ಗೌರಿ ಲಂಕೇಶ್ ಹತ್ಯೆ ಕೇಸ್: ರಾಘವೇಶ್ವರ ಶ್ರೀ ವಿರುದ್ಧ ತನಿಖೆಗೆ ಪ್ರೇಮಲತಾ ದೂರು..?

ಬೆಂಗಳೂರು, ಶನಿವಾರ, 16 ಸೆಪ್ಟಂಬರ್ 2017 (15:20 IST)

ಪತ್ರಕರ್ತೆ ಗೌರಿ ಲಂಕೆಶ್ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ರಾಘವೇಶ್ವರ ಶ್ರೀಗಳ ವಿರುದ್ಧ ಪ್ರೇಮಲತಾ ದಿವಾಕರ್ ಶಾಸ್ತ್ರೀ ದಂಪತಿ ದೂರು ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.


ಹೌದು, ಗೌರಿ ಹತ್ಯೆಯಾದ ಕೆಲವೇ ದಿನಗಳಲ್ಲಿ ಎಸ್`ಐಟಿ ಅಧಿಕಾರಿಗಳನ್ನ ಭೇಟಿ ಮಾಡಿದ್ದ ಪ್ರೇಮಲತಾ ದಂಪತಿ 500 ದಾಖಲೆಗಳನ್ನ ನೀಡಿದ್ದಾರೆ. ರಾಮಚಂದ್ರಾಪುರ ಮಠದ ವಿರುದ್ಧ ಗೌರಿ ಲಂಕೇಶ್ ಬರೆದಿದ್ದ ಲೇಖನಗಳು ಸೇರಿದಂತೆ ಕೆಲ ದಾಖಲೆಗಳನ್ನ ನೀಡಿ ಸಂಶಯದ ಮೇಲೆ ತನಿಖೆ ಕೈಗೊಳ್ಳುವಂತೆ ದೂರು ನೀಡಿದ್ದಾರೆಂದು ತಿಳಿದು ಬಂದಿದೆ. ಆದರೆ, ಪ್ರೇಮಲತಾ ನೀಡಿರುವ ದಾಖಲೆಗಳನ್ನ ಎಸ್`ಐಟಿ ಸಂಪೂರ್ಣ ತನಿಖೆ ನಡೆಸಿದ್ದು, ಯಾವುದೇ ಸೂಕ್ತ ಸಾಕ್ಷಿಗಳು ಸಿಕ್ಕಿಲ್ಲ ಎನ್ನಲಾಗಿದೆ.

ಈ ಮಧ್ಯೆ, ಹಂತಕರ ಬಗ್ಗೆ ಸುಳಿವು ನೀಡುವಂತೆ ಎಸ್ಐಟಿ ನೀಡಿದ್ದ ದೂರವಾಣಿಗೆ ಬರುತ್ತಿರುವ ಕರೆಗಳು ತಲೆ ನೋವಾಗಿರುವುದಾಗಿಯೂ ಸಹ ತಿಳಿದು ಬಂದಿದೆ. ಯಾರಿಂದಲೂ ಸೂಕ್ತ ಸುಳಿವು ಲಭ್ಯವಾಗುತ್ತಿಲ್ಲ. ಅದರ ಬದಲು ಬಿಟ್ಟಿ ಸಲಹೆಗಳನ್ನ ನೀಡುತ್ತಿದ್ದಾರೆ. ಹಲವರು ಶ್ರೀಗಳ ವಿರುದ್ಧ ತನಿಖೆ ನಡೆಸುವಂತೆ ಸಂಶಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
  
 
  ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿ ತಂತ್ರಕ್ಕೆ ಕಾಂಗ್ರೆಸ್ ಪ್ರತಿತಂತ್ರ: ಕೆ.ಸಿ.ವೇಣುಗೋಪಾಲ್

ಬೆಂಗಳೂರು: ಬಿಜೆಪಿ ತಂತ್ರಕ್ಕೆ ಕಾಂಗ್ರೆಸ್ ಪ್ರತಿತಂತ್ರ ಹೆಣೆಯಲು ಸಿದ್ದವಾಗಿದೆ ಎಂದು ರಾಜ್ಯ ಕಾಂಗ್ರೆಸ್ ...

news

ರಾಜ್ಯದಲ್ಲಿ ಇನ್ನೆಷ್ಟು ಸಾವಾಗಬೇಕು ಸಿದ್ದರಾಮಯ್ಯನವರೇ?: ಬಿಎಸ್‌ವೈ ಆಕ್ರೋಶ

ಬೆಂಗಳೂರು: ರಾಜ್ಯದಲ್ಲಿ ಎರಡು ಸಾವಿರ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಿಂದು ಪರ ನಾಯಕರ ...

news

ಸಿಎಂ ಸಿದ್ದರಾಮಯ್ಯರೊಂದಿಗೆ ಭಿನ್ನಾಭಿಪ್ರಾಯವಿಲ್ಲ: ಪರಮೇಶ್ವರ್ ಸ್ಪಷ್ಟನೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯರೊಂದಿಗೆ ಭಿನ್ನಾಭಿಪ್ರಾಯವಿಲ್ಲ. ಮಾಧ್ಯಮ ವರದಿಗಳು ಕಪೋಲಕಲ್ಪಿತವಾಗಿವೆ ...

news

ಗೌರಿ ಲಂಕೇಶ್ ಹತ್ಯೆ ಕೇಸ್: ಆಪರೇಶನ್ DTSI ಆರಂಭಿಸಿದ ಎಸ್`ಐಟಿ

ಗೌರಿ ಲಂಕೇಶ್ ತನಿಖೆಯನ್ನ ತೀವ್ರಗೊಳಿಸಿರುವ ಎಸ್ಐಟಿ ಅಧಿಕಾರಿಗಳು ಇದೀಗ ಆಪರೇಶನ್ 150 ಡಿಟೆಸ್ ಐ ...

Widgets Magazine
Widgets Magazine