ಹಣ ಸಾಗಿಸುತ್ತಿದ್ದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಕಾರು ಜಪ್ತಿ?

ನಂಜನಗೂಡು, ಶುಕ್ರವಾರ, 7 ಏಪ್ರಿಲ್ 2017 (18:44 IST)

Widgets Magazine

ಉಪಚುನಾವಣೆಯಲ್ಲಿ ಹಣ ಹಂಚಲು ತೆಗೆದುಕೊಂಡು ಹೋಗುತ್ತಿದ್ದ ಮಾಜಿ ಸಚಿವ ರೇಣುಕಾಚಾರ್ಯ ಅವರದ್ದೆನ್ನಲಾದ ಕಾರನ್ನು ಪೊಲೀಸರು ಜಪ್ತಿ ಮಾಡಿ 2 ಲಕ್ಷ 96 ಸಾವಿರ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.
 
ಗುಂಡ್ಲುಪೇಟೆಯಿಂದ ನಂಜನಗೂಡಿಗೆ ತೆರಳುತ್ತಿರುವಾಗ ಬೇಗೂರು ಚೆಕ್‌‍ಪೋಸ್ಟ್‌ನಲ್ಲಿ ರೇಣುಕಾಚಾರ್ಯ ಅವರ ಸ್ಕಾರ್ಪಿಯೋ ಕಾರಿನಲ್ಲಿದ್ದ 2 ಲಕ್ಷ 96 ಸಾವಿರ ರೂಪಾಯಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರಿನಲ್ಲಿದ್ದ ನಾಲ್ವರು ಆರೋಪಿಗಳನ್ನು ವಶಕ್ಕೆ ಬಂಧಿಸಿದ್ದಾರೆ.
 
ಪೊಲೀಸರು ಕಾರು ಜಪ್ತಿ ಮಾಡಿ ಹಣ ವಶಕ್ಕೆ ಪಡೆದಿದ್ದಾರೆ. ಕಾರು ನನ್ನದಲ್ಲ ಎಂದು ರೇಣುಕಾಚಾರ್ಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
 
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಣ ಹಂಚುತ್ತಿದ್ದಾರೆ ಎಂದು ಆರೋಪಿಸುತ್ತಿದ್ದ ಬಿಜೆಪಿ ನಾಯಕರಿಗೆ, ಇದೀಗ ಬಿಜೆಪಿ ಮುಖಂಡ ಮಾಜಿ ಸಚಿವ ರೇಣುಕಾಚಾರ್ಯ ಹಣ ಹಂಚಲು ತೆಗೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಪೊಲೀಸರಿಗೆ ಸಿಕ್ಕುಬಿದ್ದಿರುವುದು ಇಕ್ಕಟ್ಟಿಗೆ ಸಿಲುಕಿದಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸ್ವೀಡನ್: ಜನರ ಮೇಲೆ ಟ್ರಕ್ ನುಗ್ಗಿಸಿ ಮೂವರ ಹತ್ಯೆಗೈದ ಭಯೋತ್ಪಾದಕ

ಸ್ಟಾಕ್‌ಹೋಮ್‌: ಸ್ವೀಡನ್ ರಾಜಧಾನಿ ಸ್ಟಾಕ್‌ಹೋಮ್‌ನ ಜನನಿಬಿಡ ಪ್ರದೇಶವಾದ ಕ್ವೀನ್ ಸ್ಟ್ರೀಟ್‌ನಲ್ಲಿ ...

news

ಉಪ ಚುನಾವಣೆ: ಬಹಿರಂಗ ಪ್ರಚಾರ ಅಂತ್ಯ, ಇನ್ನೇನಿದ್ದರೂ ಮನೆ ಮನೆ ಪ್ರಚಾರ

ಉಪಚುನಾವಣೆ ನಡೆಯುತ್ತಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ...

news

ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಅಧಿಕೃತ ತೆರೆ

ಗುಂಡ್ಲುಪೇಟೆ: ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಅಧಿಕೃತ ತೆರೆ ಬಿದ್ದಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ...

news

ಪ್ರತಾಪ್ ಸಿಂಹ ಅನಾಗರಿಕ ಮನುಷ್ಯ: ಸಿಎಂ ವಾಗ್ದಾಳಿ

ಮೈಸೂರು: ಬಿಜೆಪಿ ಸಂಸದ ಪ್ರತಾಪ್ ಸಿಂಹ ಓರ್ವ ಅಪ್ರಭುದ್ಧ ಮನುಷ್ಯ ಎಂದು ಸಿಎಂ ಸಿದ್ದರಾಮಯ್ಯ ಏಕವಚನದಲ್ಲಿ ...