ಸದನದಲ್ಲಿ ಸ್ವಾರಸ್ಯಕರ ಚರ್ಚೆ: ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಪಿಶಾಚಿ ಅಂತೆ...!

ಬೆಂಗಳೂರು, ಗುರುವಾರ, 16 ನವೆಂಬರ್ 2017 (16:41 IST)

ವಿಧಾನಸಭೆಯಲ್ಲಿ ನಡೆದ ಮೌಢ್ಯ ಪ್ರತಿಬಂಧಕ ಮಸೂದೆ ಜಾರಿ ಚರ್ಚೆಯಲ್ಲಿ ಹಲವು ಸ್ವಾರಸ್ಯಕರ ವಿಷಯಗಳು ಸದನವನ್ನು ನಗೆಗಡಲಲ್ಲಿ ತೇಲಿಸಿದವು.
ಕಾರಿನ ಮೇಲೆ ಕಾಗೆ ಕುಳಿತಿರುವುದಕ್ಕೆ ಕಾರು ಬದಲಾಯಿಸಿದ್ದೀರಲ್ಲ ಅದು ಮೂಢನಂಬಿಕೆಯೋ ಅಥವಾ ನಂಬಿಕೆಯೋ ಎಂದು ಶಾಸಕ ಸಿ.ಟಿ. ರವಿ, ಸಿಎಂ ಸಿದ್ದರಾಮಯ್ಯರನ್ನು ಪ್ರಶ್ನಿಸಿದಾಗ, ಸಿಎಂ ನಾನು ಮೊದಲ ಕಾರು ಬದಲಾಯಿಸಬೇಕು ಎಂದು ಕೊಂಡಿದ್ದೆ. ಕಾಗೆ ಕುಳಿತಿದೆ ಎಂದು ಕಾರು ಬದಲಾಯಿಸಿಲ್ಲ ಎಂದು ತಿರುಗೇಟು ನೀಡಿದರು.
 
ರವಿ ನೀನು ನನ್ನ ಕಾರಿನ ಮೇಲೆ 20 ಕಾಗೆಗಳನ್ನು ತಂದು ಕೂರಿಸಿ ನಾನು ಕಾರು ಬದಲಾಯಿಸುವುದಿಲ್ಲ ಎಂದು ಸಿಎಂ ಸವಾಲ್ ಹಾಕಿದರು. ಮತ್ತೆ ಹಿಂದೆ ಇದೊಂದು ಪೈಶಾಚಿಕ ಕೃತ್ಯ ಎಂದೆಲ್ಲಾ ಹೇಳಿದ್ರಿ, ಪಿಶಾಚಿಗಳು ಅಂದ್ರೆ ಹೇಗಿರುತ್ತವೆ ಎಂದು ಪ್ರಶ್ನಿಸಿದರು.
 
ಸಿಎಂ ಪದೇ ಪದೇ ದೆವ್ವ, ಭೂತ, ಪಿಶಾಚಿ ಎನ್ನುತ್ತಿರುತ್ತಾರೆ. ದೆವ್ವ ಪಿಶಾಚಿಗಳು ಹೇಗಿರುತ್ತವೆ. ಅವುಗಳ ರಕ್ತ ಕೆಂಪೋ ಅಥವಾ ಬಿಳಿಯೋ, ಕಾಲುಗಳು ಹೇಗಿರುತ್ತವೆ ಎಂದು ಶಾಸಕ ರವಿ, ಮತ್ತೆ ಸಿಎಂ ರನ್ನು ಕಿಚಾಯಿಸಿದರು.
 
ಶಾಸಕ ಸಿ.ಟಿ.ರವಿ ಮತ್ತು ಮಾತಿನ ಮಧ್ಯೆ ಪ್ರವೇಶಿಸಿದ ಶಿಕ್ಷಣ ಖಾತೆ ಸಚಿವ ಬಸವರಾಜ ರಾಯರೆಡ್ಡಿ, ಕೆ.ಎಸ್.ಈಶ್ವರಪ್ಪರನ್ನು ನೋಡಿದ್ರೆ ಗೊತ್ತಾಗಲ್ವ ಎಂದು ಗೇಲಿ ಮಾಡಿದರು. ರಾಯರೆಡ್ಡಿ ಹೇಳಿಕೆಗೆ ಸದನವೇ ನಗೆಗಡಲಲ್ಲಿ ತೇಲಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸರಕಾರದ ವಿರುದ್ಧ ವೈದ್ಯರನ್ನು ಎತ್ತಿಕಟ್ಟಿದ್ದೇ ಬಿಜೆಪಿಯವರು: ಸಿಎಂ ಕಿಡಿ

ಬೆಂಗಳೂರು: ಸರಕಾರದ ವಿರುದ್ಧ ವೈದ್ಯರನ್ನು ಎತ್ತಿಕಟ್ಟಿದ್ದೇ ಬಿಜೆಪಿಯವರು. ಇಲ್ಲವಾದಲ್ಲಿ ವೈದ್ಯರು ...

news

ಈಶ್ವರಪ್ಪ ವಿಪಕ್ಷ ನಾಯಕರಾಗಲು ನಾಲಾಯಕ್: ಎಚ್.ಎಂ.ರೇವಣ್ಣ

ಬೆಂಗಳೂರು: ಹಿರಿಯ ಸಚಿವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ...

news

ಪಾಕಿಸ್ತಾನ ದುರ್ಬಲ ರಾಷ್ಟ್ರವಲ್ಲ, ಮುಟ್ಟಿದರೆ ತಟ್ಟಿ ಬಿಡ್ತದೆ: ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ

ಶ್ರೀನಗರ: ವಿವಾದಾತ್ಮಕ ಹೇಳಿಕೆ ನೀಡುವುದನ್ನೇ ಕಾಯಕವಾಗಿಸಿಕೊಂಡಿರುವ ಜಮ್ಮು ಕಾಶ್ಮಿರದ ಮಾಜಿ ...

news

ಕೆಪಿಎಂಇ ವಿಧೇಯಕ ಜಾರಿಗೆ ತರಬೇಡಿ: ಸಿಎಂಗೆ ಪುತ್ರ ಯತೀಂದ್ರ ಸಲಹೆ

ಬೆಂಗಳೂರು: ರಾಜ್ಯ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಕೆಪಿಎಂಇ ವಿಧೇಯಕ ಜಾರಿಗೆ ತರಬೇಡಿ ಎಂದು ...

Widgets Magazine
Widgets Magazine