ಅಂಗನವಾಡಿ ಕಾರ್ಯಕರ್ತರೊಂದಿಗೆ ಪಿಎಂ ಸಂವಾದ

ಬುಧವಾರ, 12 ಸೆಪ್ಟಂಬರ್ 2018 (14:01 IST)

ರಾಷ್ಟ್ರೀಯ ಪೋಷಣೆ ಅಭಿಯಾನ ಮಾಸಾಚರಣೆ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರ ಜೊತೆಗೆ ಪ್ರಧಾನಿ ವಿಡಿಯೋ ಕಾನ್ಫರೆನ್ಸ್​ ನಡೆಸಿದ್ದಾರೆ.

ದೇಶದಲ್ಲಿ ಜಾರಿಯಾಗಿರುವ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ ಬಗ್ಗೆ ಸಂವಾದದಲ್ಲಿ ಪ್ರಧಾನಿ ವಿಷಯ ಪ್ರಸ್ತಾಪಿಸಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಜತೆ ಮಾತನಾಡಿದರಯ, ಕರ್ನಾಟಕದಿಂದ ಯಾದಗಿರಿ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಸಹಾಯಕಿಯರು ಹಾಗೂ ಫಲಾನುಭವಿಗಳೊಂದಿಗೆ ಪ್ರಧಾನಿ ಆರಂಭಿಸಿದರು.

ಮೊದಲಿಗೆ ಕನ್ನಡದಲ್ಲಿಯೇ ನಿಮ್ಮೆರಿಗೂ ನನ್ನ ಹಾರ್ದಿಕ ಶುಭಾಶಯಗಳು ಅಂತ ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಯಾದಗಿರಿ ಜಿಲ್ಲೆಯಲ್ಲಿ ಮಾತೃವಂದನಾ ಯೋಜನೆ ಬಗ್ಗೆ ಅಂಗನವಾಡಿ ಮೇಲ್ವಿಚಾರಕಿ ಮಲ್ಲಮ್ಮ ಜೊತೆ ಮಾತನಾಡಿದರು. ಆ ಬಳಿಕ ಮಾತನಾಡಿದ ಪ್ರಧಾನಿ ಮೋದಿ ದೇಶದಲ್ಲಿ ಇರುವ ರಕ್ತ ಹೀನತೆ ಪ್ರಮಾಣ ಕಡಿಮೆ ಮಾಡುವಲ್ಲಿ ತಮ್ಮ ಶ್ರಮ ಅಗತ್ಯವೆಂದು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ ಪ್ರಧಾನಿ ಕರೆ ನೀಡಿದ್ರು. ಇನ್ನೂ ಪ್ರಧಾನಿ ಜೊತೆ ಮಾತನಾಡಿದ ಮಲ್ಲಮ್ಮ ತಮ್ಮ ಖುಷಿ ಹಂಚಿಕೊಂಡರು.



ತನ್ನ ರೂಮ್ ಮೇಟ್ ನ್ನು ಚೂರಿಯಿಂದ ಇರಿದು ಕೊಂದ ವ್ಯಕ್ತಿ. ಕಾರಣ ಕೇಳಿದ್ರೆ ಶಾಕ್ ಆಗ್ತೀರಾ?

ದುಬೈ : ತನ್ನ ರೂಮ್ ಮೇಟ್ ಮೊಬೈಲ್ ಫೋನಿನಲ್ಲಿ ದೊಡ್ಡ ಧ್ವನಿಯಲ್ಲಿ ಮಾತನಾಡಿದ ಎಂಬ ಕ್ಷುಲ್ಲಕ ಕಾರಣದಿಂದ ...

ಏಳು ವರ್ಷದ ಹಿಂದೆ ನಾಪತ್ತೆಯಾದ ಬಾಲಕನನ್ನು ಹುಡುಕಿಕೊಟ್ಟ ಫೇಸ್ ಬುಕ್!

ಮುಂಬೈ : ಹೈದರಾಬಾದ್‌ನಲ್ಲಿ 2011ರಲ್ಲಿ ನಾಪತ್ತೆಯಾಗಿದ್ದ 15ವರ್ಷದ ಬಾಲಕ ಮತ್ತೆ ತನ್ನ ಮನೆಯವರನ್ನು ...

ನಮ್ಮ ಸಮಸ್ಯೆಗೆ ನಾವೇ ಪರಿಹಾರ ಕಂಡುಕೊಳ್ಳುತ್ತೇವೆ: ರಮೇಶ್ ಜಾರಕಿಹೊಳಿ

ಬೆಳಗಾವಿ: ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ತಮ್ಮಿಂದಾಗಿ ಕಂಟಕ ಎದುರಾಗಿದೆ ಎಂಬ ಸುದ್ದಿಗಳನ್ನು ರಮೇಶ್ ...

ಪ್ರಿಯತಮೆ ಜೊತೆಗಿದ್ದ ಯುವಕನ ಮುಂಗೈ ಕತ್ತರಿಸಿದ ದುಷ್ಕರ್ಮಿಗಳು

ಬೆಂಗಳೂರು : ಪ್ರಿಯತಮೆ ಜೊತೆಗೆ ಪ್ರವಾಸದಲ್ಲಿದ್ದ ಯುವಕನೊಬ್ಬನ ಮುಂಗೈಯನ್ನು ದುಷ್ಕರ್ಮಿಗಳು ಕತ್ತರಿಸಿದ ...