''ಚಮಚಾ"ಗಳಿಂದ ಪ್ರಧಾನಿ ಮೋದಿಗೆ ಹೂ ಮಳೆ: ಮಾಯಾವತಿ

ವಾರಣಾಸಿ, ಶನಿವಾರ, 4 ಮಾರ್ಚ್ 2017 (17:19 IST)

Widgets Magazine

ಪ್ರಧಾನಮಂತ್ರಿ ನರೇಂದ್ರ ಮೋದಿ ಹೂ ಮಳೆಗೆರೆಯಲು ಚಮಚಾಗಳನ್ನು ನೇಮಿಸಿಕೊಂಡಿದ್ದಾರೆ ಎಂದು ಮಾಜಿ ಸಿಎಂ, ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ವಾಗ್ದಾಳಿ ನಡೆಸಿದ್ದಾರೆ.
 
ಮೋದಿ ಕಾಶಿ ವಿಶ್ವನಾಥನನ್ನು ಎಷ್ಟೆ ಪೂಜೆ ಮಾಡಿದರೂ ಕೂಡಾ ದೇವರ ಆಶೀರ್ವಾದ ಸಿಗಲ್ಲ. ದತ್ತುಪುತ್ರನನ್ನು ಉತ್ತರಪ್ರದೇಶದ ಜನತೆ ಗುಜರಾತ್‌ಗೆ ವಾಪಸ್ ಕಳುಹಿಸಲಿದ್ದಾರೆ ಎಂದು ಗುಡುಗಿದ್ದಾರೆ.
 
ಸಮಾಜವಾದಿ- ಕಾಂಗ್ರೆಸ್ ಮೈತ್ರಿಕೂಟ ಮತ್ತು ಬಿಜೆಪಿ ಎರಡು ಮತ್ತು ಮೂರನೇ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿವೆ. ಬಿಎಸ್‌ಪಿ ಪಕ್ಷ ಮೊದಲನೇ ಸ್ಥಾನದಲ್ಲಿದೆ ಎಂದು ಲೇವಡಿ ಮಾಡಿದ್ದಾರೆ.
 
ವಾರಣಾಸಿಯಲ್ಲಿ ಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಪ್ರಧಾನಿ ಮೋದಿ ಈಡೇರಿಸಿಲ್ಲ. ನೋಟ್‌ಬ್ಯಾನ್‌ನಿಂದ ಬಡವರು ಮತ್ತು ಮಧ್ಯಮ ವರ್ಗದವರು ತಮ್ಮ ಜೀವನವನ್ನೇ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಪ್ರಧಾನಿ ಮೋದಿ ತಮ್ಮ ಇಡೀ ಸಚಿವ ಸಂಪುಟವನ್ನು ವಾರಣಾಸಿಗೆ ತಂದು ನಿಲ್ಲಿಸಿದರೂ ಕೂಡಾ ಯಾವುದೇ ಪ್ರಯೋಜನವಾಗುವುದಿಲ್ಲ. ಉತ್ತರಪ್ರದೇಶದಲ್ಲಿ ಬಿಎಸ್‌ಪಿ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸಿಲಿಂಡರ್ ದರ ಏರಿಕೆ: ಪ್ರಧಾನಿ ಮೋದಿಯಿಂದ ದೇಶದ ಜನತೆಗೆ ಮೋಸ ಎಂದ ಲಕ್ಷ್ಮಿ ಹೆಬ್ಬಾಳ್ಕರ್

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅಡುಗೆ ಸಿಲಿಂಡರ್ ದರ ಏರಿಕೆಗೊಳಿಸಿ ದೇಶದ ಜನತೆಗೆ ಮೋಸ ...

news

69ನೇ ಮಗುವಿಗೆ ಜನ್ಮ ನೀಡಿ ಪ್ರಸವದ ವೇಳೆಯೇ ಮೃತಪಟ್ಟ ಮಹಿಳೆ

69ನೇ ಮಗುವಿಗೆ ಜನ್ಮ ನೀಡಿದ ಮಹಿಳೆ ಪ್ರಸವದ ವೇಳೆಯೇ ಮೃತಪಟ್ಟಿರುವ ಘಟನೆ ಗಾಜಾದಿಂದ ವರದಿಯಾಗಿದೆ. ಕುಟುಂಬ ...

news

ಬಿಜೆಪಿಗಿಂತ ದೊಡ್ಡ ಕೋಮುವಾದಿ ಕಾಂಗ್ರೆಸ್: ಮಧು ಬಂಗಾರಪ್ಪ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಬಿಜೆಪಿಗಿಂತ ದೊಡ್ಡ ಕೋಮುವಾದಿಯಾಗಿದೆ ಎಂದು ...

news

ಅಬ್ ಕಿ ಬಾರ್ ಯಡಿಯೂರಪ್ಪ ಸರಕಾರ: ಸಿ.ಟಿ.ರವಿ ಘೋಷಣೆ

ಬೆಂಗಳೂರು: ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ನಂತರ ಇತರ ಪಕ್ಷಗಳ ಶಾಸಕರು ಬಿಜೆಪಿ ಪಕ್ಷಕ್ಕೆ ...

Widgets Magazine