ಅಮಿತ್ ಶಾ ಮೆಚ್ಚಿಸಲು ಉದ್ಧಟತನ ತೋರಿದ ಪ್ರತಾಪ ಸಿಂಹ : ಸಿಎಂ

ಬೆಂಗಳೂರು, ಸೋಮವಾರ, 4 ಡಿಸೆಂಬರ್ 2017 (13:41 IST)

 ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೆಚ್ಚಿಸಲು ಮೈಸೂರು ಸಂಸದ ಪ್ರತಾಪ್ ಸಿಂಹ್ ಇಂತಹ ಡ್ರಾಮಾ ಮಾಡಿದ್ದಾರೆ. ಇದರಿಂದ ಸಾಮಾನ್ಯ ಜನತೆಗೆ ಎಷ್ಟು ತೊಂದರೆಯಾಗಿದೆ ಎನ್ನುವ ಅರಿವಿದೆಯಾ ಪ್ರತಾಪ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಕೆಲ ತಿಂಗಳುಗಳ ಹಿಂದೆ ರಾಜ್ಯಕ್ಕೆ ಆಗಮಿಸಿದಾಗ ಬೈದಿದ್ದರಿಂದ ಅವರನ್ನು ಮೆಚ್ಚಿಸಲು ಉದ್ಧಟತನದ ವರ್ತನೆ ತೋರಿದ್ದಾರೆ ಎಂದು ಕಿಡಿಕಾರಿದ್ದಾರೆ.
 
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಮೆಚ್ಚಿಸಲು ಪ್ರತಾಪ್ ಸಿಂಹ ಉಗ್ರ ಹೋರಾಟ ನಡೆಸಿದರಾ ಎಂಬ ಅನುಮಾನ ಜನರನ್ನು ದಟ್ಟವಾಗಿ ಕಾಡತೊಡಗಿದೆ. ಉಗ್ರ ಹೋರಾಟಕ್ಕೆ ಅಮಿತ್ ಶಾ ಪ್ರಚೋದನೆ ನೀಡಿದ್ದಾರಾ ಎನ್ನುವ ಅನುಮಾನ ಕೂಡಾ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.
 
ಹನುಮಾನ ಜಯಂತಿ, ರಾಮಜಯಂತಿ ಮಾಡಲು ಯಾರು ತಡೆಮಾಡಲ್ಲ. ನಾವೆಲ್ಲರು ಹನುಮಂತ, ಶ್ರೀರಾಮನ ಭಕ್ತರೆ. ಆದರೆ, ಬಿಜೆಪಿಯವರದ್ದು ಜಯಂತಿಗಳ ಹೆಸರಲ್ಲಿ ಶಾಂತಿ ಸೌಹಾರ್ದತೆಯನ್ನು ಕದಡುವ ಉದ್ದೇಶವಾಗಿರುತ್ತದೆ.ಕೋಮುಗಲಭೆ ಸೃಷ್ಟಿಸುವ ಹುನ್ನಾರವಿರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಅಮಿತ್ ಶಾ ಪ್ರತಾಪ್ ಸಿಂಹ ಬಿಜೆಪಿ ಸಿಎಂ ಸಿದ್ದರಾಮಯ್ಯ Bjp Pratap Simha Amit Sha Cm Siddaramaiah

ಸುದ್ದಿಗಳು

news

ಸಂಸದ ಪ್ರತಾಪ್ ಸಿಂಹಗೆ ಎಸ್‌ಪಿ ಚನ್ನಣ್ಣನವರ್ ತಿರುಗೇಟು

ಬೆಂಗಳೂರು: ಆಳುವ ಪಕ್ಷದ ಆಳುಗಳು ಎನ್ನುವ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿರುವ ...

news

‘ಹನುಮ ಜಯಂತಿ ಆಚರಿಸಲು ಯಾರಪ್ಪನ ಅಪ್ಪಣೆ ಬೇಕು?’

ಬೆಂಗಳೂರು: ಹನುಮ ಜಯಂತಿ ಆಚರಣೆ ವೇಳೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸಿದ ಪ್ರಕರಣಕ್ಕೆ ...

news

ಹುಣಸೂರು ಬಂದ್ ವಾಪಸ್ ಪಡೆದ ಬಿಜೆಪಿ

ಬಿಜೆಪಿ ಸಂಸದ ಪ್ರತಾಪಸಿಂಹ ಅವರ ಬಂಧನ ಖಂಡಿಸಿ ಬಿಜೆಪಿ ಕರೆ ನೀಡಿದ್ದ ಹುಣಸೂರು ಬಂದನ್ನು ವಾಪಸ್ ...

news

ಯಡಿಯೂರಪ್ಪ ಅವರೇ ಮುಂದಿನ ಮುಖ್ಯಮಂತ್ರಿ- ಈಶ್ವರಪ್ಪ

ಬಿಜೆಪಿ ರಾಜ್ಯಾಧ್ಯಾಕ್ಷ ಬಿ.ಎಸ್.ಯಡಿಯೂರಪ್ಪ ಅವರೇ ಮುಂದಿನ ಮುಖ್ಯಮಂತ್ರಿ ಎಂದು ವಿಧಾನ ಪರಿಷತ್ ವಿಪಕ್ಷ ...

Widgets Magazine