ಪ್ರಜ್ವಲ್ ಸ್ಪರ್ಧೆಗೆ ಎಚ್‌.ಡಿ.ಕುಮಾರಸ್ವಾಮಿ ತೀರ್ಮಾನವೇ ಅಂತಿಮ: ಎಚ್.ಡಿ.ರೇವಣ್ಣ

ಹಾಸನ, ಶುಕ್ರವಾರ, 10 ನವೆಂಬರ್ 2017 (15:19 IST)

ಪುತ್ರ ಪ್ರಜ್ವಲ್ ವಿಧಾನಸಭೆ ಚುನಾವಣೆ ಸ್ಪರ್ಧೆ ಕುರಿತಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತೀರ್ಮಾನವೇ ಅಂತಿಮ ಎಂದು ಜೆಡಿಎಸ್ ಮುಖಂಡ ಹೇಳಿದ್ದಾರೆ.
ಪ್ರಜ್ವಲ್ ಸ್ಪರ್ಧೆ ಕುರಿತಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕುಟುಂಬದಲ್ಲಿ ಭಿನ್ನಮತ, ಗೊಂದಲವಿದೆ. ಹೊಡೆದಾಡಿಕೊಳ್ಳುತ್ತಿದ್ದಾರೆ ಎಂದು ಯಾರಾದರೂ ಭಾವಿಸಿದಲ್ಲಿ ಅದೊಂದು ಭ್ರಮೆಯಾಗಲಿದೆ ಎಂದು ತಿಳಿಸಿದ್ದಾರೆ.
 
ನಾನು ಜೆಡಿಎಸ್ ಪಕ್ಷದ ಶಾಸಕನಾಗಲು 18 ವರ್ಷಗಳು ಬೇಕಾಯಿತು. ಪ್ರಜ್ವಲ್ ಇನ್ನೂ ಯುವಕ. ಮುಂದೆ ತುಂಬಾ ಭವಿಷ್ಯವಿದೆ. ಸೂಕ್ತ ಸಮಯದಲ್ಲಿ ಆತನ ಸ್ಪರ್ಧೆಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
 
ಸದ್ಯ ಪ್ರಜ್ವಲ್, ತಾತಾ ಏನು ಹೇಳುತ್ತಾರೋ ಅದನ್ನು ಮಾಡುತ್ತೇನೆ ಎಂದು ತಿಳಿಸಿದ್ದಾನೆ. ತಾತನ ಆದೇಶದಂತೆ ಪಕ್ಷ ಸಂಘಟನೆಗಾಗಿ ದುಡಿಯುತ್ತಿದ್ದಾನೆ ಎಂದು ಎಚ್.ಡಿ.ರೇವಣ್ಣ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಸಿದ್ದರಾಮಯ್ಯ ಓರ್ವ ಬಚ್ಚಾ: ಯಡಿಯೂರಪ್ಪ ವಾಗ್ದಾಳಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಓರ್ವ ಬಚ್ಚಾ. ಲಜ್ಜಗೆಟ್ಟ ನಡುವಳಿಕೆಯ ಮುಖ್ಯಮಂತ್ರಿ ಎಂದು ಬಿಜೆಪಿ ...

news

ಟಿಪ್ಪು ಜಯಂತಿಯಲ್ಲಿ ಭಾಗಿಯಾದ ಬಿಜೆಪಿ ಶಾಸಕ ಆನಂದ್ ಸಿಂಗ್ ಓರ್ವ ಸ್ವಾಭಿಮಾನಿ: ಸಚಿವ ತಿಮ್ಮಾಪೂರ್

ಬಾಗಲಕೋಟೆ: ಬಿಜೆಪಿ ಶಾಸಕ ಆನಂದ್ ಸಿಂಗ್ ಓರ್ವ ಸ್ವಾಭಿಮಾನಿಯಾಗಿದ್ದರಿಂದ ಟಿಪ್ಪು ಸುಲ್ತಾನ್ ಜಯಂತಿ ...

news

ಬಿಜೆಪಿ ಸಚಿವನಿಗೆ ಅರ್ಥವಾಗಿಲ್ವಂತೆ ಪ್ರಧಾನಿ ಮೋದಿಯ ಜಿಎಸ್‌ಟಿ

ಭೋಪಾಲ್: ದೇಶದಾದ್ಯಂತ ವಿಪಕ್ಷಗಳು ಜಿಎಸ್‌ಟಿ ಜಾರಿಗೊಳಿಸಿರುವ ಬಗ್ಗೆ ತೀವ್ರ ವಿರೋಧ ...

news

ವಿಧಾನಸಭೆ ಚುನಾವಣೆಯಲ್ಲಿ ಪ್ರಜ್ವಲ್ ಸ್ಪರ್ಧಿಸೋಲ್ಲ: ಕುಮಾರಸ್ವಾಮಿ ಸ್ಪಷ್ಟನೆ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ದೇವೇಗೌಡರ ಕುಟುಂಬದಿಂದ ಇಬ್ಬರು ಮಾತ್ರ ...

Widgets Magazine
Widgets Magazine