ಮೊಮ್ಮಗ ಪ್ರಜ್ವಲ್`ಗೆ ದೇವೇಗೌಡರು ಹೇಳಿದ ಬುದ್ಧಿಮಾತು

ಬೆಂಗಳೂರು, ಭಾನುವಾರ, 9 ಜುಲೈ 2017 (15:30 IST)

ಪ್ರಜ್ವಲ್ ರೇವಣ್ಣರನ್ನ ಕರೆಯಿಸಿ ಬುದ್ಧಿ ಹೇಳಿದ್ದೇನೆ. ಪ್ರಜ್ವಲ್ ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಯಾಚಿಸಿದ್ದಾರೆ. ಜೆಡಿಎಸ್`ನಲ್ಲಿ ಬ್ರೀಫ್ ಕೇಸ್ ಸಂಸ್ಕೃತಿ ಇಲ್ಲ ಎಂದು ಮಾಜಿ ಪ್ರಧಾನಿ ಹೇಳಿದ್ದಾರೆ.


ಇತ್ತೀಚೆಗೆ ಹುಣಸೂರು ಕಾರ್ಯಕ್ರಮದ ವೇಳೆ ಜೆಡಿಎಸ್`ನಲ್ಲಿ ಸೂಟ್ ಕೇಸ್ ತಂದವರಿಗೆ ಮುಂದಿನ ಬೆಂಚ್, ಪಕ್ಷಕ್ಕಾಗಿ ದುಡಿದವರಿಗೆ ಹಿಂದಿನ ಬೆಂಚ್ ಹಾಕುತ್ತಾರೆ ಎಂದು ಪ್ರಜ್ವಲ್ ರೇವಣ್ಣ ಬಹಿರಂಗ ಹೇಳಿಕೆ ನೀಡಿದ್ದರು. ಪ್ರಜ್ವಲ್ ಹೇಳಿಕೆ ಬಗ್ಗೆ ರಾಜ್ಯಾದ್ಯಂತ ಭಾರೀ ಸುದ್ದಿಯಾಗಿತ್ತು. ಈ ಬಗ್ಗೆ ಸ್ಪಷ್ಟನೆ ಣಿಡಿರುವ ಮಾಜಿ ಪ್ರಧಾನಿ ದೇವೇಗೌಡರು, ನಮ್ಮಲ್ಲಿ ಬ್ರೀಫ್ ಕೇಸ್ ಸಂಸ್ಕೃತಿ ಇಲ್ಲ, ಪ್ರಜ್ವಲ್ ತಮ್ಮ ಹೇಳಿಕೆಗೆ ಬಗ್ಗೆ ಕ್ಷಮೆಯಾಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ರಾಜ್ಯಮಟ್ಟದಲ್ಲಿ ನೀನು ಹೆಸರು ಕಳೆದುಕೊಂಡಿದ್ದೀಯ. ನಿನ್ನ ಹೆಸರಿಗೆ ಡ್ಯಾಮೇಜ್ ಆಗಿದೆ ಎಂದು ಪ್ರಜ್ವಲ್ ರೇವಣ್ಣಗೆ ಬುದ್ಧಿ ಹೇಳಿದ್ದೇನೆ. ಪ್ರಜ್ವಲ್ ಹೇಳಿಕೆಯಿಂದ ರಾಜ್ಯಾಧ್ಯಕ್ಷ ಕುಮಾರಸ್ವಾಮಿಗೂ ನೋವಾಗಿದೆ. ಕುಮಾರಸ್ವಾಮಿ ಬಳಿಯೂ ಕ್ಷಮೆಯಾಚಿಸುವುದಾಗಿ ಪ್ರಜ್ವಲ್ ಹೇಳಿದ್ದಾರೆ. ರಾಜಕೀಯ ಮಕ್ಕಳಾಟವಲ್ಲ, ಅದು ಮುಳ್ಳಿನ ಹಾದಿ ಎಂದು ತಿಳಿ ಹೇಳಿರುವುದಾಗಿ ದೇವೇಗೌಡರು ತಿಳಿಸಿದ್ಧಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಪ್ರಜ್ವಲ್ ದೇವೇಗೌಡ ಜೆಡಿಎಸ್ Devegowda Prajwal Jds

ಸುದ್ದಿಗಳು

news

ವಿಶ್ವದ ಅತಿ ಕಿರಿಯ ವಯಸ್ಸಿನ ಬೋಯಿಂಗ್ 777 ಕಮಾಂಡರ್ ಆದ ಆ್ಯನಿ

ದೈತ್ಯ ಬೋಯಿಂಗ್ 777 ವಿಮಾನದ ಕಮಾಂಡರ್ ಆಗುವ ಮೂಲಕ ಭಾರತೀಯ ಮೂಲದ ಆ್ಯನಿ ದಿವ್ಯಾ ಅಂತಾರಾಷ್ಟ್ರೀಯ ...

news

ಕೋಮು ಗಲಭೆಗೆ ಪ್ರಚೋದನೆ ನೀಡುವ ಫೇಕ್ ಇಮೇಜ್ ಶೇರ್: ಬಿಜೆಪಿ ಬೆಂಬಲಿಗ ಅರೆಸ್ಟ್

ಪಶ್ಚಿಮ ಬಂಗಾಳದ ಬದುರಿಯಾ ಮತ್ತು ಬಸಿರ್ಹಾಟ್‌ನಲ್ಲಿ ಉಂಟಾಗಿರುವ ಕೋಮು ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಹ ...

news

ಚೀನಾಗೆ ಮತ್ತಷ್ಟು ಶಾಕ್ ಕೊಡಲು ಮುಂದಾದ ಭಾರತ

ಭಾರತ ಮತ್ತು ಚೀನಾ ಗಡಿ ಪ್ರದೇಶದಲ್ಲಿ ದೊಕ್ಲಾಮ್ ವಿಚಾರವಾಗಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿರುವ ...

news

ಮಧ್ಯರಾತ್ರಿಯಾದ್ರೆ ಮೆಟ್ರೋ ರೈಲಿಗೆ ಹತ್ತಕ್ಕೂ ಭಯ..!

ಬೆಂಗಳೂರು: ಮೆಟ್ರೋ ರೈಲು ಬೆಂಗಳೂರಿನಲ್ಲಿ ಓಡಾಡಲು ಪ್ರಾರಂಭಿಸಿದ ಮೇಲೆ ನಮ್ಮ ರಾಜಧಾನಿಗೊಂದು ಗರಿಮೆ ಎಂದು ...

Widgets Magazine