ಪಾರ್ಕ್ ಅವಘಡ: ಬಾಲಕಿ ತಲೆಯ ಮೇಲೆ ರಾಡ್ ಬಿದ್ದು ಸಾವು ......

ಬೆಂಗಳೂರು, ಭಾನುವಾರ, 13 ಆಗಸ್ಟ್ 2017 (12:07 IST)

ಪ್ರಿಯಾ ಎನ್ನುವ ಬಾಲಕಿಯೊಬ್ಬಳು ಪಾರ್ಕ್‌ನಲ್ಲಿ ಆಟವಾಡುತ್ತಿದ್ದಾಗ ಆಕೆಯ ತಲೆಯ ಮೇಲೆ ರಾಡ್ ಬಿದ್ದು ಮೃತಳಾದ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.
ನಿನ್ನೆ ಸಂಜೆ ಬಾಲಕಿ ಪ್ರಿಯಾ ಪಾರ್ಕ್‌ನಲ್ಲಿ ಆಟವಾಡುತ್ತಿರುವ ಸಂದರ್ಭದಲ್ಲಿ ಅಕಸ್ಮಿಕವಾಗಿ ಆಕೆಯ ತಲೆಯ ಮೇಲೆ ರಾಡ್ ಬಿದ್ದು ಸ್ಥಳದಲ್ಲಿಯೇ ಮೃತಳಾಗಿದ್ದಳು ಎನ್ನಲಾಗಿದೆ.  
 
ಬೋರಿಂಗ್ ಆಸ್ಪತ್ರೆಯಲ್ಲಿ  ಬಾಲಕಿ  ಪ್ರಿಯಾ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು, ಮೃತ ದೇಹವನ್ನು ಪೋಷಕರಿಗೆ ಒಪ್ಪಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
 
ನಗರದ ಕೆ.ಆರ್.ಪುರಂ ನಿವಾಸದಲ್ಲಿರುವ ಪೋಷಕರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಬಿಬಿಎಂಪಿಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪೋಷಕರು ಸೇರಿದಂತೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಕಳೆದ ಕೆಲ ತಿಂಗಳುಗಳ ಹಿಂದೆ ಲಾಲ್‌ಬಾಗ್‌ನಲ್ಲಿ ಇಂತಹ ಘಟನೆ ನಡೆದಿತ್ತು. ಆದಾಗ್ಯೂ ಬಿಬಿಎಂಪಿ ಅಧಿಕಾರಿಗಳು ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ. ಈದ್ದರಿಂದ ಮತ್ತೆ ಇಂತಹದೇ ಘಟನೆ ಪುನರಾವರ್ತನೆಯಾಗಿದೆ ಎನ್ನುವುದು ಜನತೆಯ ಆರೋಪವಾಗಿದೆ.
 
ಮಹಾದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಭಾರತೀಯ ಸೇನೆಯಿಂದ ಮೂವರು ಕುಖ್ಯಾತ ಉಗ್ರರ ಹತ್ಯೆ

ಕಾಶ್ಮಿರ: ಜಮ್ಮು ಕಾಶ್ಮಿರದ ಶೋಪಿಯಾನ್‌‌ನಲ್ಲಿ ಭಾರತೀಯ ಸೇನೆ ಮೂವರು ಉಗ್ರರನ್ನು ಹೊಡೆದುರುಳಿಸುವಲ್ಲಿ ...

news

ರಾಜ್ಯ ಬಿಜೆಪಿ ಘಟಕದ ಕಾರ್ಯವೈಖರಿಗೆ ಅಮಿತ್ ಶಾ ಅಸಮಾಧಾನ

ಬೆಂಗಳೂರು: ರಾಜ್ಯ ಘಟಕದೊಳಗಿನ ಪಕ್ಷಪಾತ, ದ್ವೇಷದ ವಿರುದ್ಧ ತೀವ್ರವಾದ ಎಚ್ಚರಿಕೆಯನ್ನು ನೀಡಿ ...

news

ಉಗ್ರರ ನಿಗ್ರಹಕ್ಕೆ ರೋಬೋ ಸೈನಿಕರು?!

ನವದೆಹಲಿ: ಪಾಕ್ ಗಡಿಯಲ್ಲಿ ಉಗ್ರರ ಉಪಟಳ ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ಉಗ್ರರ ನಿಗ್ರಹಕ್ಕೆ ಭಾರತೀಯ ...

news

ಚೀನಾ ಗಡಿ ಕಿರಿಕ್ ಭಾರತಕ್ಕೆ ಸಿಕ್ಕಿದೆ ಬೂಸ್ಟ್!

ನವದೆಹಲಿ: ಡೋಕ್ಲಾಂ ಗಡಿ ವಿವಾದದಲ್ಲಿ ಭಾರತದ ವಿರುದ್ಧ ಪದೇ ಪದೇ ಚೀನಾ ಕಿಡಿ ಕಾರುತ್ತಿದ್ದರೆ, ಭಾರತ ಮಾತ್ರ ...

Widgets Magazine