ಬೆಳೆಗಾರರಿಗೆ ಕಣ್ಣೀರು ತರಿಸುತ್ತಿರುವ ಈರುಳ್ಳಿ!

ಚಿತ್ರದುರ್ಗ, ಸೋಮವಾರ, 9 ಜುಲೈ 2018 (18:27 IST)


ಕೋಟೆ ನಾಡಿನಲ್ಲಿ ರೈತ ಸದಾ ಒಂದಲ್ಲ   ಒಂದು ಸಮಸ್ಯೆಯಲ್ಲಿ ಸಿಲುಕುತ್ತಿದ್ದಾನೆ. ಅದರಂತೆ  ಮಳೆಯನ್ನೆ ನಂಬಿ  ಬಿತ್ತಿದ್ದ ಈರುಳ್ಳಿ ಮೊಳಕೆಯೊಡೆದಿವೆ. ಆದ್ರೆ  ಇದೀಗ ಮಳೆಯೂ ಕೈ ಕೊಡುತ್ತಿದೆ. ಇತ್ತ ಕೊಳವೆ ಬಾವಿಯಲ್ಲೂ ಕೂಡ ನೀರಿನ ಪ್ರಮಾಣ ಕಡಿಮೆ ಆಗ್ತಾ ಇರೊದು ಈರುಳ್ಳಿ ಬೆಳೆಗಾರರಿಗೆ ಸಮಸ್ಯೆಯಾಗಿದೆ. ಒಂದು ವೇಳೆ ಮಳೆ ಬಂದು ಉತ್ತಮ ಬೆಲೆ ಸಿಗದೆ ಹೋದ್ರೆ ಈ ಭಾಗದ ರೈತರನ್ನ ದೇವರೇ ಕಾಪಾಡಬೇಕಾಗಿದೆ.  
 
ಚಿತ್ರದುರ್ಗ ಕೋಟೆ  ನಾಡಿನಲ್ಲಿ  ಪ್ರಮುಖ ಬೆಳೆಗಳಲ್ಲಿ ರಾಗಿ ಮುಸುಕಿನ ಜೋಳ ಹಾಗೂ ತೊಟಗಾರಿಕೆ ಬೆಳೆಗಳಿಗೆ ಬಂದ್ರೆ ಈರುಳ್ಳಿ ಪ್ರಮುಖವಾಗುತ್ತದೆ. ಚಿತ್ರದುರ್ಗ ಹಾಗೂ ಚಳ್ಳಕೆರೆ ತಾಲೂಕುಗಳಲ್ಲಿ ಹೆಚ್ಚಾಗ  ಈರುಳ್ಳಿ ಬೆಳೆಗಳನ್ನು ಬೆಳೆಯುತ್ತಾರೆ. ಇದುವರೆಗೂ 17 ಸಾವಿರ ಹೆಕ್ಟೇರ್ ಪ್ರದೇಶಗಳಲ್ಲಿ ರೈತರು ಈರುಳ್ಳಿಯನ್ನು ಬಿತ್ತಿದ್ದಾರೆ. ಇದುವರೆಗೂ ಬಿದ್ದಿದ್ದ   ಅಲ್ಪ ಸ್ವಲ್ಪ ಮಳೆಯಿಂದಾಗಿ ಈರುಳ್ಳಿ ಬೀಜ ಮೊಳಕೆ ಯೊಡೆದು   ಸಣ್ಣ ಸಣ್ಣ ಗಿಡಗಳಾಗಿ ಬೆಳೆದು ನಿಂತಿವೆ. ಸರಿಯಾದ ಸಮಯಕ್ಕೆ ವರುಣ ಕೈ ಕೊಟ್ಟಿರುವುದರಿಂದ  ಚಿಗುರೊಡೆದ ಈರುಳ್ಳಿ ಮೊಳಕೆ ಒಣಗುವ ಸ್ಥಿತಿ ನಿರ್ಮಾಣವಾಗಿದೆ.

ಮಳೆಯನ್ನು ಆಧರಿಸಿ ಸುಮಾರು 1800 ಹೆಕ್ಟೇರ್ ಹಾಗೂ ನೀರಾವರಿಯನ್ನು ನಂಬಿ 17 ಸಾವಿರ ಹೇಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆಯನ್ನು  ಮಾಡಿದ್ದಾರೆ. ಒಂದು ಕಡೆ ಮೆಳೆ ಕೈ ಕೊಟ್ಟರೆ. ಇನ್ನೊಂದು ಕಡೆಯಲ್ಲಿ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕುಸಿಯುತ್ತಾ ಇದೆ. ಇದು ರೈತರನ್ನು ಚಿಂತೇಗೀಡು ಮಾಡಿದೆ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೇಂದ್ರ ಸಚಿವ, ಶಾಸಕ, ಜಿಲ್ಲಾಧಿಕಾರಿಗೆ ತಟ್ಟಿದ ಟ್ರಾಫಿಕ್ ಬಿಸಿ; ಪೊಲೀಸರು ಮಾಡಿದ್ದೇನು?

ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಮದುವೆ ಹಾಲ್ ಗಳ ಮುಂದೆ ...

news

ಆರ್ಯ ವೈಶ್ಯ ಅಭಿವೃದ್ಧಿ ನಿಗಮಕ್ಕೆ 10 ಕೋಟಿ: ಟಿ.ಎ.ಶರವಣಗೆ ಅಭಿನಂದನೆ

ಅರ್ಯವ್ಯೆಶ್ಯ ಅಭಿವೃದ್ಧಿ ನಿಗಮಕ್ಕೆ ಬಜೆಟ್ ನಲ್ಲಿ 10 ಕೋಟಿ ಅನುದಾನ ಸರ್ಕಾರದವತಿಯಿಂದ ಕೊಡಿಸಿದ ವಿಧಾನ ...

news

ಮಂಡ್ಯ ನಗರಸಭೆ ಅಧ್ಯಕ್ಷಸ್ಥಾನ: ಕಾಂಗ್ರೆಸ್ ತೆಕ್ಕೆಗೆ

ಮಂಡ್ಯ ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ಅವ್ರ ಅಕಾಲಿಕ ನಿಧನದಿಂದ ತೆರವಾಗಿದ್ದ ಮಂಡ್ಯ ನಗರಸಭೆ ...

news

ಹಾಲು ದರ ಇಳಿಕೆ ಖಂಡಿಸಿ ಪ್ರತಿಭಟನೆ

ಹಾಲು ದರದಲ್ಲಿ 2 ರೂಪಾಯಿ ಕಡಿಮೆ ಮಾಡಿರುವುದನ್ನು ವಿರೋಧಿಸಿ ನೂರಾರು ಹಾಲು ಉತ್ಪಾದಕರು ಹಾಗೂ ಗೋ ಪಾಲಕರು ...

Widgets Magazine
Widgets Magazine