ಮೋದಿ, ಷಾ ಜತೆಯಲ್ಲೇ ಇದ್ದಾರೆ, ಇಬ್ಬರಿಗೂ ಕ್ರಿಮಿನಲ್ ಮೈಂಡ್ ಜಾಸ್ತಿ: ಸಿದ್ದರಾಮಯ್ಯ

ಬೆಂಗಳೂರು, ಬುಧವಾರ, 8 ನವೆಂಬರ್ 2017 (14:11 IST)

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅಮಿತ್ ಷಾ ಜೊತೆಯಲ್ಲೇ ಇದ್ದಾರೆ. ಇಬ್ಬರಿಗೂ ಕ್ರಿಮಿನಲ್ ಮೈಂಡ್ ಜಾಸ್ತಿ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.


ಫ್ರೀಡಂಪಾರ್ಕ್ ನಲ್ಲಿ ಮಾತನಾಡಿದ ಅವರು, ಕಪ್ಪು ಹಣ ಇಟ್ಟವರ ನಿದ್ದೆಗೆಡಿಸಿದ್ದೀನಿ ಎಂದು ಮೋದಿ ಹೇಳಿದ್ರು. ಆದ್ರೆ ಎಟಿಎಂ ಮುಂದೆ ನಿಂತು ಜನಸಾಮಾನ್ಯರು ನಿದ್ದೆಗೆಟ್ಟರು. ಟಾಟಾ ಬಿರ್ಲಾ, ಅಂಬಾನಿ ಅಂಥವರು ಎಟಿಎಂ ಮುಂದೆ ನಿಂತಿಲ್ಲ. ಅವರೆಲ್ಲ ಮೋದಿ ಜೊತೆ ಓಡಾಡಿಕೊಂಡಿದ್ದಾರೆ. 100 ಕ್ಕೂ ಹೆಚ್ಚು ಜನ ಬಡವರು ಸತ್ತಿದ್ದಾರೆ ಎಂದರು.

ಬಿಜೆಪಿ ಕಟ್ಟಿದ ಆಡ್ವಾನಿ ಸೇರಿದಂತೆ ಬಿಜೆಪಿ ಪ್ರಮುಖರೆಲ್ಲ ಮೂಲೆಗುಂಪಾದ್ರು. ಷಾ ಮಗ ಜೈ ಷಾ ಕಂಪೆನಿ ಮೂಲಕ ಎಷ್ಟು ಕಪ್ಪುಹಣ ಬಿಳಿ ಹಣ ಆಗಿದೆ ಹೇಳಬೇಕು. ಸ್ವತಃ ಜೈಲಿಗೆ ಹೋದ ಆಸಾಮಿ ಅಮಿತ್ ಷಾ, ಸಿದ್ದರಾಮಯ್ಯನ ಸರ್ಕಾರ ಭ್ರಷ್ಟ ಸರ್ಕಾರ ಎನ್ನುತ್ತಾರೆ. ಅದನ್ನ ಯಡಿಯೂರಪ್ಪ ಕೂಡ ಶುರು ಮಾಡಿದ್ರು. ನಾಚಿಕೆ ಮಾನ ಮರ್ಯಾದೆ ಇದ್ರೆ ಜನರಿಗೆ ಹೇಗೆ ಮುಖ ತೋರಿಸ್ತಾರೋ. ಶೆಟ್ಟರ್ ಅಂತಾ ಒಬ್ನು ಆಸಾಮಿ ಇದಾನೆ. ಅವನು ಸಿದ್ದರಾಮಯ್ಯನ ಸಾಧನೆ ಶೂನ್ಯ ಎನ್ನುತ್ತಾನೆ ಎಂದು ಏಕವಚನ ಬಳಸಿದರು.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಐದನೇ ಬಾರಿಗೆ ಏಷ್ಯಾ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಗೆದ್ದ ಮೇರಿ ಕೋಮ್

ನವದೆಹಲಿ: ಏಷ್ಯಾ ಬಾಕ್ಸಿಂಗ್ ಮಹಿಳಾ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಹೆಮ್ಮೆಯ ಪುತ್ರಿ ಮೇರಿ ಕೋಮ್ ಐದನೇ ...

news

ಕೇಂದ್ರ ನೋಟ್ ಬ್ಯಾನ್ ನಿಂದ ಜನರನ್ನ ಸಂಕಷ್ಟಕ್ಕೆ ಸಿಲುಕಿಸಿದೆ: ಪರಮೇಶ್ವರ್

ಬೆಂಗಳೂರು: ನೋಟ್ ಬ್ಯಾನ್ ನಿಂದ ಒಂದು ವರ್ಷದಿಂದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿ ಸಾಯಿಸಿದ್ರಿ. ...

news

ಮೋದಿ ಸರಕಾರದ ನೋಟ್‌ಬ್ಯಾನ್, ಜಿಎಸ್‌ಟಿ ದೇಶಕ್ಕೆ ವಿನಾಶಕಾರಿ; ಗುಂಡೂರಾವ್

ಬೆಂಗಳೂರು: ಒಳ್ಳೆಯದಕ್ಕೆ ನೋಟ್ ಬ್ಯಾನ್ ಮಾಡಿದ್ದಾರೆ ಅಂದಕೊಂಡಿದ್ದರು. ನೋಟ್‌ಬ್ಯಾನ್‌ನಿಂದ ಕಪ್ಪು ಹಣ ...

news

ಸಿದ್ದರಾಮಯ್ಯ ಟಿಪ್ಪು ಸುಲ್ತಾನನ ಶನಿ ಸಂತಾನದ ವಾರಸುದಾರ: ಅದ್ದಂಡ ಕಾರ್ಯಪ್ಪ

ಬೆಂಗಳೂರು: ಮಗ ರಾಕೇಶ್ ಸತ್ತಾಗ ಪುತ್ರಶೋಖದಿಂದ ಕಣ್ಣೀರಿಟ್ಟ ಸಿದ್ದರಾಮಯ್ಯ ನವರೇ, ಕೊಡಗಿನ ಜನ ತಮ್ಮ ...

Widgets Magazine
Widgets Magazine