ಮೊಮ್ಮಗನ ಸ್ಪರ್ಧೆಗೆ ದೇವೇಗೌಡರ ಕುಟುಂಬದಲ್ಲೇ ಭಿನ್ನಮತ?

ಬೆಂಗಳೂರು, ಮಂಗಳವಾರ, 7 ನವೆಂಬರ್ 2017 (09:15 IST)

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎಚ್. ಡಿ. ರೇವಣ್ಣ ಪುತ್ರ ಪ್ರಜ್ವಲ್ ಗೌಡ ಸ್ಪರ್ಧೆ ಬಗ್ಗೆ ಕುಟುಂಬದೊಳಗೇ ಭಿನ್ನಾಭಿಪ್ರಾಯಗಳಿವೆ ಎಂಬುದು ಖಚಿತವಾಗಿದೆ.


 
ಪ್ರಜ್ವಲ್ ಸ್ಪರ್ಧಿಸುತ್ತಾರೆ. ಅವರ ಸ್ಪರ್ಧೆಗೆ ತಾತ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಸಿರು ನಿಶಾನೆ ತೋರಿದ್ದಾರೆ ಎಂದು ಪ್ರಜ್ವಲ್ ತಾಯಿ ಭವಾನಿ ರೇವಣ್ಣ ಹೇಳಿದ ಕೆಲ ಹೊತ್ತಿನಲ್ಲೇ ಜೆಡಿಸ್ ರಾಜ್ಯಾಧ್ಯಕ್ಷ, ಪ್ರಜ್ವಲ್ ಚಿಕ್ಕಪ್ಪ ಕುಮಾರಸ್ವಾಮಿ ಈ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ ಎಂದಿದ್ದಾರೆ.
 
ಹೊಳೆನರಸೀಪುರ ತಾಲೂಕಿನ ಈಶ್ವರ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ ಭವಾನಿ ರೇವಣ್ಣ ಪ್ರಜ್ವಲ್, ಬೇಲೂರು ಮತ್ತು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಸ್ಪರ್ಧೆಗೆ ಸಿದ್ಧತೆ ಮಾಡಿಕೊಂಡಿದ್ದಾನೆ. ಯಾವ ಕ್ಷೇತ್ರದಲ್ಲಿ ಕಣಕ್ಕಿಳಿಯಬೇಕೆಂದು ದೇವೇಗೌಡರು ತೀರ್ಮಾನಿಸುತ್ತಾರೆ ಎಂದಿದ್ದಾರೆ.
 
ಆದರೆ ಅದೇ ದೇವಾಲಯಕ್ಕೆ ಕೆಲವೇ ಹೊತ್ತಿನ ನಂತರ ಬಂದ ಕುಮಾರಸ್ವಾಮಿ, ಮುಂದಿನ ಚುನಾವಣೆಯಲ್ಲಿ ರೇವಣ್ಣ ಮತ್ತು ಕುಮಾರಸ್ವಾಮಿ ಮಾತ್ರ ಸ್ಪರ್ಧಿಸುತ್ತಾರೆಂದು ದೇವೇಗೌಡರೇ ಹೇಳಿದ್ದಾರೆ. ಮುಂದೆ ಏನಾಗುತ್ತದೆಂದು ಹೇಳಲಾಗದು ಎನ್ನುವ ಮೂಲಕ ಪ್ರಜ್ವಲ್ ಸ್ಪರ್ಧೆ ಬಗ್ಗೆ ಗೊಂದಲ ಮೂಡಿಸುವ ಹೇಳಿಕೆ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ಯಾರಡೈಸ್ ಪೇಪರ್ಸ್ ಲೀಕ್! ತೆರಿಗೆ ವಂಚಕರ ಪಟ್ಟಿಯಲ್ಲಿ ಭಾರತದ ಪ್ರಮುಖರು!

ನವದೆಹಲಿ: ಪನಾಮಾ ಪೇಪರ್ಸ್ ನಂತಹದ್ದೇ ಮತ್ತೊಂದು ಪ್ಯಾರಾಡೈಸ್ ಪೇಪರ್ಸ್ ಮೂಲಕ ತೆರಿಗೆ ವಂಚಕರ ಪಟ್ಟಿ ...

news

ಪ್ರಧಾನಿ ಮೋದಿ ಭಗವದ್ಗೀತೆಯನ್ನೇ ತಿರುಚಿದ್ದಾರೆ: ರಾಹುಲ್ ಗಾಂಧಿ

ನವದೆಹಲಿ: ಪ್ರಧಾನಿ ಮೋದಿ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ...

news

ಎನ್ ಕೌಂಟರಲ್ಲಿ ಗಾಯಗೊಂಡ ಪಿಎಸ್ಐಗೆ ಸ್ಪರ್ಶದಲ್ಲಿ ಚಿಕಿತ್ಸೆ: ನೋಡಲು ಬಾರದ ಅಧಿಕಾರಿಗಳು

ಬೆಂಗಳೂರು: ವಿಜಯಪುರ ಜಿಲ್ಲೆಯ ಕೊಂಕಣಗಾಂವ್ ಬಳಿ ಭೀಮಾತೀರದ ಹಂತಕನ ಎನ್ ಕೌಂಟರ್ ಪ್ರಕರಣದಲ್ಲಿ ಗುಂಡೇಟಿಗೆ ...

news

ಜಿಸ್‌ಟಿ ಅಂದ್ರೆ ಗ್ರೇಟ್ ಸೆಲ್ಫಿಶ್ ಟ್ಯಾಕ್ಸ್: ಮಮತಾ ಬ್ಯಾನರ್ಜಿ

ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ನರೇಂದ್ರ ಮೋದಿ ಸರಕಾರವನ್ನು ಸರಕು ಮತ್ತು ...

Widgets Magazine
Widgets Magazine