ರಾಜಕೀಯಕ್ಕೆ ಅಧಿಕೃತ ಎಂಟ್ರಿ ಪಡೆದ ಎಚ್‌.ಡಿ,.ರೇವಣ್ಣ ಪುತ್ರ

ಬೆಂಗಳೂರು, ಸೋಮವಾರ, 27 ನವೆಂಬರ್ 2017 (18:50 IST)

ದೇವೇಗೌಡರ ಕುಟುಂಬದ ಮತ್ತೊಂದು ಕುಡಿ ರಾಜಕೀಯ ಪ್ರವೇಶಿಸಿದೆ.ಮಾಜಿ ಸಚಿವ ಪುತ್ರ ಪ್ರಜ್ವಲ್ ರೇವಣ್ಣರನ್ನು ಜೆಡಿಎಸ್ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮೊಮ್ಮಗ ಪ್ರಜ್ವಲ್ ರೇವಣ್ಣನಿಗೆ ನೇಮಕಾತಿ ಪತ್ರ ನೀಡಿ ಆಶೀರ್ವದಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಸಂಘಟಿಸಲು ಶ್ರಮಿಸುವಂತೆ ಆದೇಶ ನೀಡಿದ್ದಾರೆ.
 
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಯಕೆಯನ್ನು ಈಗಾಗಲೇ ವ್ಯಕ್ತಪಡಿಸಿರುವ ಪ್ರಜ್ವಲ್, ತಮ್ಮ ಹೇಳಿಕೆಗಳ ವಿವಾದಗಳಿಂದಾಗಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕೆಂಗೆಣ್ಣಿಗೆ ಗುರಿಯಾಗಿದ್ದರು. 
 
ಎಚ್.ಡಿ. ರೇವಣ್ಣ ಅವರ ಪುತ್ರರಾಗಿರುವ ರೇವಣ್ಣ ಅವರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗುವ ಸಾಧ್ಯತೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪಾಕ್ ಗುಪ್ತಚರ ಸಂಸ್ಧೆ ಮಾಡದ್ದನ್ನು ಬಿಜೆಪಿ 3 ವರ್ಷಗಳಲ್ಲಿ ಮಾಡಿದೆ : ಕೇಜ್ರಿವಾಲ್

ನವದೆಹಲಿ: ಕಳೆದ 70 ವರ್ಷಗಳಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್‌ಐ ಸಾಧಿಸದ ಗುರಿಯನ್ನು ಬಿಜೆಪಿ ...

news

ಯುವತಿಯ ಮೇಲೆ ಅತ್ಯಾಚಾರವೆಸಗಿ ಆಕೆಯ ಪತಿಗೆ ವಿಡಿಯೋ ರವಾನಿಸಿದ ಕಾಮುಕ

ಕೋಲಾರ: ಕಳೆದ ಐದು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ 25 ವರ್ಷದ ಯುವಕನನ್ನು ...

news

ಝಡ್‌ ಶ್ರೇಣಿ ಭದ್ರತೆ: ತಂದೆಗೆ ಏನಾದ್ರೂ ಆದ್ರೆ ಪ್ರಧಾನಿ ಮೋದಿ ಚರ್ಮ ಸುಲಿಯುತ್ತೇವೆ ಎಂದು ಲಾಲು ಪುತ್ರ

ನವದೆಹಲಿ: ಕೇಂದ್ರ ಗೃಹಸಚಿವಾಲಯ ಬಿಹಾರ್ ಮಾಜಿ ಸಿಎಂ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಝಡ್‌ ...

news

ಭ್ರಷ್ಟಾಚಾರ ಆರೋಪ ಸಾಬೀತಾದ್ರೆ ಜೈಲಿಗೆ ಹೋಗಲು ಸಿದ್ದ: ಜಿ.ಪರಮೇಶ್ವರ್

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರದ ಮೇಲಿನ ಭ್ರಷ್ಟಾಚಾರವನ್ನು ಬಿಜೆಪಿ ನಾಯಕರು ...

Widgets Magazine