ಮೈಸೂರಂದ್ರೆ ಮಹಾರಾಜರು ನೆನಪಾಗ್ತಿದ್ದರು, ಈಗ ಟಿಪ್ಪು ಸಂತತಿ ತುಂಬಿದೆ: ಪ್ರತಾಪ್ ಸಿಂಹ

ದಾವಣಗೆರೆ, ಬುಧವಾರ, 8 ನವೆಂಬರ್ 2017 (10:00 IST)

ದಾವಣಗೆರೆ: ಕರಾವಳಿ ಎಂದರೆ ರಾಣಿ ಅಬ್ಬಕ್ಕ ನೆನಪಾಗುತ್ತಿದ್ದರು, ಈಗ ಯಾಸಿನ್, ರಿಯಾಜ್ ಭಟ್ಕಳ್ ನೆನಪಾಗ್ತಾರೆ. ಮೈಸೂರು ಎಂದರೆ ಮಹಾರಾಜರು ನೆನಪಾಗ್ತಿದ್ದರು. ಆದ್ರೀಗ ಟಿಪ್ಪು ಸಂತತಿಯವರು ತುಂಬಿದ್ದಾರೆ ಎಂದು ಹೇಳಿದ್ದಾರೆ.


ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸರ್ಕಾರದಿಂದ ಪೊಲೀಸ್ ಇಲಾಖೆಯನ್ನ ದುರ್ಬಳಕೆ ಮಾಡಿಕೊಂಡಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಪೊಲೀಸ್ ಅಧಿಕಾರಿಗಳು ಸಾವಿಗೆ ಶರಣಾಗಿದ್ದಾರೆ. ಪೋಲೀಸ್ ಮೂಲಕ ನಮ್ಮ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಪ್ರಯತ್ನಿಸಿದೆ ಎಂದರು.

ಕರಾವಳಿ ಎಂದರೆ ಮೊದಲು ರಾಣಿ ಅಬ್ಬಕ್ಕ ನೆನಪಾಗುತ್ತಿದ್ದರು. ಈಗ ಯಾಸಿನ್, ರಿಯಾಜ್ ಭಟ್ಕಳ್ ನೆನಪಾಗ್ತಾರೆ. ಮೈಸೂರು ಎಂದರೆ ಮಹಾರಾಜರು ನೆನಪಾಗ್ತಿದ್ದರು. ಆದರೆ ಈಗ ಟಿಪ್ಪು ಸಂತತಿಯವರು ತುಂಬಿದ್ದಾರೆ. ಸರ್ಕಾರ ಟಿಪ್ಪು ಜಯಂತಿ ಆಚರಿಸುವ ಮೂಲಕ ಲಾಡೆನ್ ಹಾಗೂ ಉಲ್ ಉಮರ್ ಸಂತತಿ ಹೆಚ್ಚು ಮಾಡಲು ಹೊರಟಿದೆ ಎಂದರು.

ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಒಬ್ಬ ಸಭ್ಯ ರಾಜಕಾರಣಿ ಎಂದು ಹೊಗಳಿದ ಸಿಂಹ, ದಲಿತರನ್ನು ಸಿಎಂ ಮಾಡಲು ಕಾಂಗ್ರೆಸ್ ನಿಂದ ಸಾಧ್ಯವಾಗಿಲ್ಲ. ಸಿದ್ದರಾಮಯ್ಯ ರಾಜಕೀಯ ಕುತಂತ್ರಕ್ಕೆ ದಲಿತರು ತತ್ತರಿಸಿದ್ದಾರೆ. ಹೀಗಾಗಿ ಪರಮೇಶ್ವರ್ ಬೇಸರದ ಹೇಳಿಕೆ ನಿಡುತ್ತಿದ್ದಾರೆ ಎಂದು ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಮಿತಿಮೀರಿದ್ದು, ಶಾಲಾ ಕಾಲೇಜುಗಳಿಗೆ ರಜೆ ...

news

ನೋಟು ಅಮಾನ್ಯ ಕ್ರಮ ಎಷ್ಟು ಸರಿ ಎಂದು ಪ್ರಧಾನಿಗೆ ನೀವೇ ಹೇಳಿ!

ನವದೆಹಲಿ: ನೋಟು ಅಮಾನ್ಯಗೊಂಡು ವರ್ಷ ತುಂಬಿದ ಹಿನ್ನಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ನೋಟು ...

news

ರಾಜ್ಯಕ್ಕೆ ಕತ್ತಲೆ ಭಾಗ್ಯ: ಮಳೆಗಾಲ ಮುಗಿಯುವ ಮುನ್ನವೇ ವಿದ್ಯುತ್ ಬರ

ಬೆಂಗಳೂರು: ಅನಿಯಮಿತ ವಿದ್ಯುತ್ ಕಡಿತ ಮಾಡುವುದಾಗಿ ಬೆಸ್ಕಾಂ ಪತ್ರದಲ್ಲಿ ತಿಳಿಸಿದ್ದು, ಮಳೆಗಾಲ ಮುಗಿಯುವ ...

news

ನೋಟು ನಿಷೇಧಕ್ಕೆ ವರ್ಷ ಒಂದು: ರಾಹುಲ್ ಗಾಂಧಿ ಹೇಳಿದ್ದೇನು ಗೊತ್ತಾ?

ನವದೆಹಲಿ: ನೋಟು ನಿಷೇಧಗೊಂಡು ಇಂದಿಗೆ ಒಂದು ವರ್ಷ ತುಂಬಿದೆ. ಈ ಹಿನ್ನಲೆಯಲ್ಲಿ ಈ ಕ್ರಮದ ಬಗ್ಗೆ ವ್ಯಾಪಕ ...

Widgets Magazine
Widgets Magazine