ಮುತಾಲಿಕ್‌ ಫೋಟೋದೊಂದಿಗೆ ಅಶ್ಲೀಲ ಫೋಟೋ: ಜೆಡಿಎಸ್ ಮುಖಂಡನ ಬಂಧನ

ಬೆಳಗಾವಿ, ಶುಕ್ರವಾರ, 17 ನವೆಂಬರ್ 2017 (12:05 IST)

ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಫೋಟೋದೊಂದಿಗೆ ಅಶ್ಲೀಲ ಫೋಟೋ ಲಗತ್ತಿಸಿ ಪೋಸ್ಟ್ ಮಾಡಿದ್ದ ಜೆಡಿಎಸ್ ಮುಖಂಡನನ್ನು ಶ್ರೀರಾಮಸೇನೆ ಕಾರ್ಯಕರ್ತರು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಹುಕ್ಕೇರಿ ತಾಲೂಕಿನಲ್ಲಿ ವರದಿಯಾಗಿದೆ.
 
ಜೆಡಿಎಸ್ ಮುಖಂಡ ಬಸಗೌಡ ಪಾಟೀಲ್, ಮುತಾಲಿಕ್ ಫೋಟೋವನ್ನು ಅಶ್ಲೀಲ ಫೋಟೋದೊಂದಿಗೆ ಲಗತ್ತಿಸಿ ಪೋಸ್ಟ್ ಮಾಡಿದ್ದನು. ಇದನ್ನು ತಿಳಿದ ಶ್ರೀರಾಮಸೇನೆ ಕಾರ್ಯಕರ್ತರು ಆತನನ್ನು ಹಿಡಿದು ಥಳಿಸಿದ್ದಲ್ಲದೇ ಪೊಲೀಸರಿಗೆ ಒಪ್ಪಿಸಿ ದೂರು ದಾಖಲಿಸಿದ್ದಾರೆ.
 
ಆರೋಪಿ ಬಸಗೌಡ ಪಾಟೀಲ್‌ನ ಮುಖಕ್ಕೆ ಮಸಿ ಬಳೆದು ಪಟ್ಟಣದಲ್ಲಿ ಮೆರವಣಿದೆ ಮಾಡಿದ ಶ್ರೀರಾಮಸೇನೆ ಕಾರ್ಯಕರ್ತರು ಮುತಾಲಿಕ್ ವಿರುದ್ಧ ಇಂತಹ ಅಸಹ್ಯ ಕೃತ್ಯಗಳನ್ನು ಎಸಗಿದವರನ್ನು ಕ್ಷಮಿಸಲಾಗದು ಎಂದು ಗುಡುಗಿದ್ದಾರೆ.
 
ಪೊಲೀಸರು ಆರೋಪಿಯ ವಿರುದ್ಧ ದೂರು ದಾಖಲಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಸಿದ್ದರಾಮಯ್ಯಗೆ ತುರ್ತು ಕರೆ ಮಾಡಿದ ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಖಾಸಗಿ ವೈದ್ಯರು ಮುಷ್ಕರ ನಡೆಸುತ್ತಿರುವ ಹಿನ್ನಲೆಯಲ್ಲಿ ಇಂದೂ ನಾಲ್ವರು ...

news

ಸದನಕ್ಕೆ ತಲೆತೋರಿಸಿ ಕಲಾಪಕ್ಕೆ ನಾಪತ್ತೆಯಾದ ಕುಮಾರಸ್ವಾಮಿ

ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನ ಆರಂಭವಾಗಿ ನಾಲ್ಕು ದಿನ ಕಳೆದರೂ ...

news

ಕಾಂಗ್ರೆಸ್ ಸಂಸದ ಶಶಿ ತರೂರ್ ಗೆ ತೃತೀಯ ಲಿಂಗಿಯ ಪ್ರೇಮ ನಿವೇದನೆ!

ನವದೆಹಲಿ: ತಿರುವನಂತಪುರಂನ ಸಂಸದ, ಕಾಂಗ್ರೆಸ್ ನಾಯಕ ಶಶಿ ತರೂರ್ ಗೆ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ...

news

ಪಿಓಕೆ ಹಿಂಪಡೆಯಬೇಕು ಎಂದು ಭಾರತ ಬಯಸಿದ್ರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ರಾಜ್ಯ ಗೃಹ ಸಚಿವ

ನವದೆಹಲಿ: ಪಾಕಿಸ್ತಾನದಿಂದ ಪಾಕ್ ಆಕ್ರಮಿತ ಕಾಶ್ಮಿರವನ್ನು ವಶಪಡಿಸಿಕೊಳ್ಳಲು ಬಯಸಿದರೆ ಭಾರತವನ್ನು ಯಾರೂ ...

Widgets Magazine
Widgets Magazine