ದೇವೇಗೌಡರಿಗೆ ಪ್ರಧಾನಿ ನರೇಂದ್ರ ಮೋದಿಯಿಂದ ಬುಲಾವ್

ಬೆಂಗಳೂರು, ಶನಿವಾರ, 15 ಜುಲೈ 2017 (13:21 IST)

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ನವದೆಹಲಿಗೆ ಬರುವಂತೆ ಪ್ರಧಾನಿ ಮೋದಿ ಆಹ್ವಾನ ನೀಡಿದ್ದಾರೆ.
 
ಇಂದು ಬೆಳಿಗ್ಗೆ ಪ್ರಧಾನಿ ಮೋದಿ ಸೂಚನೆ ಮೇರೆಗೆ ಕೇಂದ್ರ ವಿದೇಶಾಂಗ ಖಾತೆ ಸಚಿವ ಸುಷ್ಮಾ ಸ್ವರಾಜ್ ಮಾಜಿ ಪ್ರಧಾನಿ ದೇವೇಗೌಡರಿಗೆ ಕರೆ ಮಾಡಿ, ಕನ್ನಡದಲ್ಲಿಯೇ ಯೋಗಕ್ಷೇಮ ವಿಚಾರಿಸಿ, ನಿಮ್ಮ ಸಲಹೆ ಅಗತ್ಯವಾಗಿದ್ದರಿಂದ ಪ್ರಧಾನಿ ಮೋದಿಯವರು ಆಹ್ವಾನವನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಚೀನಾ, ಭಾರತ ಗಡಿಯಲ್ಲಿ ಎದುರಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ದೇವೇಗೌಡರಿಗೆ ಪ್ರಧಾನಿ ಮೋದಿ ಆಹ್ವಾನ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
 
ಮಾಜಿ ಪ್ರಧಾನಿ ದೇವೇಗೌಡರು ಇಂದು ಪ್ರಧಾನಿ ಮೋದಿ ಆಹ್ವಾನದ ಮೇರೆಗೆ ನವದೆಹಲಿಗೆ ತೆರಳುತ್ತಿದ್ದು ಸಂಜೆ 5.30 ಗಂಟೆಗೆ ಜವಾಹರ್ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ದೇವೇಗೌಡ ಪ್ರಧಾನಿ ಮೋದಿ ಸುಷ್ಮಾ ಸ್ವರಾಜ್ Devegowda Pm Modi Sushma Swaraj

ಸುದ್ದಿಗಳು

news

ಹೆಣ್ಣು ಹೆತ್ತದ್ದಕ್ಕಾಗಿ ವರದಕ್ಷಿಣೆ ನೆಪವೊಡ್ಡಿ ಬಾಣಂತಿಗೆ ಥಳಿತ

ಹೆಣ್ಣು ಮಗುವಿಗೆ ಜನ್ಮ ನೀಡಿದಳು ಎಂಬ ಕಾರಣಕ್ಕೆ ಹಸಿ ಬಾಣಂತಿಯೊಬ್ಬಳ ಮೇಲೆ ಆಕೆಯ ಮೈದುನ ಮತ್ತು ಸ್ನೇಹಿತ ...

news

ಪರಪ್ಪನ ಅಗ್ರಹಾರ ಜೈಲಾಗಿ ಉಳಿದಿಲ್ಲ, ಅದೊಂದು ಬಾರ್: ಆರ್.ಅಶೋಕ್

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲು ಜೈಲಾಗಿ ಉಳಿದಿಲ್ಲ ಅದೊಂದು ಬಾರ್ ಎನ್ನುವಂತಾಗಿದೆ ಎಂದು ಬಿಜೆಪಿ ಮುಖಂಡ ...

news

ಉಪರಾಷ್ಟ್ರಪತಿಯಾಗಲಿದ್ದಾರಾ ಎಸ್ ಎಂ ಕೃಷ್ಣ?

ಬೆಂಗಳೂರು: ಕಾಂಗ್ರೆಸ್ ತ್ಯಜಿಸಿ ಇತ್ತೀಚೆಗೆ ಬಿಜೆಪಿ ಸೇರಿದ್ದ ಮಾಜಿ ಕೇಂದ್ರ ಸಚಿವ ಎಸ್ ಎಂ ಕೃಷ್ಣ ...

news

ಅಮರನಾಥ ಯಾತ್ರಿಕರ ಮೇಲೆ ದಾಳಿ: ಪಿಡಿಪಿ ಶಾಸಕನ ಡ್ರೈವರ್ ಅರೆಸ್ಟ್

ಅಮರನಾಥ ಯಾತ್ರಿಕರ ಮೇಲೆ ನಡೆದ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಡಿಪಿ ಶಾಸಕ ಏಜಾಜ್ ಅಹ್ಮದ್ ಅವರ ...

Widgets Magazine