ಸಪ್ತಪದಿ ತುಳಿದ ಮಹಿಳಾ ನಿವಾಸಿಗಳು: ಹೆತ್ತವರಂತೆ ಮದುವೆ ಮಾಡಿಕೊಟ್ಟಿತು ಮಹಿಳಾ ನಿಲಯ

ಕಲಬುರಗಿ, ಶುಕ್ರವಾರ, 12 ಅಕ್ಟೋಬರ್ 2018 (18:15 IST)

ಅಲ್ಲಿ ಇಂದು ಹೂವು, ಮಾವಿನ ತೋರಣ, ರಂಗೋಲಿಗಳಿಂದ ಆಲಂಕೃತಗೊಂಡ ನಿಲಯದಲ್ಲಿ ದೈನಂದಿನ ಕಚೇರಿ ಕೆಲಸದಲ್ಲಿ ನಿರತರಾಗುತ್ತಿದ್ದ ಅಧಿಕಾರಿ-ಸಿಬ್ಬಂದಿಗಳು ಮದುವೆಯ ಶಾಸ್ತ್ರದ ಕಾರ್ಯದಲ್ಲಿ ಬ್ಯೂಸಿಯಾಗಿದ್ದು ಕಂಡುಬಂತು.

ಕಲಬುರಗಿ ನಗರದ ಆಳಂದ ರಸ್ತೆಯಲ್ಲಿರುವ ರಾಜ್ಯ ಮಹಿಳಾ ವಸತಿ ನಿಲಯದಲ್ಲಿ  ಮದುವೆಯ ಸಂಭ್ರಮದ ಮನೆಮಾಡಿತು. ನಿಲಯದಲ್ಲಿ ಕಳೆದ 4 ವರ್ಷದಿಂದ ನಿವಾಸಿಯಾಗಿರುವ ಅಂಬಿಕಾ ಮತ್ತು 7 ವರ್ಷಗಳಿಂದ ನಿವಾಸಿಯಾಗಿರುವ ಅಶ್ವಿನಿಯ ಮದುವೆ ನಡೆಯಿತು.

ಅನಾಥೆಯರಿಗೆ ಆಶ್ರಯಕೊಟ್ಟ ಮಹಿಳಾ ನಿಲಯವು ನಿವಾಸಿಗಳ ಒಪ್ಪಿಗೆ ಪಡೆದು ಅವರ ಮುಂದಿನ ಭವಿಷ್ಯದ ಪುನರ್ವಸತಿ ಹಿತದೃಷ್ಠಿಯಿಂದ ಹೆತ್ತವರಂತೆ ಮದುವೆ ಮಾಡಿಕೊಟ್ಟಿದೆ. ಅಂಬಿಕಾಳನ್ನು ವರಸಿಕೊಂಡ ಗುಂಡುರಾವ ಜೋಷಿ ಹಾಗೂ ಅಶ್ವಿನಿಯೊಂದಿಗೆ ಮದುವೆಯಾದ ಪವನಕುಮಾರ ಕುಲಕರ್ಣಿ ಇಬ್ಬರು ಅನಾಥೆಯರ ಬಾಳಿಗೆ ಬೆಳಕು ನೀಡಿದ್ದಾರೆ.

 ಶುಕ್ರವಾರ ಬೆಳಿಗ್ಗೆ 9.30 ಗಂಟೆಗೆ ದೈವ ಅಕ್ಷತೆ ಹಾಗೂ 11.42 ಗಂಟೆಗೆ ಮಿಥುನ ಲಗ್ನದ ಶುಭಮುಹೂರ್ತದಲ್ಲಿ ನವ ವಧು-ವರರು ಸಪ್ತಪದಿ ತುಳಿಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಚಾರ್ಯ ಬಾಪುರಾವ ಅವರು ಹಿಂದು ಧರ್ಮದ ಪ್ರಕಾರ ಮದುವೆ ಶಾಸ್ತ್ರ ಕಾರ್ಯವನ್ನು ನಡೆಸಿದರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

Me Too ಬಗ್ಗೆ ನಟಿ ಶೃತಿ ಹರಿಹರನ್ ಹೇಳಿದ್ದೇನು ಗೊತ್ತಾ?

Me Too ಅಭಿಯಾನದ ಬಗ್ಗೆ ಕೇಳಿ ಖುಷಿ ಆಗುತ್ತಿದೆ. ಹೀಗಂತ ಚಿತ್ರನಟಿ ಶೃತಿ ಹರಿಹರನ್ ಹೇಳಿದ್ದಾರೆ.

news

ಜೆಡಿಎಸ್ ನಡೆಯಿಂದ ಕಾಂಗ್ರೆಸ್ ಗೆ ಹೆಚ್ಚಿದ ಚಿಂತೆ!

ಕಾಂಗ್ರೆಸ್ ಗೆ ಈಗ ಸ್ವತಃ ಮಿತ್ರಪಕ್ಷವಾಗಿರುವ ಜೆಡಿಎಸ್ ನ ನಡೆಯಿಂದ ಚಿಂತೆ ಹೆಚ್ಚಾಗುವಂತೆ ಮಾಡಿದೆ.

news

ಮೈತ್ರಿ ಸರಕಾರಕ್ಕೆ ಆಯಸ್ಸು ಇಲ್ಲವೆಂದ ಕೋಡಿಮಠ ಶ್ರೀ

ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರಕಾರಕ್ಕೆ ಹೆಚ್ಚಿನ ಆಯಸ್ಸು ಇಲ್ಲ. ಕೇವಲ ಎರಡು ತಿಂಗಳು ಮಾತ್ರ ...

news

ಸಚಿವ ಎನ್.ಮಹೇಶ್ ಹೋಗಿದ್ದೆಲ್ಲಿ ಗೊತ್ತಾ?

ಸಚಿವ ಸ್ಥಾನಕ್ಕೆ ಬಿಎಸ್ ಪಿ ಶಾಸಕ ಎನ್.ಮಹೇಶ್ ರಾಜೀನಾಮೆ ನೀಡಿರುವ ಬೆನ್ನಲ್ಲೇ ಹಲವು ಚರ್ಚೆಗಳು ರಾಜಕೀಯ ...

Widgets Magazine