ರಾಷ್ಟ್ರಪತಿ ಆಡಳಿತ ಜಾರಿ: ಮಾಧ್ಯಮ ಸೃಷ್ಠಿ ಎಂದ ಹೆಚ್.ಡಿ.ಕೆ

ಮೈಸೂರು, ಸೋಮವಾರ, 14 ಜನವರಿ 2019 (15:50 IST)

  ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರನ್ನು ಕ್ಲರ್ಕ್ ಎಂದ ಪ್ರಧಾನಿ ಹೇಳಿಕೆ ಬೆನ್ನಲ್ಲೇ ರಾಜ್ಯದಲ್ಲಿ ಜಾರಿಗೆ ಬರುತ್ತದೆ ಎಂಬ ಗಾಳಿಸುದ್ದಿ ಬಲವಾಗಿ ಹರಿದಾಡಲಾರಂಭಿಸಿದೆ. ಇದಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ನಿಜವಾಗಿಯೂ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಗೆ ಜಾರಿಗೆ ಬರುವುದಿಲ್ಲ. ಇದೇನಿದ್ದರೂ ಮಾಧ್ಯಮಗಳ ಸೃಷ್ಠಿಯಾಗಿದೆ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿರುವ  ಅವರು,  ಕೆಲವು ಮಾಧ್ಯಮಗಳು ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಳ್ಳುತ್ತದೆ. ಆಗ ರಾಷ್ಟ್ರಪತಿ ಆಡಳಿತ ಜಾರಿಗೆ ಬರಲಿದೆ ಎಂದು ಈಚೆಗೆ ವರದಿ ಮಾಡುತ್ತಲೇ ಇವೆ.  ನಿಜಕ್ಕೂ ವರದಿಗಳು ಸುಳ್ಳಿನಿಂದ ಕೂಡಿವೆ.  ಸಮ್ಮಿಶ್ರ ಸರ್ಕಾರ ಸಧೃಢವಾಗಿದ್ದು 5 ವರ್ಷಗಳ ಕಾಲ ಆಡಳಿತ ನಡೆಸುತ್ತದೆ. ಇದರಲ್ಲಿ ಯಾವುದೇ ಅನುಮಾನ ಪಡುವ ಅವಶ್ಯಕತೆ ಇಲ್ಲ ಎಂದರು.

ಜೆ.ಡಿ.ಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ವರಿಷ್ಠರು ಮಾಡಿಕೊಂಡಿರುವ ಒಪ್ಪಂದದಂತೆ ನಡೆದುಕೊಳ್ಳುವುದರಿಂದ ಇಂತಹ ಗಾಳಿ ಸುದ್ದಿಗಳಿಗೆ ರಾಜ್ಯದ ಜನತೆ ಕಿವಿಗೊಡಬಾರದೆಂದು ಕುಮಾರಸ್ವಾಮಿ ಹೇಳಿದ್ದಾರೆ.





ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೋದಿ ಆಡಳಿತವನ್ನು ಕೊನೆಗೊಳಿಸುವ ಸಾಮರ್ಥ್ಯವಿರುವ ಏಕೈಕ ಪಕ್ಷ ಯಾವುದು ಗೊತ್ತಾ?

ಲಖನೌ : ಮೋದಿ ಆಡಳಿತವನ್ನು ಕೊನೆಗೊಳಿಸುವ ಸಾಮಾರ್ಥ್ಯವಿರುವ ಏಕೈಕ ಪಕ್ಷವೆಂದರೆ ಅದು ಕಾಂಗ್ರೆಸ್ ಎಂದು ...

news

ಮಹಿಳೆ ಮಾತಾಡಲಿಲ್ಲವೆಂದು ಪ್ಯಾಂಟ್ ಬಿಚ್ಚಿ ಮರ್ಮಾಂಗ ಪ್ರದರ್ಶನ ಮಾಡಿದ ಕಾಮುಕ ಅರೆಸ್ಟ್

ಬೆಂಗಳೂರು : ಕಾಮುಕನೊಬ್ಬ ಮಹಿಳೆ ಮಾತಾಡಲಿಲ್ಲ ಅಂತ ರಸ್ತೆಯಲ್ಲೆ ಪ್ಯಾಂಟ್ ಬಿಚ್ಚಿ ವಿಕೃತಿ ಮೆರೆದ ಘಟನೆ ...

news

ಸಂಕ್ರಾಂತಿಗೆ ಯಾವ ಕ್ರಾಂತಿಯೂ ಆಗಲ್ಲ ಎಂದ ಶಾಸಕ

ಸಂಕ್ರಾಂತಿಗೆ ಸೂರ್ಯ ಮಾತ್ರ ತನ್ನ ಪಥ ಬದಲಾಯಿಸುತ್ತಾನೆ. ಸರ್ಕಾರ ಮತ್ತು ರಾಜ್ಯ ರಾಜಕಾರಣದಲ್ಲಿ ಯಾವುದೇ ...

news

ಇನ್ಮುಂದೆ 5-8ನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸ್ ಆದರೆ ಮಾತ್ರ ಮುಂದಿನ ತರಗತಿಗೆ ತೇರ್ಗಡೆ-ಕೇಂದ್ರ ಸರ್ಕಾರ

ನವದೆಹಲಿ : ಒಂದನೇ ತರಗತಿಯಿಂದ ಎಂಟನೇ ತರಗತಿವರೆಗೆ ಮಕ್ಕಳನ್ನು ಫೇಲ್ ಮಾಡಬಾರದು ಎಂಬ 2009ರಲ್ಲಿ ಯುಪಿಎ ...