ಈ ಊರಿನ ಜನರ ಹೆಡ್ ಪ್ರಾಬ್ಲಂಗೆ ಕಾರಣವಾದ ಓವರ್ ಹೆಡ್ ಟ್ಯಾಂಕ್!

ಚನ್ನಪಟ್ಟಣ, ಭಾನುವಾರ, 12 ಆಗಸ್ಟ್ 2018 (16:38 IST)

ಪ್ರತಿನಿತ್ಯ ಆ ರಸ್ತೆ ಮೂಲಕ ನೂರಾರು ಮಂದಿ ಓಡಾಡುತ್ತಾರೆ. ಆದ್ರೆ ಓಡಾಡಬೇಕಾದ್ರೆ ಪ್ರಾಣವನ್ನ ತಮ್ಮ ಕಪಿ ಮುಷ್ಟಿಯಲ್ಲಿ ಹಿಡಿದು ಸಾಗುತ್ತಾರೆ. ಆ ಊರಿಗೊಂದು ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿ ಸುಮಾರು ಮೂರು ದಶಕಗಳು ಕಳೆದಿದೆ. ಆದ್ರೆ ಇದೀಗ ಶೀಥಿಲಾವ್ಯಸ್ಥೆಯಲ್ಲಿರುವ ಟ್ಯಾಂಕ್ ಕೂಡಲೇ ತೆರವು ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

ಶೀಥಿಲಾವ್ಯಸ್ಥೆ ತಲುಪಿರೋ ಒವರ್ ಹೆಡ್ ಟ್ಯಾಂಕ್. ಹಂತ ಹಂತವಾಗಿ ಕುಸಿಯುತ್ತಿರುವ ಗೋಡೆಗಳು. ಟ್ಯಾಂಕ್ ಪಕ್ಕದಲ್ಲೇ ಇರುವ ಗ್ರಾಮದ ಮನೆಗಳು ಈ ದೃಶ್ಯ ಕಂಡು ಬರೋದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ನಾಗವಾರ ಗ್ರಾಮದಲ್ಲಿ. ಈ ಊರಿನಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮನೆಗಳಿವೆ. ಆ ಮನೆಗಳಿಗೆ ನೀರು ಕಲ್ಪಿಸುವ ಓವರ್ ಹೆಡ್ ಇದಾಗಿದೆ.

ಸುಮಾರು 30 ವರ್ಷಗಳ ಹಿಂದೆ ಒವರ್ ಹೆಡ್ ನಿರ್ಮಾಣ ಮಾಡಲಾಗಿದೆ. ಇದೀಗ ಟ್ಯಾಂಕ್ ಕುಸಿಯುವ ಹಂತ ತಲುಪಿದೆ. ಟ್ಯಾಂಕಿನ ಪಕ್ಕದಲ್ಲೇ ಸುಮಾರು ಮನೆಗಳಿವೆ. ಟ್ಯಾಂಕ್ ಮನೆ ಮೇಲೆ ಕುಸಿದರೆ ಮನೆಯಲ್ಲಿರುವ ಜನರ ಪ್ರಾಣಹಾನಿಯಾಗಲಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಇಲ್ಲಿನ ನಿವಾಸಿಗಳು ಒತ್ತಾಯಿಸುತ್ತಾರೆ. 
 


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಫಿ ನಾಡು ತತ್ತರ; ಮಳೆ ನಿಲ್ಲಿಸುವಂತೆ ಶ್ರೀಗಳಿಗೆ ಅರಿಕೆ ಮಾಡಿಕೊಂಡ ರೈತರು

ಕಾಫಿನಾಡು, ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಕಳೆದ ಮೂರು ದಿನದಿಂದ ಸುರಿಯುತ್ತಿರುವ ...

news

ಪ್ರವಾಹ ಭೀತಿ: ಗಂಜಿ ಕೇಂದ್ರ ಆರಂಭ

ಕಬಿನಿ ಹಾಗೂ ಕೆಆರ್ ಎಸ್ ಗಳಿಂದ ಹೆಚ್ಚುವರಿ ನೀರನ್ನು ನದಿಗೆ ಬಿಟ್ಟಿರುವುದರಿಂದ ಗಡಿ ಜಿಲ್ಲೆಯ ಬಹುತೇಕ ...

news

ಪ್ರೀತಿಸಿ ಮದುವೆಯಾಗಿ ಬಂದವಳ ಕೊಲೆಗೈದನಾ ಪ್ರಿಯತಮ!

ಮನೆ ಬಿಟ್ಟು ನಂಬಿ ಬಂದ ಯುವತಿ ಜತೆಗೆ ಸುಖ ಸಂಸಾರ ನಡೆಸಬೇಕಿದ್ದ ಕಿರಾತಕ ಪತಿ ತನ್ನ ಪತ್ನಿಯನ್ನೇ ಕತ್ತು ...

news

ಲಂಡನ್ ನಲ್ಲಿ ಚಿನ್ನದ ಟಾಯ್ಲೆಟ್ ಬಳಸುತ್ತಾರಂತೆ ವಿಜಯ್ ಮಲ್ಯ

ಮುಂಬೈ : ಭಾರತೀಯ ಬ್ಯಾಂಕ್ ಗಳಿಗೆ ಸುಮಾರು 9 ಸಾವಿರ ಕೋಟಿ ರೂ. ವಂಚಿಸಿ ದೇಶ ಬಿಟ್ಟಿರುವ ವಿಜಯ್ ಮಲ್ಯ ಅವರು ...

Widgets Magazine