ಜಂಬೂಸವಾರಿ ಮೆರವಣಿಗೆ ರಂಗು ನೀಡಿದ ಸ್ತಬ್ದಚಿತ್ರಗಳು

ಮೈಸೂರು, ಶನಿವಾರ, 30 ಸೆಪ್ಟಂಬರ್ 2017 (16:04 IST)

Widgets Magazine

ಮೈಸೂರು: ಜಂಬೂಸವಾರಿ ದಸರಾದ ಪ್ರಮುಖ ಆಕರ್ಷಣೆ. ರಾಜ್ಯದ ಐತಿಹಾಸಿಕ ಹಿನ್ನೆಲೆ, ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿ ಬಿಂಬಿಸುವ ಸ್ತಬ್ದಚಿತ್ರಗಳು ಎಲ್ಲರನ್ನ ಆಕರ್ಷಿಸುತ್ತಿವೆ.


ಜಂಬೂಸವಾರಿ ಮೆರವಣಿಗೆಯಲ್ಲಿ ಈ ಬಾರಿ 40 ಸ್ತಬ್ದ ಚಿತ್ರಗಳು ಸಾಗುತ್ತಿವೆ. ಕಲೆ, ಸಂಸ್ಕೃತಿ ಜತೆಗೆ ಪರಿಸರ, ಅರಣ್ಯೀಕರಣ, ಅಂತರ್ಜಲ, ಪರಿಸರ ಸ್ನೇಹಿ, ಪ್ರವಾಸೋದ್ಯಮ ಹಾಗೂ ರಾಜ್ಯ ಸರ್ಕಾರದ ವಿಶೇಷ ಸಾಧನೆ ಬಿಂಬಿಸುವ ಸ್ತಬ್ದ ಚಿತ್ರಗಳು ಮೆರವಣಿಗೆಯಲ್ಲಿ ಸಾಗುತ್ತಿವೆ.

ನಿಶಾನೆ ಆನೆ ಜಂಬೂಸವಾರಿ ಮೆರವಣಿಗೆ ಸಾಗಬೇಕಾದ ದಿಕ್ಕನ್ನು ಸೂಚಿಸುತ್ತಾ ಮುಂಚೂಣಿಯಲ್ಲಿ ಸಾಗುತ್ತಿದ್ದಾನೆ. ಚಿತ್ತಾಕರ್ಷಕ ಅಲಂಕಾರದೊಂದಿಗೆ ಕಂಗೊಳಿಸುತ್ತಾ ಸಾಗುತ್ತಿರುವ ಗಜಪಡೆ ಜಂಬೂಸವಾರಿ ಮೆರವಣಿಗೆಗೆ ಮೆರುಗು ತಂದಿವೆ. ಮೆರವಣಿಗೆ ಸಾಗುವ ರಸ್ತೆಯ ಎರಡೂ ಬದಿಯಲ್ಲಿ ವೀಕ್ಷಿಸಲು ಜನಸ್ತೋಮ ಕಿಕ್ಕಿರಿದು ನೆರೆದಿದೆ.

ಮೆರವಣಿಗೆ ಸಾಗುತ್ತಿರುವ ಮಾರ್ಗದುದ್ದಕ್ಕೂ ಸಾವಿರಾರು ಪೊಲೀಸರು ಬಂದೋಬಸ್ತ್ ಒದಗಿಸಿದ್ದಾರೆ. ಇನ್ನು ಮೆರವಣಿಗೆ ವೀಕ್ಷಿಸುವ ಸಲುವಾಗಿ ರಸ್ತೆಯ ಇಕ್ಕೆಲಗಳಲ್ಲಿರುವ ಎತ್ತರವಾದ ಕಟ್ಟಡಗಳು, ಜಾಹಿರಾತು ಫಲಕಗಳು, ಮರಗಳ ಮೇಲೆ ಜನ ಕುಳಿತಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ರೈಲು ದುರಂತ: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ನವದೆಹಲಿ: ಪದೇ ಪದೇ ಸಂಭವಿಸುತ್ತಿರುವ ರೈಲು ದುರಂತದ ಬಗ್ಗೆ ಪ್ರಮುಖ ವಿಪಕ್ಷವಾದ ಕಾಂಗ್ರೆಸ್ ಪ್ರಧಾನಿ ಮೋದಿ ...

news

ಮೈಸೂರಿನಲ್ಲಿ ದಸರಾ ಹಬ್ಬದ ಸಂಭ್ರಮವೋ ಸಂಭ್ರಮ

ಮೈಸೂರು: ನಗರದಾದ್ಯಂತ ದಸರಾ ಹಬ್ಬದ ಸಂಭ್ರಮವೋ ಸಂಭ್ರಮ. ಮೈಸೂರು ಅರಮನೆ ವಿಜೃಂಭಣೆಯಿಂದ ಜಗಮಗಿಸುತ್ತಿದ್ದು, ...

news

ಮುಂದಿನ ಬಾರಿಯು ನಾನೇ ದಸರಾಗೆ ಚಾಲನೆ ನೀಡ್ತೇನೆ: ಸಿಎಂ

ಮೈಸೂರು: ಅರಮನೆಯ ಬಲರಾಮ ದ್ವಾರದ ಬಳಿ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಸಿಎಂ ಸಿದ್ದರಾಮಯ್ಯ ಪೂಜೆ ...

news

ಕನ್ನಡಿಗರ ನಿವಾಸ ನೆಲಸಮ: ಗೋವಾ ಸಿಎಂಗೆ ಪತ್ರ ಬರೆದ ಜಗದೀಶ್ ಶೆಟ್ಟರ್

ಬೆಂಗಳೂರು: ಗೋವಾದ ಬೈನಾ ಬೀಚ್ ಬಳಿಯ ಕನ್ನಡಿಗರ ಮನೆಗಳನ್ನು ನೆಲಸಮ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ...

Widgets Magazine