ಯಡಿಯೂರಪ್ಪ ಪಿಎ ಸಂತೋಷ್ ಬಂಧನಕ್ಕೆ ಬಲೆ ಬೀಸಿದ ಪೊಲೀಸರು

ಬೆಂಗಳೂರು, ಸೋಮವಾರ, 17 ಜುಲೈ 2017 (13:04 IST)

ಬಿಜೆಪಿ ಮುಖಂಡ ಈಶ್ವರಪ್ಪ ಪಿಎ ವಿನಯ್ ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದಂತೆ ಯಡಿಯೂರಪ್ಪ ಪಿಎ ಸಂತೋಷ್ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.


ತುಮಕೂರು ಜಿಲ್ಲೆಯ ನೊಣವಿನಕೆರೆಯಲ್ಲಿರುವ ಯಡಿಯೂರಪ್ಪ ಪಿಎ ಸಂತೋಷ್ ಅವರ ಮನೆಗೂ ಭೇಟಿ ನೀಡಿರುವ ಪೊಲೀಸರು ಮನೆ ಮುಂದೆ ನೋಟಿಸ್ ಅಂಟಿಸಿ ಬಂದಿದ್ದಾರೆ. ಮಹಾಲಕ್ಷ್ಮೀ ಪುರಂ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ನೊಟಿಸ್ ಅಂಟಿಸಿದ್ದಾರೆ ಎಂದು ತಿಳಿದುಬಂದಿದೆ.

ಇತ್ತ, ಬಂಧನ ಭೀತಿ ಎದುರಿಸುತ್ತಿರುವ ಬಿಎಸ್`ವೈ ಪಿಎ ಸಂತೋಷ್ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ನವದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಯಡಿಯೂರಪ್ಪ, ರಾಜಕೀಯ ಉದ್ದೇಶದಿಂದ ನನ್ನ ಪಿಎ ಸಂತೋಷ್ ಬಂಧನಕ್ಕೆ ಷಡ್ಯಂತ್ರ ನಡೆಯುತ್ತಿದೆ. ಸರ್ಕಾರದ ವಿರುದ್ಧ ನಾನು ಟೀಕೆ ಮಾಡುತ್ತಿರುವುದರಿಂದ ನಿರಪರಾಧಿಯಾದ ಸಂತೋಷ್ ಬಂಧನಕ್ಕೆ ಮುಂದಾಗಿದ್ದಾರೆ. ಸಂತೋಷ್`ಗಾಗಿ ನನ್ನ ಮನೆಗೂ ಆಗಮಿಸಿದ್ದ ಪೊಲೀಸರು ಹುಡುಕಾಟ ನಡೆಸಿದ್ದರು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ: ಜಿಎಸ್ ಟಿಯ ಹೊಸ ಉತ್ಸಾಹದೊಂದಿಗೆ ಅಧಿವೇಶನ ನಡೆಯಲಿದೆ: ಪ್ರಧಾನಿ

ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿದ್ದು, ಕಲಾಪ ಆರಂಭಕ್ಕೂ ಮುನ್ನ ಮಾತನಾಡಿದ ಪ್ರಧಾನಿ ...

news

ಬಿಎಸ್‌ವೈ ನಿವಾಸದಲ್ಲಿ ಮಧ್ಯರಾತ್ರಿ ತಲಾಶ್ ಸರಿಯಲ್ಲ: ಶೆಟ್ಟರ್ ಕಿಡಿ

ಬೆಂಗಳೂರು: ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಅಪಹರಣ ಕುರಿತಂತೆ ಆರೋಪಿ ...

news

ಕರ್ಮಕಾಂಡ ಬಯಲಿಗೆಳೆದ ಡಿಐಜಿ ರೂಪಾ ವಿರುದ್ಧವೇ ಪ್ರತಿಭಟನೆ ಜೋರು

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡಗಳ ಬಗ್ಗೆ ಡಿಐಜಿ ರೂಪಾ ಎರಡನೇ ವರದಿ ನೀಡಿದ ಬೆನ್ನಲ್ಲೇ ಅವರ ...

news

ಫ್ರಂಟ್, ಬ್ಯಾಕ್, ರೈಟ್ ಲೆಫ್ಟ್ ಎಲ್ಲರಿಗೂ ಹುದ್ದೆ ದೊರೆತಿವೆ: ಅಂಜನೇಯ

ಬೆಂಗಳೂರು: ಕೆಪಿಸಿಸಿ ಪದಾಧಿಕಾರಿಗಳ ನೇಮಕದಲ್ಲಿ ತಾರತಮ್ಯವಾಗಿದೆ ಎನ್ನುವ ವರದಿಗಳಿಗೆ ಪ್ರತಿಕ್ರಿಯೆ ನೀಡಿದ ...

Widgets Magazine