ತ ಕ್ರಮ ...

news

ಕಟೀಲ್, ಹೆಗ್ಡೆ ಅವರನ್ನ ಸಮರ್ಥಿಸಿಕೊಂಡ ಬಿಜೆಪಿ.. ಕೂಡಲೇ ಕ್ಷಮೆ ಕೇಳಬೇಕು: ಉಗ್ರಪ್ಪ

ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಇಡುವ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ...

news

ಶೇಮ್ ಶೇಮ್ ಬೆಂಗಳೂರು: ಮಹಿಳೆಯ ತುಟಿಗೆ ಮುತ್ತಿಟ್ಟು, ನಾಲಿಗೆ ಕಚ್ಚಿ ಪರಾರಿಯಾದ ಕಾಮಾಂಧ

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಲೈಂಗಿಕ ದೌರ್ಜನ್ಯ ಮತ್ತು ...

news

ಸೆಕ್ಸ್ ಸುಖ ನೀಡಲು ನಿರಾಕರಿಸಿದ ಯುವತಿಯ ಕತ್ತು ಕತ್ತರಿಸಿದ ಆರೋಪಿ

ನಾಗರ್‌ಕರ್ನೂಲ್: ವ್ಯಕ್ತಿಯೊಬ್ಬ ಸೆಕ್ಸ್‌ ಸುಖ ನೀಡಲು ನಿರಾಕರಿಸಿದ 20 ವರ್ಷದ ಯುವತಿಯ ಕತ್ತು ಕತ್ತರಿಸಿದ ...

Widgets Magazine Widgets Magazine