ಅಪಘಾತದಲ್ಲಿ ಎಣ್ಣೆಗಾಗಿ ಮುಗಿಬಿದ್ದ ಜನರು

ಬಾಗಲಕೋಟೆ, ಭಾನುವಾರ, 16 ಸೆಪ್ಟಂಬರ್ 2018 (20:01 IST)

ಎಣ್ಣೆ ತುಂಬಿದ ಕ್ಯಾಂಟರ್ ವಾಹನಕ್ಕೆ ಹಿಂಬದಿಯಿಂದ ಲಾರಿ ಡಿಕ್ಕಿಯಾದ ಪರಿಣಾಮ, ಅಪಘಾತದಲ್ಲಿ ಲಾರಿ ಚಾಲಕನನ್ನ ರಕ್ಷಿಸಿ ಆಸ್ಪತ್ರೆಗೆ ಸಾಗಿಸಲು ಮುಂದಾಗದ ಜನ  ಮಾನವೀಯತೆ ಮರೆತು ಕ್ಯಾಂಟರ್ ನಲ್ಲಿ ಸೋರುತ್ತಿದ್ದ ಎಣ್ಣೆಗಾಗಿ ಮುಗಿಬಿದ್ದ ಘಟನೆ ನಡೆದಿದೆ.

ಲಾರಿ ಚಾಲಕನ ಸಾವಿಗೆ ಕಾರಣವಾದ ಅಮಾನವೀಯ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ನಡೆದಿದೆ. ಇಳಕಲ್ ನಗರದ ಮುದಗಲ್ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದ್ದು, ಅಡುಗೆ ಎಣ್ಣೆ ತುಂಬಿದ ಕ್ಯಾಂಟರ್ ವಾಹನ ಇಳಕಲ್ ನಿಂದ ಹುನಗುಂದ ಮಾರ್ಗವಾಗಿ ಬರುತ್ತಿರುವಾಗ ಕ್ಯಾಂಟರ್ ವಾಹನಕ್ಕೆ  ಹಿಂಬದಿಯಿಂದ ಲಾರಿ ಡಿಕ್ಕಿಯಾಗಿದೆ. ಪರಿಣಾಮ ಈ ಅಫಘಾತದಲ್ಲಿ ಲಾರಿಯಲ್ಲಿ ಚಾಲಕ ಸಿಲುಕಿ ಹಾಕಿಕೊಂಡು ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ. ಆದರೆ ಚಾಲಕನನ್ನ ರಕ್ಷಿಸಲು‌ ಮುಂದಾಗದ ಜನ್ರು, ಮಾನವೀಯತೆ ಮರೆತು, ಕೊಡ, ಕ್ಯಾನ್, ಬಕೇಟ್ ನೊಂದಿಗೆ ಬಂದು, ಸೋರುತ್ತಿದ್ದ ಅಡುಗೆ ಎಣ್ಣೆ ತುಂಬಿಸಿಕೊಳ್ಳಲು ಮುಗಿಬಿದ್ದರು. 

ಅಡುಗೆ ಎಣ್ಣೆಗಾಗಿ ‌ಮುಗಿಬಿದ್ದ ಜನರನ್ನು ಚದುರಿಸಿ ಸಂಚಾರವನ್ನು ಪೊಲೀಸರು ಸುಗಮಗೊಳಿಸಿದರು. ಆದ್ರೆ ಆಸ್ಪತ್ರೆ ಮುಟ್ಟುವಷ್ಟರಲ್ಲಿ ಲಾರಿ ಚಾಲಕನ ಪ್ರಣಾಪಕ್ಷಿ ಹಾರಿಹೋಗಿದೆ‌. ಈ ಕುರಿತು ಇಳಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಮ್ಮಿಶ್ರ ಸರ್ಕಾರ 101 % ಸುಭದ್ರವಾಗಿದೆ ಎಂದ ಸಚಿವ

ಸಮ್ಮಿಶ್ರ ಸರ್ಕಾರ 101 % ಸುಭದ್ರವಾಗಿದೆ ಎಂದು ಸಚಿವ ಹೇಳಿದ್ದಾರೆ.

news

ಮುಖ್ಯಮಂತ್ರಿ ಜನತಾದರ್ಶನ ಇಲ್ಲ

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಜ್ವರದಿಂದ ಬಳಲುತ್ತಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ.

news

ಯಾವುದೇ ತಪ್ಪು ಮಾಡಿಲ್ಲ ಎಂದ ಸಚಿವ ಡಿಕೆಶಿ

ನಾನು ಯಾವುದೇ ತಪ್ಪು ಮಾಡಿಲ್ಲ. ಆದ್ರೂ ಅನಗತ್ಯವಾಗಿ ಹಿಂಸೆ ನೀಡಲಾಗುತ್ತಿದೆ. ಹೀಗಂತ ಸಚಿವ ...

news

ಸಚಿವ ರಮೇಶ್ ಜಾರಕಿಹೊಳಿ ಎಲ್ಲೂ ಹೋಗಿಲ್ಲ ಎಂದ ಸಿಎಂ

ಸರ್ಕಾರ ಸುಭದ್ರವಾಗಿದೆ. ಸಚಿವ ರಮೇಶ್ ಜಾರಕಿಹೊಳಿ ಎಲ್ಲೂ ಹೋಗಿಲ್ಲ. ನನ್ನ ಜೊತೆಗಿದ್ದಾರೆ. ನಿಮಗೆ ಯಾವ ...

Widgets Magazine