ಪೊಲೀಸರ ಮೇಲೆ ಹಲ್ಲೆ ಮಾಡಿದ್ರೆ ಗುಂಡುಹಾರಿಸಿ: ರಾಮಲಿಂಗಾರೆಡ್ಡಿ ಆದೇಶ

ಬೆಂಗಳೂರು, ಭಾನುವಾರ, 21 ಜನವರಿ 2018 (14:18 IST)

 ಪೊಲೀಸರ ಮೇಲೆ ಯಾರೇ ಹಲ್ಲೆ ಮಾಡಿದ್ರೆ ಗುಂಡುಹಾರಿಸಿ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರ ಆತ್ಮರಕ್ಷಣೆಗಾಗಿ ಗನ್ ನೀಡಲಾಗುತ್ತದೆ. ಆರೋಪಿಗಳು ಹಲ್ಲೆ ಮಾಡಿದಾಗ ಗನ್ ಬಳಸಲು ಕಾನೂನಿನಲ್ಲಿ ಅವಕಾಶವಿದೆ. ಆತ್ಮರಕ್ಷಣೆಗಾಗಿ ಗನ್ ಬಳಸುವಂತೆ ಪೊಲೀಸರಿಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
 
ಆರೋಪಿಗಳು ನಿರಂತರವಾಗಿ ಪೊಲೀಸರ ಮೇಲೆ ಹಲ್ಲೆ, ಎಸಗುತ್ತಿದ್ದಾರೆ. ಇಂತಹದನ್ನು ನೋಡಿ ಸರಕಾರ ಮೌನವಾಗಿರಲು ಸಾಧ್ಯವಿಲ್ಲ. ಕೂಡಲೇ ದುಷ್ಟ ಆರೋಪಿಗಳಿಗೆ ತಕ್ಕ ಪಾಠ ಕಲಿಸಿ ಎಂದು ಸಚಿವ ರೆಡ್ಡಿ ಖಡಕ್ ಆದೇಶ ನೀಡಿದ್ದಾರೆ.
 
ಕಳೆದ ಕೆಲ ದಿನಗಳಿಂದ ನಿರಂತರವಾಗಿ ಪೊಲೀಸರ ಮೇಲೆ ಆರೋಪಿಗಳು ನಿರ್ಭಯವಾಗಿ ಹಲ್ಲೆ ಮಾಡುತ್ತಿರುವ ಘಟನೆಗಳಿಂದ ಆಕ್ರೋಶಗೊಂಡಿರುವ ಸಚಿವ ರಾಮಲಿಂಗಾರೆಡ್ಡಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿ ಪಕ್ಷ ಬಿಡುವವರು ಬಿಡಲಿ ಚಿಂತೆಯಿಲ್ಲ: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಬಿಜೆಪಿ ಪಕ್ಷ ತೊರೆಯುವವರು ತೊರೆಯಲಿ ಯಾವುದೇ ಚಿಂತೆಯಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ್ಯ ...

news

ದಲಿತರನ್ನು ನಾಯಿಗಳಿಗೆ ಹೋಲಿಸಿದ ಸಚಿವ ಹೆಗಡೆ ವಿರುದ್ಧ ಖರ್ಗೆ ಗರಂ

ಬೆಂಗಳೂರು: ದಲಿತ ಪ್ರತಿಭಟನಾಕಾರರನ್ನು ನಾಯಿಗಳಿಗೆ ಹೋಲಿಸಿದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ...

news

ನಾವ್ಯಾರೂ ಮಣ್ಣಿನ ಮಕ್ಕಳಲ್ಲವೇ?: ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ಮಾಜಿ ಸಿಎಂಗಳಾದ ಎಚ್ ಡಿ ಕುಮಾರಸ್ವಾಮಿ ಮತ್ತು ಬಿಎಸ್ ಯಡಿಯೂರಪ್ಪನವರಿಗೆ ಹಾಲಿ ಸಿಎಂ ...

news

ದೋಸೆ ಮೇಲಿನ ಆಸೆಯಿಂದ ಸಚಿವ ಸಂತೋಷ್ ಲಾಡ್ ಮಾಡಿದ್ದೇನು ಗೊತ್ತಾ...?

ಮೈಸೂರು : ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕಾರ್ಯಕ್ರಮವೊಂದಕ್ಕೆ ಮೈಸೂರಿಗೆ ಆಗಮಿಸಿದಾಗ ಹೋಟೆಲ್ ...

Widgets Magazine
Widgets Magazine